For Quick Alerts
  ALLOW NOTIFICATIONS  
  For Daily Alerts

  ಕನ್ನಡಕ್ಕೆ ಮತ್ತೆ ಬಂದ 'ಮಾಣಿಕ್ಯ'ನ ರಾಣಿ ವರಲಕ್ಷ್ಮಿ

  |

  ಸುದೀಪ್ ಅಭಿನಯಿಸಿದ್ದ ಮಾಣಿಕ್ಯ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರಿ ಪ್ರವೇಶಿಸಿದ್ದ ವರಲಕ್ಷ್ಮಿ ಶರತ್ ಕುಮಾರ್ ಸದ್ಯ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಬ್ಯುಸಿಯಾಗಿದ್ದಾರೆ. ನಾಯಕಿಯಾಗಿ ಅಷ್ಟಾಗಿ ಸಕ್ಸಸ್ ಕಾಣದ ಈ ನಟಿ ಡಿಫ್ರೆಂಟ್ ಪಾತ್ರಗಳ ಮೂಲಕ ಸದ್ದು ಮಾಡ್ತಿದ್ದಾರೆ.

  ತಮಿಳು ನಟ ವಿಜಯ್, ವಿಶಾಲ್, ಧನುಶ್ ಅಂತವರ ಎದುರು ಖಳನಾಯಕಿಯಾಗಿ ಅಬ್ಬರಿಸಿದ್ದಾರೆ. ಇದೀಗ, ಕನ್ನಡದಲ್ಲಿ ಮತ್ತೆ ಸಿನಿಮಾ ಮಾಡ್ತಿದ್ದಾರೆ. ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಗೆ ಜೋಡಿಯಾಗಿದ್ದ ವರಲಕ್ಷ್ಮಿ ನಂತರ ರನ್ನ ಚಿತ್ರದಲ್ಲಿ ಒಂದು ಹಾಡಿಗೆ ಹೆಜ್ಜೆ ಹಾಕಿದ್ದರು.

  ಅದಾದ ಬಳಿಕ 2017ರಲ್ಲಿ ಅರ್ಜುನ್ ಸರ್ಜಾ ಜೊತೆ ದ್ವಿಭಾಷಾ ಚಿತ್ರ 'ವಿಸ್ಮಯ'ದಲ್ಲಿ ನಟಿಸಿದ್ದರು. ಇದೀಗ, ಚಿರಂಜೀವಿ ಸರ್ಜಾ ಅಭಿನಯದ 'ರಣಂ' ಸಿನಿಮಾ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡಿದ್ದಾರೆ.

  ಬಹುಭಾಷಾ ನಟಿ ಅಪಹರಣ ಬಳಿಕ ಹೊಸ ಬಾಂಬ್ ಸಿಡಿಸಿದ ವರಲಕ್ಷ್ಮಿ ಶರತ್ ಕುಮಾರ್.! ಬಹುಭಾಷಾ ನಟಿ ಅಪಹರಣ ಬಳಿಕ ಹೊಸ ಬಾಂಬ್ ಸಿಡಿಸಿದ ವರಲಕ್ಷ್ಮಿ ಶರತ್ ಕುಮಾರ್.!

  ಚಿರು ಸರ್ಜಾ ನಾಯಕನಾಗಿರುವ ಈ ಚಿತ್ರದಲ್ಲಿ ವರಲಕ್ಷ್ಮಿ ಹಾಗೂ ಆ ದಿನಗಳು ಖ್ಯಾತಿಯ ಚೇತನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ನಿನ್ನೆ ಹುಟ್ಟುಹಬ್ಬ ಆಚರಿಸಿಕೊಂಡ ಚೇತನ್ ಅವರಿಗೆ ರಣಂ ಚಿತ್ರತಂಡ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದೆ.

  ಇನ್ನುಳಿದಂತೆ ಬಹುತೇಕ ಶೂಟಿಂಗ್ ಮುಗಿಸಿರುವ ಈ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದೆ. ಆರ್ ಶ್ರೀನಿವಾಸ್ ಈ ಚಿತ್ರವನ್ನ ನಿರ್ಮಾಣ ಮಾಡಿದ್ದು, ವಿ ಸಮುದ್ರ ನಿರ್ದೇಶನ ಮಾಡಿದ್ದಾರೆ.

  English summary
  Chiranjeevi Sarja and Chetan Kumar would be playing the lead roles in the upcoming bilingual Kannada - Telugu movie Ranam. The latest to join the sets of this film is Varalaxmi Sarathkumar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X