Varthur Santhosh: ₹20 ಸಾವಿರಕ್ಕೆ ಹುಲಿ ಉಗುರು ಖರೀದಿಸಿದ್ದ ಸಂತೋಷ್: ವಿಚಾರಣೆಯಲ್ಲಿ ಶಾಕಿಂಗ್ ಸಂಗತಿ ಬಹಿರಂಗ

ಹುಲಿ ಉಗುರು ಹೊಂದಿರುವ ಆರೋಪದಡಿ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧನವಾಗಿದೆ. ಸದ್ಯ 14 ದಿನಗಳ ಕಾಲ ಸಂತೋಷ್ ನ್ಯಾಯಾಂಗ ವಶದಲ್ಲಿದ್ದಾರೆ. ಇನ್ನು ಆತನಿಗೆ ಹುಲಿ ಉಗುರು ಹೇಗೆ ಸಿಕ್ತು? ಎನ್ನುವ ಬಗ್ಗೆ ವಿಚಾರಣೆ ನಡೀತಿದೆ. ವಿಚಾರಣೆ ವೇಳೆ ಸಂತೋಷ್ ಹೊಸೂರಿನಲ್ಲಿ ಹುಲಿ ಉಗುರು ಖರೀಸಿದಿದ್ದಾಗಿ ಹೇಳಿದ್ದಾರೆ ಎನ್ನಲಾಗ್ತಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಅಡಿಯಲ್ಲಿ ಭಾನುವಾರ ಸಂಜೆ ರಾಮೋಹಳ್ಳಿ ಅರಣ್ಯಾಧಿಕಾರಿಗಳು ವರ್ತೂರು ಸಂತೋಷ್‌ ಅವರನ್ನು ವಶಕ್ಕೆ ಪಡೆದಿದ್ದರು. ದೊಡ್ಡ ಆಲದ ಮರ ಬಳಿ ಇರುವ ಬಿಗ್‌ಬಾಸ್ ಮನೆಗೆ ಸಂಜೆ 7 ಗಂಟೆಗೆ ಹೋಗಿದ್ದ ಅಧಿಕಾರಿಗಳು ಸಂತೋಷ್ ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಸಾಕಷ್ಟು ಪ್ರಶ್ನೆಗಳನ್ನು ಅವರ ಮುಂದಿಟ್ಟಿದ್ದರು. ವಿಚಾರಣೆ ವೇಳೆ ತಮಿಳುನಾಡಿನ ಹೊಸೂರಿನಲ್ಲಿ 20 ಸಾವಿರಕ್ಕೆ ಹುಲಿ ಉಗುರು ಖರೀದಿಸಿದ್ದಾರೆ ಸಂತೋಷ್ ಹೇಳಿರುವುದಾಗಿ ವರದಿಯಾಗಿದೆ.

BBK10-Varthur-Santhosh-Tiger-Claw-Case

ವಿಚಾರಣೆ ವೇಳೆ ಸಲೂನ್ ಇಟ್ಟುಕೊಂಡಿರುವ ಬಾಲ್ಯದ ಸ್ನೇಹಿತ ರಂಜಿತ್ ಜೊತೆ 3 ವರ್ಷದ ಹಿಂದೆ ಹೊಸೂರಿಗೆ ಹೋಗಿ ಸಂತೋಷ್ ಹುಲಿ ಉಗುರು ಖರೀದಿಸಿದ್ದಾಗಿ ಹೇಳಿದ್ದಾರೆ. ಯಾವ ಹಳ್ಳಿಯಲ್ಲಿ ಯಾರು ಹುಲಿ ಉಗುರು ಕೊಟ್ಟರು ಎನ್ನುವುದು ಗೊತ್ತಿಲ್ಲ ಎಂದು ಸಂತೋಷ್ ಹೇಳಿದ್ದಾರಂತೆ.

ಒಂದು ಉಗುರು 1.7 ಸೆಂಟಿ ಮೀಟರ್ ಅಗಲ ಹಾಗೂ 2.8 ಸೆಂಟಿ ಮೀಟರ್ ಉದ್ದ ಇದೆ. ಮತ್ತೊಂದು 1.6 ಸೆಂಟಿ ಮೀಟರ್ ಅಗಲ ಹಾಗೂ 2.8 ಸೆಂಟಿ ಮೀಟರ್ ಉದ್ದ ಇದೆ. ಹುಲಿ ಉಗುರು ಖರೀದಿಸಿದ 6 ತಿಂಗಳ ಬಳಿಕ ವರ್ತೂರಿನ ಮಹಾಲಕ್ಷ್ಮೀ ವಜ್ರಾಭರಣ ಅಂಗಡಿಯಲ್ಲಿ ಕೊಂಡೊಯ್ದು ಅದನ್ನು ಲಾಕೆಟ್‌ ಆಗಿ ಮಾಡಿಸಿಕೊಂಡಿದ್ದಾರೆ. ಹೇಮಂತ್ ಎಂಬುವವರು ಲಾಕೆಟ್‌ಗೆ ಹುಲಿ ಉಗುರು ಅಳವಡಿಸಿಕೊಟ್ಟಿದ್ದಾರೆ ವನ್ಯಜೀವಿ ಅಪರಾಧ ವರದಿಯಲ್ಲಿ ಗೊತ್ತಾಗಿದೆ.

ಸಂತೋಷ್‌ಗೆ ಅದು ಹುಲಿ ಉಗುರು ಅಂತ ಗೊತ್ತಿತ್ತು. ಅದನ್ನು ಧರಿಸುವುದು ಅದೃಷ್ಟ, ವಿಶೇಷ ಎನ್ನುವ ಕಾರಣಕ್ಕೆ ಖರೀದಿಸಿದ್ದರು ಎಂದು ವರದಿಯಲ್ಲಿ ಗೊತ್ತಾಗಿದೆ. ಇನ್ನು ಹೇಮಂತ್, ರಂಜಿತ್ ಸೇರಿದಂತೆ ಕೆಲವರು ಶಂಕಿತರು ಎಂದು ಗುರ್ತಿಸಲಾಗಿದ್ದು ಇನ್ನು ಬಂಧಿಸಿಲ್ಲ ಎಂದು ಅರಣ್ಯ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಈಗಾಗಲೇ ಜಾಮೀನು ಪಡೆಯಲು ಸಂತೋಷ್ ವಕೀಲರ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಶೀಘ್ರದಲ್ಲೇ ಆ ಅರ್ಜಿ ವಿಚಾರಣೆ ನಡೆಯಲಿದೆ. ವನ್ಯಜೀವಿ ಸಂರಕ್ಷಣಾ ಕಾಯ್ದೆ-1972ರ ಸೆಕ್ಷನ್ 39, 40, 44, 48(a) (b), 51, 52 ಹಾಗೂ 58 ಮಾತ್ರವಲ್ಲದೇ ಬೇಟೆ ನಿಷೇಧ ಸೆಕ್ಷನ್ 9ರ ಅಡಿಯಲ್ಲಿ ಸಂತೋಷ್ ವಿರುದ್ಧ ದೂರು ದಾಖಲಾಗಿದೆ.

ವರ್ತೂರು ಸಂತೋಷ್ ಹಿನ್ನೆಲೆ ಏನು ಎನ್ನುವುದನ್ನು ನೋಡುವುದಾದರೆ ಅವರೊಬ್ಬ ಪ್ರಗತಿಪಡ ಕೃಷಿಕ. ತಾಯಿಯೊಂದಿಗೆ ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಜೊತೆಗೆ ದೇಸಿ ತಳಿಯ ಹಸುವಾಗಿರುವ 'ಹಳ್ಳಿಕಾರ್' ತಳಿಯನ್ನು ಅಭಿವೃದ್ದಿಪಡಿಸುವ ಕೆಲಸ ಮಾಡುತ್ತಿದ್ದಾರೆ. ಅಖಿಲ ಭಾರತ ಹಳ್ಳಿಕಾರ್ ತಳಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಕೂಡ ಆಗಿದ್ದಾರೆ.

ಶ್ರೀಮಂತ ಕುಟುಂಬದ ಸಂತೋಷ್ ಸದಾ ಮೈಮೇಲೆ ಚಿನ್ನಾಭರಣ ಹಾಕಿಕೊಂಡು ಕಾಣಿಸಿಕೊಳ್ಳುತ್ತಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಜನಪ್ರಿಯತೆ ಗಳಿಸಿದ ಸಂತೋಷ್ ಬಿಗ್‌ಬಾಸ್ ಮನೆ ಪ್ರವೇಶಿಸುವ ಅವಕಾಶ ಪಡೆದಿದ್ದರು. 2 ವಾರಗಳ ಕಾಲ ಮನೆಯಲ್ಲಿ ಉಳಿದಿದ್ದರು. ಆದರೆ ಶೋ ಮಧ್ಯದಲ್ಲೇ ಈ ರೀತಿ ಬಂಧನವಾಗಿ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಸದ್ಯ ಪರಪ್ಪನ ಅಗ್ರಹಾರ ಜೈಲಿಯಲ್ಲಿದ್ದಾರೆ.

More from Filmibeat

English summary
Bigg boss fame Varthur Santhosh brougt Tiger Claw Rs 20k at hosur;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X