»   » ಚಿತ್ರದ ಮುಹೂರ್ತದ ದಿನವೇ ನಗ್ನನಾಗಿ ಬಂದ ಸ್ಯಾಂಡಲ್ ವುಡ್ ನಾಯಕ

ಚಿತ್ರದ ಮುಹೂರ್ತದ ದಿನವೇ ನಗ್ನನಾಗಿ ಬಂದ ಸ್ಯಾಂಡಲ್ ವುಡ್ ನಾಯಕ

Posted By:
Subscribe to Filmibeat Kannada

ಸಾಕಷ್ಟು ಜನರು ಸಿನಿಮಾರಂಗಕ್ಕೆ ಕಾಲಿಡುವ ಮುಂಚೆಯೇ ಚಿತ್ರರಂಗದಲ್ಲಿ ಗೆಲ್ಲಬೇಕು. ಎಲ್ಲರಿಗೂ ಮೆಚ್ಚುಗೆ ಆಗುವಂತಹ ಸಿನಿಮಾವನ್ನ ನಿರ್ದೇಶನ ಮಾಡಬೇಕು ಅಂತೆಲ್ಲ ಆಸೆಗಳನ್ನು ಇಟ್ಟುಕೊಂಡಿರುತ್ತಾರೆ. ಅಂತದ್ದೆ ಹೊಸ ಚಿತ್ರತಂಡ ವಿಶಿಷ್ಟ ಹಾಗೂ ವಿಭಿನ್ನವಾದ ಕೆಲಸಕ್ಕೆ ಮುಂದಾಗಿದ್ದು ಇದನ್ನ ನೋಡಿದ ಗಾಂಧಿನಗರದ ಮಂದಿ ಗಾಬರಿ ಆಗಿದ್ದಾರೆ.

ಇವತ್ತು ಸೆಟ್ಟೇರಿರುವ 'ರೌಡಿ ಸುಬ್ಬು' ಸಿನಿಮಾತಂಡ ಮಹೂರ್ತ ಮುಗಿಸಿದ ತಕ್ಷಣವೇ ಚಿತ್ರದ ಫಸ್ಟ್ ಸೀನ್ ಚಿತ್ರೀಕರಿಸಲು ಮುಂದಾಗಿದೆ. ಇದರಲ್ಲಿ ವಿಶೇಷ ಏನು ಅಂದರೆ ನಾಯಕ ವರ್ಧನ್ ಚಿತ್ರದ ಮೊದಲ ಸೀನ್ ಗಾಗಿ ಸಂಪೂರ್ಣ ನಗ್ನರಾಗಿ ಕ್ಯಾಮೆರಾ ಮುಂದೆ ಬಂದಿದ್ದಾರೆ.

Varadhan has acted naked in Rowdy Subbu movie

ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ಈ ದೃಶ್ಯವನ್ನ ಚಿತ್ರೀಕರಿಸಲಾಗಿದೆ. ನೈಜ್ಯತೆ ಇರಲಿ ಎನ್ನುವ ಉದ್ದೇಶದಿಂದ ಈ ರೀತಿಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ರೌಡಿ ಸುಬ್ಬು ಸಿನಿಮಾವನ್ನ ಪ್ರಸಾದ್ ರೆಡ್ಡಿ ನಿರ್ದೇಶನ ಮಾಡುತ್ತಿದ್ದಾರೆ. ಈ ರೀತಿಯಲ್ಲಿ ದೃಶ್ಯವನ್ನ ಚಿತ್ರೀಕರಿಸಬೇಕು ಎಂದು ಸಾಕಷ್ಟು ದಿನಗಳಿಂದಲೇ ಸಿನಿಮಾತಂಡ ಚರ್ಚೆ ಮಾಡಿದ್ದರಂತೆ. ನಾಯಕ ವರ್ಧನ್ ಇಂತಹ ಸೀನ್ ನಲ್ಲಿ ಅಭಿನಯಿಸ ಬೇಕೋ ಬೇಡವೋ ಎಂದು ಗೊಂದಲದಲ್ಲಿ ಇದ್ದರಂತೆ, ನಂತರ ಪಾತ್ರದ ಪ್ರಾಮುಖ್ಯತೆ ತಿಳಿದು ಅಭಿನಯಿಸಲು ಒಪ್ಪಿಗೆ ನೀಡಿದ್ದಾರೆ.

Varadhan has acted naked in Rowdy Subbu movie

ಇನ್ನು ಗಿಮಿಕ್ ಮಾಡಲು ಇಂತದೊಂದು ದೃಶ್ಯ ಸೃಷ್ಟಿ ಮಾಡಲಾಗಿದ್ಯ ಎನ್ನು ಪ್ರಶ್ನೆಗೆ ನಿರ್ದೇಶಕರ ಸಮರ್ಥನೆಯೇ ಬೇರೆ ಆಗಿದೆ. ಉತ್ತಮ ಸಿನಿಮಾ ನಿರ್ದೇಶನ ಮಾಡಲು ಬಂದಿದ್ದೇವೆ. ಸ್ಪರ್ಧಾತ್ಮಕ ಯುಗದಲ್ಲಿ ವಿಭಿನ್ನ ಚಿತ್ರ ನೀಡುವ ಉದ್ದೇಶವಷ್ಟೆ ನಮ್ಮದು ಅಂತಾರೆ. ಒಟ್ಟಾರೆ ವಿಭಿನ್ನ ಪ್ರಯತ್ನದ ಹೆಸರಿನಲ್ಲಿ ಪ್ರೇಕ್ಷಕ ಥಿಯೇಟರ್ ನಲ್ಲಿ ಕೂತು ಸಿನಿಮಾ ನೋಡಲಾರದಂತ ಪರಿಸ್ಥಿತಿ ನಿರ್ಮಾಣ ಆಗದಿದ್ದರೆ ಸಾಕು.

English summary
Kannada actor Vradhan has acted naked in Rowdy Subbu kannada movie, Rowdy Subbu movie muhurtha has been held today, prasad reddy directing the movie.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X