»   » ಅಣ್ಣಾವ್ರ 89ನೇ ಜನ್ಮದಿನೋತ್ಸವ: ಎಲ್ಲೆಲ್ಲಿ ಏನೇನು ವಿಶೇಷ.?

ಅಣ್ಣಾವ್ರ 89ನೇ ಜನ್ಮದಿನೋತ್ಸವ: ಎಲ್ಲೆಲ್ಲಿ ಏನೇನು ವಿಶೇಷ.?

Posted By: Naveen
Subscribe to Filmibeat Kannada

ಡಾ.ರಾಜ್ ಕುಮಾರ್ ಅಭಿಮಾನಿಗಳು ದೀಪಾವಳಿ, ಯುಗಾದಿ ಹಬ್ಬಗಳನ್ನ ಬೇಕಾದ್ರೆ ಮರೆಯಬಹುದೇನೋ.! ಅದರೇ ಅಣ್ಣಾವ್ರ ಹುಟ್ಟುಹಬ್ಬವನ್ನ ಮಾತ್ರ ಮರೆಯಲು ಸಾಧ್ಯವೇ ಇಲ್ಲ. ಎಲ್ಲ ಹಬ್ಬಗಳಿಗಿಂತ ಹೆಚ್ಚು ವಿಜೃಂಭಣೆಯಿಂದ ಡಾ.ರಾಜ್ ಜನ್ಮದಿನವನ್ನ ಅಭಿಮಾನಿಗಳು ಆಚರಿಸುತ್ತಾರೆ.

ಅಂತೆಯೇ ನಾಳೆ (ಏಪ್ರಿಲ್ 24) ಅಣ್ಣಾವ್ರ 89ನೇ ಜನ್ಮದಿನೋತ್ಸವ. ಇದರ ಅಂಗವಾಗಿ ನಾಳೆ ಹಲವು ವಿಶೇಷ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿದೆ.

ಒಂದು ಕಡೆ ಅಣ್ಣಾವ್ರ ಹುಟ್ಟುಹಬ್ಬವನ್ನ ಅಭಿಮಾನಿಗಳು ಆಚರಿಸಿದ್ರೆ, ಅದೇ ಶುಭದಿನದಂದು ಕೆಲ ಚಿತ್ರತಂಡಗಳು ಹೊಸ ಪ್ಲಾನ್ ಮಾಡಿವೆ. ಈ ಎಲ್ಲದರ ಕುರಿತ ಫುಲ್ ಡೀಟೇಲ್ಸ್ ಇಲ್ಲಿದೆ ಓದಿ...

ಅಭಿಮಾನಿಗಳ ಹಬ್ಬ

ಪ್ರತಿ ವರ್ಷ ಅಣ್ಣಾವ್ರ ಹುಟ್ಟುಹಬ್ಬದಂದು ಅಭಿಮಾನಿಗಳು ಕಂಠೀರವ ಸ್ಟುಡಿಯೋಗೆ ಭೇಟಿ ನೀಡುತ್ತಾರೆ. ಈ ಬಾರಿಯೂ ಅಲ್ಲಿ ದೊಡ್ಡ ಮಟ್ಟದ ಜನ ಸೇರುವ ನಿರೀಕ್ಷೆ ಇದ್ದು, ಎಲ್ಲ ರೀತಿಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಹಾಗೇ, ಡಾ.ರಾಜ್ ಕುಟುಂಬ ಕೂಡ ಸಮಾಧಿ ಸ್ಥಳಕ್ಕೆ ಭೇಟಿ ಕೊಟ್ಟು ನಾಳೆ ಪೂಜೆ ಸಲ್ಲಿಸಲಿದೆ.

ಸರ್ಕಾರದಿಂದ ಸಂಭ್ರಮಾಚರಣೆ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ಕರ್ನಾಟಕ ಸರ್ಕಾರದ ವತಿಯಿಂದ ಡಾ.ರಾಜ್ ಹುಟ್ಟುಹಬ್ಬದ ಆಚರಣೆ ನಡೆಯಲಿದೆ. ಬೆಳಗ್ಗೆ 11 ಗಂಟೆಗೆ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನ ಹಿರಿಯ ನಟಿ ಲಕ್ಷ್ಮಿ ಉದ್ಘಾಟಿಸಲಿದ್ದಾರೆ. ಕೇಂದ್ರ ಸಚಿವ ಅನಂತ್ ಕುಮಾರ್ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿದ್ದಾರೆ.

ಫಿಲ್ಮ್ ಚೆಂಬರ್ ನಲ್ಲಿ ಸಂಭ್ರಮ

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲೂ ಅಣ್ಣಾವ್ರ ಹುಟ್ಟುಹಬ್ಬ ಆಚರಣೆ ನಡೆಯಲಿದೆ. ವಾಣಿಜ್ಯ ಮಂಡಳಿಯ ಅಧ್ಯಕ್ಷ ಸಾ.ರಾ.ಗೋವಿಂದ್ ನೇತೃತ್ವದಲ್ಲಿ ರಾಜ್ ಪ್ರತಿಮೆಗೆ ಹೂವಿನ ಮಾಲೆ ಹಾಕಿ ವರನಟನನ್ನ ಸ್ಮರಿಸಲಿದ್ದಾರೆ.

ಶಿವಣ್ಣನ ಗಿಫ್ಟ್

ಡಾ.ರಾಜ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ನಟ ಶಿವರಾಜ್ ಕುಮಾರ್ ಡಬಲ್ ಗಿಫ್ಟ್ ನೀಡಲಿದ್ದಾರೆ. ಶಿವಣ್ಣ ಅಭಿನಯದ 'ಬಂಗಾರ ಸನ್ ಆಫ್ ಬಂಗಾರದ ಮನುಷ್ಯ' ಚಿತ್ರದ ಆಡಿಯೋ ಬಿಡುಗಡೆ ಮತ್ತು 'ಟಗರು' ಸಿನಿಮಾದ ಮೇಕಿಂಗ್ ನಾಳೆಯೇ ಬಿಡುಗಡೆ ಆಗಲಿದೆ.

'ಅದೇಮಾ' ಮುಹೂರ್ತ

ಗುರುಪ್ರಸಾದ್ ನಿರ್ದೇಶನದ ಅನೂಪ್ ಸಾ.ರಾ.ಗೋವಿಂದು ನಟನೆಯ 'ಅದೇಮಾ' ಸಿನಿಮಾದ ಮುಹೂರ್ತ ಡಾ.ರಾಜ್ ಹುಟ್ಟುಹಬ್ಬದಂದೇ ನೆರವೇರಲಿದೆ.

English summary
Dr.Rajkumar's 89 birthday tomorrow (April 24th). On this occasion, Various programs are scheduled including Shiva Rajkumar starrer 'Bagara s/o Bagarada Manushya' audio release.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada