»   » ಈಗ ಆಕೆ ಇರುವುದಾದರೂ ಎಲ್ಲಿ?

ಈಗ ಆಕೆ ಇರುವುದಾದರೂ ಎಲ್ಲಿ?

Posted By: Staff
Subscribe to Filmibeat Kannada

ವಾಣಿಶ್ರೀ ಎಂಬ ಕನ್ನಡ ಸಿನಿಮಾಗಳ ತಂಗಿ ಹಾಗೂ ಕಿರುತೆರೆಯ ಮಾಜಿ ಅಂಗಿ ಮಾಯವಾದದ್ದಾದರೂ ಹೇಗೆ?

ಹೌದು, ಈಗ ಈಕೆಯನ್ನು ಸಿನಿಮಾ ನಿರ್ಮಾಪಕರು ಹಾಗೂ ಟಿವಿ ಸೀರಿಯಲ್ಲಿಗಳು ದುರ್ಬೀನು ಹಾಕಿಕೊಂಡು ಹುಡುಕುತ್ತಿದ್ದಾರೆ. ಒಂದು ಮದುವೆ ಮುರಿದುಕೊಂಡು, ಇನ್ನೊಂದು ಸೂರಿನಡಿ ಪ್ಲಾಂಟರ್‌ ಒಬ್ಬನ ಜೊತೆಯಲ್ಲಿ ಫ್ಲ್ಯಾಷ್‌ಬ್ಯಾಕ್‌ ಮೆಲುಕು ಹಾಕುತ್ತಾ, ವಾಣಿಶ್ರೀ ಒರಲುತ್ತಿದ್ದಾರಂತೆ.

ಸಾಮಾನ್ಯವಾಗಿ ಕಿರುತೆರೆಯ ನಟಿಯರು ಮದುವೆಯಾದರೆ, ಯಾವುದಾದರೂ ಪತ್ರಿಕೆಯ ಒಳಪುಟಗಳಲ್ಲಾದರೂ ಸುದ್ದಿಯಾಗುತ್ತಾರೆ. ಆದರೆ ವಾಣಿಶ್ರೀ ಮದುವೆಯಾದದ್ದಾಗಲೀ ಮಾಯವಾದದ್ದಾಗಲೀ ಸದ್ದೇ ಮಾಡಲಿಲ್ಲ. ಸುಮಾರಾಗಿ ಸಂಪಾದನೆ ಮಾಡುತ್ತಿದ್ದ ಅಡ್ವರ್ಟೈಸಿಂಗ್‌ ಎಕ್ಸಿಕ್ಯುಟಿವ್‌ ಒಬ್ಬನನ್ನು ವಾಣಿಶ್ರೀ ಮೆಚ್ಚಿಕೊಂಡರು. ಮನೆಯವರನ್ನು ಎದುರು ಹಾಕಿಕೊಂಡರೂ, ಮದುವೆಯಾಗಿ ಪ್ರೀತಿಗೆ ಜೈ ಎಂದರು. ಮದುವೆಯಾಗಿ ಕೆಲವೇ ತಿಂಗಳಿಲ್ಲ ನೋಡಿರಣ್ಣಾ ಹೇಗಿದೆ- 'ಕೇಳಿದ್ದನ್ನ ಕೊಡಿಸದ ಗಂಡ ಸಾಕಪ್ಪಾ ಸಾಕು ಅಂತ ಹೊರನಡೆದೆ". ಆಪ್ತರಲ್ಲಿ ವಾಣಿಶ್ರೀ ಹೇಳಿಕೊಂಡದ್ದು ಹೀಗೆ.

ಪ್ರೇಮ ಪ್ರಕರಣದಲ್ಲಿ, ಮದುವೆಯಾಗುವುದರಲ್ಲಿ ತಲ್ಲೀನಳಾದ ವಾಣಿಶ್ರೀ ಹಿರಿತೆರೆ, ಕಿರುತೆರೆಯಿಂದ ಕೊಂಚ ಕಾಲ ಹೊರಗುಳಿದರು. ಪ್ರಾಯಶಃ ಅದು ಪರ್ಮನೆಂಟಾಗುತ್ತದೆ ಅನ್ನುವುದು ಅವರಿಗಾಗ ಗೊತ್ತಿರಲಿಕ್ಕಿಲ್ಲ. ಆಮೇಲೆ ಅಲ್ಲೂ ಇಲ್ಲ ಇಲ್ಲೂ ಇಲ್ಲ ಅನ್ನುವಂತಾಗಿ, ತಲೆ ಮೇಲೆ ಕೈಹೊತ್ತು ಕೂತಿದ್ದಾಗ ಪ್ಲಾಂಟರ್‌ ಒಬ್ಬನ ಎಂಟ್ರಿ. ಈತ ವಾಣಿಶ್ರೀಯ ಹೊಸ ಸಾಥಿ. ತನ್ನ ಸಂಪಾದನೆಯ ದುಡ್ಡಿನಿಂದ ವಾಣಿಶ್ರೀ ಒಂದು ಫ್ಲಾಟನ್ನು ಖರೀದಿಸಿ, ಹೊಸ ಸಾಥಿಯ ಜೊತೆ ದುಃಖ ತೋಡಿಕೊಳ್ಳುತ್ತಿದ್ದಾರೆ.

ಇವೆಲ್ಲದರ ನಡುವೆಯೇ, ಉದಯ ಟಿವಿಯಲ್ಲಿ ಬರುತ್ತಿರುವ ವಠಾರ ದೈನಿಕ ಧಾರಾವಾಹಿ ಮೂಲಕ ವಾಣಿಶ್ರೀ ತರಹವೇ ಇರುವ ಹುಡುಗಿಯಾಬ್ಬಳು ಚಾಲ್ತಿಗೆ ಬಂದುಬಿಟ್ಟಳು. ವಾಣಿಶ್ರೀಗಿಂತ ತುಸು ಕಡಿಮೆ ಬಣ್ಣ, ಆಕೆಗಿಂತ ಸಾಕಷ್ಟು ಸಣ್ಣ, ಅವಳಂತೆ ಇವಳಿಗೂ ಕೆನ್ನೆ ಮೇಲೆ ಗುಳಿಯಣ್ಣಾ. ಅಂದಹಾಗೆ, ವಾಣಿಶ್ರೀ ಸ್ಥಾನವನ್ನು ಯಶಸ್ವಿಯಾಗಿ ತುಂಬಿಕೊಂಡಿರುವ ಈ ಹುಡುಗಿ ಆಕೆಯ ತಂಗಿ!

English summary
TV star and Kannada filmsister Vanishree is invisible these days. Where is she?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada