ಪ್ರೇಕ್ಷಕ ಮತ್ತು ವಿಮರ್ಶಕ ಇಬ್ಬರನ್ನು ಸಂತೃಪ್ತಿ ಪಡಿಸಿದ 'ವೆನಿಲ್ಲಾ'
ಕೆಲವು ಸಿನಿಮಾಗಳು ಪ್ರೇಕ್ಷಕರ ಮನಸ್ಸನ್ನು ಗೆಲ್ಲುತ್ತದೆ, ಕೆಲವು ಸಿನಿಮಾಗಳು ವಿಮರ್ಶಕರಿಗೆ ಇಷ್ಟ ಆಗುತ್ತದೆ. ಆದರೆ ಕೆಲವೇ ಕೆಲವು ಸಿನಿಮಾಗಳು ಪ್ರೇಕ್ಷಕ ಮತ್ತು ವಿಮರ್ಶಕ ಇಬ್ಬರಿಗೂ ಇಷ್ಟ ಆಗುತ್ತದೆ. ಆ ರೀತಿ ಸದ್ಯ ಇಬ್ಬರನ್ನು ಸಂತೃಪ್ತಿ ಪಡಿಸಿದ ಸಿನಿಮಾ 'ವೆನಿಲ್ಲಾ'
'ವೆನಿಲ್ಲಾ' ಸಿನಿಮಾ ಕಳೆದ ಶುಕ್ರವಾರವಷ್ಟೇ ರಿಲೀಸ್ ಆಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾಗೆ ದೊಡ್ಡ ಮಟ್ಟದ ಪ್ರತಿಕ್ರಿಯೆ ಸಿಗುತ್ತಿದೆ. ಸಿನಿಮಾ ನೋಡಿದ ಅನೇಕರು ಚಿತ್ರದ ಬಗ್ಗೆ ಫೇಸ್ ಬುಕ್ ನಲ್ಲಿ ಬರೆದುಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ನಿರ್ದೇಶಕ ಜಯತೀರ್ಥ ಅವರ ಪ್ರಯತ್ನವನ್ನು ಜನ ಗೆಲ್ಲಿಸಿದ್ದಾರೆ.

ಹಾಗೆ ನೋಡಿದರೆ, 'ವೆನಿಲ್ಲಾ' ಸಿನಿಮಾದಲ್ಲಿರುವುದು ಹೊಸ ನಾಯಕ ನಟ ಮತ್ತು ಹೊಸ ನಾಯಕ ನಟಿ ಆದರೂ ಕೂಡ ಈ ಸಿನಿಮಾಕ್ಕೆ ಒಳ್ಳೆಯ ಟಾಕ್ ಇದೆ. ಮುಖ್ಯವಾಗಿ ಸಿನಿಮಾದ ಕಥೆ ಮತ್ತು ನಿರೂಪಣಾ ಶೈಲಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಬಹುತೇಕ ಎಲ್ಲ ಪತ್ರಿಕೆಗಳು ಸಿನಿಮಾವನ್ನು ಕೊಂಡಾಡಿವೆ. ಇದು ಚಿತ್ರತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.

ಇನ್ನು, 'ಟಗರು' ಸಿನಿಮಾ ನಂತರ ಬಂದ ಸಿನಿಮಾಗಳ ಪೈಕಿ 'Rambo 2' ಜನರ ಗಮನ ಸೆಳೆಸಿತ್ತು. ಅದರ ನಂತರ 'ವೆನಿಲ್ಲಾ' ಕೂಡ ಭದ್ರವಾಗಿ ನಿಂತಿದೆ. ನಿನ್ನೆ ಸಿನಿಮಾವನ್ನು 'ಬೆಲ್ ಬಾಟಂ' ಚಿತ್ರತಂಡ ಕೂಡ ವೀಕ್ಷಿಸಿದೆ.


Click it and Unblock the Notifications











