ದರ್ಶನ್ ಸಹಾಯ ಮಾಡುವ ಗುಣವನ್ನು ಮೆಚ್ಚಿದ 'ವೆನಿಲ್ಲಾ' ಹುಡುಗ
Recommended Video

ವೆನಿಲ್ಲಾ ಹುಡುಗ ದರ್ಶನ್ ಬಗ್ಗೆ ಏನ್ ಹೇಳುದ್ರು ಗೊತ್ತಾ? | Filmibeat Kannada
ಚಿತ್ರರಂಗಕ್ಕೆ ಬಂದ ಯುವ ಕಲಾವಿದರಿಗೆ ಮುಖ್ಯವಾಗಿ ಪ್ರೋತ್ಸಾಹ ಬೇಕಾಗುತ್ತದೆ. ಸದ್ಯ ಕನ್ನಡ ಚಿತ್ರರಂಗಕ್ಕೆ ನಟ ಅವಿನಾಶ್ ಬಂದಿದ್ದಾರೆ. ಅವರ 'ವೆನಿಲ್ಲಾ' ಸಿನಿಮಾ ನಾಳೆ ಬಿಡುಗಡೆಯಾಗುತ್ತಿದೆ.
ಇನ್ನು ತಮ್ಮ 'ವೆನಿಲ್ಲಾ' ಸಿನಿಮಾದ ಬಗ್ಗೆ 'ಫಿಲ್ಮಿಬೀಟ್ ಕನ್ನಡ' ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಅವಿನಾಶ್ ನಟ ದರ್ಶನ್ ಅವರ ಸಹಾಯದ ಗುಣವನ್ನು ನೆನೆದರು.
''ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ ತುಂಬ ಎತ್ತರದಲ್ಲಿ ಇದ್ದಾರೆ. ಅವರ ಬಗ್ಗೆ ಮಾತನಾಡಲು ನಾನು ಸಣ್ಣವನು. ಆದರೆ ನಾವು ನಮ್ಮ ಸಿನಿಮಾ ಬಗ್ಗೆ ಅವರ ಬಳಿ ಹೇಳಿಕೊಂಡಗ ಅವರು ಎಷ್ಟು ಹಂಬಲ್ ಆಗಿ ಬಂದು ಆಡಿಯೋ ರಿಲೀಸ್ ಮಾಡಿ ಕೊಟ್ಟರು. ನಾವು ಇನ್ನೂ ಹೊಸಬರು ಎನ್ನುವ ಭಾವ ಅವರಲ್ಲಿ ಇರಲಿಲ್ಲ. ಆಡಿಯೋ ಟ್ರೇಲರ್ ಎರಡನ್ನು ನೋಡಿ ಇಷ್ಟ ಪಟ್ಟರು.'' ಎಂದು ದರ್ಶನ್ ಅವರಿಗೆ ಧನ್ಯವಾದ ತಿಳಿಸಿದರು.

ಅಂದಹಾಗೆ, ನಾಳೆ ಬಿಡುಗಡೆಯಾಗುವ 'ವೆನಿಲ್ಲಾ' ಸಿನಿಮಾದ ಬಗ್ಗೆ ನಟ ಅವಿನಾಶ್ ಮತ್ತು ನಟಿ ಸ್ವಾತಿ ಮಾತನಾಡಿದ್ದಾರೆ. ಅವರ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ...
More from Filmibeat
English summary
Vanilla kannada movie hero Avinash thanked Challenging Star Darshan. 'Beautiful Manasugalu' movie fame director Jayatheertha's 'Vanilla' kannada movie will releasing on june 1st.


Click it and Unblock the Notifications











