Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾ. ಪ್ರೀತಿ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಿಹಿ ಸುದ್ದಿ; ತೆಗೆದು ಹಾಕಲಾಗಿದ್ದ ಕಾಂತಾರ ಚಿತ್ರದ 'ವರಾಹ ರೂಪಂ' ಹಾಡು ಮತ್ತೆ ಬಂತು!
ಈ ವರ್ಷ ಚಿತ್ರಮಂದಿರಗಳಲ್ಲಿ ಹಾಗೂ ಹೊರಗೆ ಅತಿಹೆಚ್ಚು ಸದ್ದು ಮಾಡಿದ ಕಾಂತಾರ ಚಿತ್ರ ಕೋಟ್ಯಂತರ ರೂಪಾಯಿ ಗಳಿಕೆ ಮಾಡುವುದರ ಜತೆಗೆ ಕೆಲ ವಿಷಯಗಳ ಕುರಿತಾಗಿ ವಿವಾದವನ್ನು ಸಹ ಹುಟ್ಟುಹಾಕಿತ್ತು. ಈ ಪೈಕಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದು ಕೇರಳ ಮೂಲದ ಹಾಡು ಸಂಯೋಜಕರ ತಂಡವಾದ ಥೈಕ್ಕುಡಂ ಬ್ರಿಡ್ಜ್ ಹಾಗೂ ಮಾತೃಭೂಮಿ ಕಪ್ಪಾ ಟಿವಿ ಯುಟ್ಯೂಬ್ ಚಾನೆಲ್ ಮಾಡಿದ್ದ ಕೃತಿಚೌರ್ಯದ ಆರೋಪ.
ಹೌದು, ಕಾಂತಾರ ಚಿತ್ರದ ಉಸಿರು ಎಂದೇ ಹೇಳಬಹುದಾದ ವರಾಹ ರೂಪಂ ಹಾಡನ್ನು ನಮ್ಮ ನವರಸಮ್ ಆಲ್ಬಂ ಹಾಡಿನ ಟ್ಯೂನ್ ಅನ್ನು ಕದ್ದು ಮಾಡಲಾಗಿದೆ ಎಂದು ಥೈಕ್ಕುಡಂ ಬ್ರಿಡ್ಜ್ ಹಾಗೂ ಮಾತೃಭೂಮಿ ಕಪ್ಪಾ ಟಿವಿಯವರು ಆರೋಪಿಸಿ ಕೇರಳ ಸ್ಥಳೀಯ ನ್ಯಾಯಾಲಯಗಳಲ್ಲಿ ದೂರನ್ನೂ ಸಹ ದಾಖಲಿಸಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂಗೆ ಕೇರಳ ಸ್ಥಳೀಯ ನ್ಯಾಯಾಲಯ ಹೊಂಬಾಳೆ ಫಿಲ್ಮ್ಸ್ ಎಲ್ಲಿಯೂ ಸಹ ವರಾಹ ರೂಪಂ ಹಾಡನ್ನು ಬಳಸುವಂತಿಲ್ಲ ಎಂದು ತೀರ್ಪನ್ನು ನೀಡಿತ್ತು.
ಹೀಗಾಗಿ ಕಾಪಿರೈಟ್ ಅಡಿಯಲ್ಲಿ ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನಲ್ ಸೇರಿದಂತೆ ವಿವಿಧ ಮ್ಯೂಸಿಕ್ ಅಪ್ಲಿಕೇಶನ್‌ಗಳಿಂದ ವರಾಹ ರೂಪಂ ಹಾಡನ್ನು ತೆಗೆದು ಹಾಕಲಾಗಿತ್ತು. ಇನ್ನು ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಬಿಡುಗಡೆಯಾಗಿದ್ದ ಕಾಂತಾರ ಚಿತ್ರದಲ್ಲೂ ಸಹ ವರಾಹ ರೂಪಂ ಹಾಡಿನ ಟ್ಯೂನ್ ಅನ್ನು ಸಂಪೂರ್ಣವಾಗಿ ಬದಲಿಸಲಾಗಿತ್ತು. ಹೀಗಾಗಿ ಮತ್ತೆ ಈ ಹಾಡನ್ನು ಕೇಳಲಾಗುವುದಿಲ್ಲವ ಎಂಬ ಬೇಸರ ಪ್ರೇಕ್ಷಕರಲ್ಲಿ ಮೂಡಿತ್ತು ಹಾಗೂ ಕೇಸ್ ಹಾಕಿದವರಿಗೆ ಹಿಡಿ ಶಾಪವನ್ನೂ ಸಹ ಹಾಕಿದ್ರು. ಆದರೆ ಇದೀಗ ತೆಗೆಯಲ್ಪಟ್ಟಿದ್ದ ವರಾಹ ರೂಪಂ ಹಾಡು ಮತ್ತೆ ಬಂದಿದ್ದು, ಇಷ್ಟು ದಿನ ಹಾಡನ್ನು ಮಿಸ್ ಮಾಡಿಕೊಂಡವರು ಹಾಡನ್ನು ಮತ್ತೆ ಕೇಳಿ ಆನಂದಿಸಬಹುದಾಗಿದೆ.

ಹಾಡು ಎಲ್ಲಿ ಲಭ್ಯ?
ವರಾಹ ರೂಪಂ ಹಾಡಿನ ಮೇಲೆ ಹೂಡಲಾಗಿರುವ ದಾವೆಗೆ ಇನ್ನೂ ಸರಿಯಾದ ಅಂತ್ಯ ಸಿಗದಿದ್ದರೂ ಸಹ ಹೊಂಬಾಳೆ ಫಿಲ್ಮ್ಸ್ ಯುಟ್ಯೂನ್ ಚಾನೆಲ್‌ನಲ್ಲಿ ಇಂದು ( ಡಿಸೆಂಬರ್ 3 ) ಹಳೆಯ ಹಾಡು ಮತ್ತೆ ಕೇಳುಗರಿಗೆ ಲಭ್ಯವಾಗಿದೆ. ಥೈಕ್ಕುಡಂ ಬ್ರಿಡ್ಜ್ ಕೇಸ್ ಹಾಕಿದ್ದ ನಂತರ ಮಾಯವಾಗಿದ್ದ ಈ ಹಾಡು ಇದೀಗ ಮತ್ತೆ ಲಭಿಸಿರುವುದನ್ನು ಕಂಡ ಕಾಂತಾರ ಅಭಿಮಾನಿಗಳು ಖುಷಿ ವ್ಯಕ್ತಪಡಿಸುತ್ತಿದ್ದಾರೆ.

ಅಮೆಜಾನ್‌ನಲ್ಲಿ ಇಲ್ಲ ಬದಲಾವಣೆ
ಇನ್ನು ಈ ಹಾಡು ಹೊಂಬಾಳೆ ಫಿಲ್ಮ್ಸ್ ಯುಟ್ಯೂಬ್ ಚಾನೆಲ್‌ನಲ್ಲಿ ಮಾತ್ರ ಲಭ್ಯವಿದ್ದು, ಅಮೆಜಾನ್ ಪ್ರೈಮ್‌ನಲ್ಲಿ ಪ್ರಸಾರವಾಗುತ್ತಿರುವ ಚಿತ್ರದಲ್ಲಿ ಮಾತ್ರ ಲಭ್ಯವಿಲ್ಲ. ಈಗಲೂ ಸಹ ಕೇಸ್ ದಾಖಲಾದ ನಂತರ ಸಂಯೋಜಿಸಲಾಗಿದ್ದ ಹೊಸ ವರಾಹ ರೂಪಂ ಹಾಡೇ ಅಮೆಜಾನ್ ಪ್ರೈಮ್ ವಿಡಿಯೊದಲ್ಲಿ ಪ್ರಸಾರವಾಗುತ್ತಿದೆ.

ವಿವಾದ ಎಲ್ಲಿಗೆ ಬಂದು ನಿಂತಿದೆ?
ಇನ್ನು ವರಾಹ ರೂಪಂ ಹಾಡಿನ ಮೇಲೆ ಥೈಕ್ಕುಡಂ ಬ್ರಿಡ್ಜ್ ಮೇಲೆ ಹಾಕಿದ್ದ ನಂತರ ಹಾಡನ್ನು ಬಳಸುವಂತಿಲ್ಲ ಎಂದು ಕೇರಳ ಸ್ಥಳೀಯ ನ್ಯಾಯಾಲಯ ನೀಡಿದ್ದ ಆದೇಶವನ್ನು ಕೇರಳ ಹೈಕೋರ್ಟ್ ರದ್ದುಗೊಳಿಸಿತ್ತು ಹಾಗೂ ಹಾಡನ್ನು ಉಪಯೋಗಿಸಲು ಅನುಮತಿ ನೀಡಿತ್ತು. ಆದರೆ ನಂತರ ಮತ್ತೊಂದು ಸ್ಥಳೀಯ ಕೋರ್ಟ್ ಹಾಡನ್ನು ಬಳಸಬಾರದು ಎಂದು ತಡೆ ನೀಡಿದೆ. ಹೌದು, ಥೈಕ್ಕುಡಂ ಬ್ರಿಡ್ಜ್ ಕೋಯಿಕೋಡ್ ನ್ಯಾಯಾಲಯದಲ್ಲಿ ದಾಖಲಿಸಿದ್ದ ದೂರು ಹೊಂಬಾಳೆ ಪರ ಆಗಿದ್ದು, ಮಾತೃಭೂಮಿ ಕಪ್ಪಾ ಟಿವಿ ಪಾಲಕ್ಕಾಡ್ ನ್ಯಾಯಾಲಯದಲ್ಲಿ ದಾಖಲಿಸಿರುವ ದೂರು ಇನ್ನೂ ಚಾಲ್ತಿಯಲ್ಲಿದ್ದು, ಹಾಡಿನ ಮೇಲೆ ಮತ್ತೆ ತಡೆಯಾಜ್ಞೆ ಹೇರಲಾಗಿತ್ತು. ಆದರೆ ಇದೀಗ ಹಾಡು ಲಭ್ಯವಾಗಿರುವುದನ್ನು ನೋಡಿದರೆ ಈ ಕೇಸ್ ಕೂಡ ಹೊಂಬಾಳೆ ಫಿಲ್ಮ್ಸ್ ಪರ ಆದಂತಿದೆ ಎಂದು ನೆಟ್ಟಿಗರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.