ಸಿಹಿಯಾದ, ರುಚಿಯಾದ 'ವೆನಿಲ್ಲಾ' ಈಗ ಸವಿಯಲು ಸಿದ್ಧ

By Naveen

ಕನ್ನಡದ ಪ್ರತಿಭಾವಂತ ನಿರ್ದೇಶಕರ ಪೈಕಿ ಒಬ್ಬರಾದ ಜಯತೀರ್ಥ ತಮ್ಮ 'ಬ್ಯೂಟಿಫುಲ್ ಮನಸುಗಳು' ಚಿತ್ರದ ನಂತರ 'ವೆನಿಲ್ಲಾ' ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈಗಾಗಲೇ ಈ ಸಿನಿಮಾದ ಹಾಡುಗಳು ಮತ್ತು ಟ್ರೇಲರ್ ರಿಲೀಸ್ ಆಗಿ ನಿರೀಕ್ಷೆ ಹುಟ್ಟಿಸಿವೆ. ಇನ್ನು 'ವೆನಿಲ್ಲಾ' ಈಗ ಸವಿಯಲು ಸಿದ್ಧವಾಗಿದ್ದು, ಸಿನಿಮಾ ಜೂನ್ 1ಕ್ಕೆ ಬಿಡುಗಡೆಯಾಗಲಿದೆ.

'ವೆನಿಲ್ಲಾ' ಒಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಅವಿನಾಶ್ ಈ ಚಿತ್ರದಲ್ಲಿ ನಾಯಕರಾಗಿದ್ದು, ಇದು ಅವರ ಮೊದಲ ಸಿನಿವಾಗಿದೆ. ಸ್ವಾತಿ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಹಿಂದೆ 'ಬ್ಯೂಟಿಫುಲ್ ಮನಸುಗಳು' ಚಿತ್ರದಲ್ಲಿ ಅವರು ಸಣ್ಣ ಪಾತ್ರ ಮಾಡಿದ್ದರು. ಇನ್ನು ತೆರೆ ಮೇಲೆ ಈ ಜೋಡಿ ತುಂಬ ಚೆನ್ನಾಗಿ ಕಾಣಿಸುತ್ತದೆ.

Vanilla kannada movie will releasing on june1st.

ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು ಅವರು ನಿರ್ಮಿಸಿರುವ 'ವೆನಿಲ್ಲಾ' ಚಿತ್ರವನ್ನ ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ರವಿಶಂಕರ್ ಗೌಡ, ಪಾವನ, ಬಿ.ಸುರೇಶ್, ರೆಹಮಾನ್, ಗಿರಿ, ನಂದ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದ ಹಾಡೊಂದರ ಚಿತ್ರೀಕರಣ ವಿದೇಶದಲ್ಲಿ ನಡೆದಿದೆ.

Vanilla kannada movie will releasing on june1st.

ಚಿತ್ರಕ್ಕೆ ಬಿ.ಜೆ.ಭರತ್ ಸಂಗೀತ ನೀಡಿದ್ದಾರೆ. ಮದನ್ ಬೆಳ್ಳಿಸಾಲು ಅವರ ಸಾಹಿತ್ಯ ಒಂದು ಹಾಡಿನಲ್ಲಿದೆ. 'ನಮ್ಮೂರಲ್ಲಿ ಚಳಿಗಾಲದಲ್ಲಿ..' ಹಾಡಿನ ದೊಡ್ಡ ಯಶಸ್ಸಿನ ನಂತರ ಮತ್ತೆ ಭರತ್ ಮ್ಯೂಸಿಕ್ ಗೆ ಮದನ್ ಮುದ್ದಾದ ಪದಗಳನ್ನು ಪೋಣಿಸಿದ್ದಾರೆ. ಮತ್ತೊಂದು ಹಾಡನ್ನು ಜಯಂತ್ ಕಾಯ್ಕಿಣಿ ಬರೆದಿದ್ದಾರೆ. ಸಿನಿಮಾದ ಎಲ್ಲ ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಸಿಕ್ಕಿದೆ. ಅದರಲ್ಲಿಯೂ 'ಆವರಿಸು ಬಾ ಮೆಲ್ಲನೆ..' ಹಾಡು ಎಲ್ಲರ ಫೇವರೇಟ್ ಆಗಿದೆ. ಅಂದಹಾಗೆ, 'ವೆನಿಲ್ಲಾ' ಸಿನಿಮಾ ಜೂನ್ 1 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗಲಿದೆ.

More from Filmibeat

English summary
'Beautiful Manasugalu' movie fame director Jayatheertha's 'Vanilla' kannada movie will releasing on june 1st.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X