For Quick Alerts
  ALLOW NOTIFICATIONS  
  For Daily Alerts

  ''ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು''- ವಸಿಷ್ಟ ಸಿಂಹ

  |
  ಚಾಲೆಂಜಿಂಗ್ ಸ್ಟಾರ್ ರನ್ನು ಹಾಡಿ ಹೊಗಳಿದ ವಸಿಷ್ಟ ಸಿಂಹ | DARSHAN THOOGUDEEPA | VAISHITA | FILMIBEAT KANNADA

  ''ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು'' ಹೀಗೆ ಖುಷಿಯಿಂದ ಹೇಳಿದರು ಕಂಚಿನ ಕಂಠದ ನಟ ವಸಿಷ್ಟ ಸಿಂಹ.

  'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದಲ್ಲಿ ವಸಿಷ್ಟ ಸಿಂಹ ಹೀರೋ ಆಗಿದ್ದಾರೆ. ಈ ಸಿನಿಮಾದ ಟ್ರೇಲರ್ ಅನ್ನು ನಟ ದರ್ಶನ್ ಬಿಡುಗಡೆ ಮಾಡಿದ್ದಾರೆ. ಸಿನಿಮಾಗೆ ದರ್ಶನ್ ಬಲ ಸಿಕ್ಕಿದ್ದು ಇಡೀ ತಂಡಕ್ಕೆ ಸಂತಸ ತಂದಿದೆ.

  ಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿಫಿಲ್ಮಿಬೀಟ್ ಪೋಲ್: ದರ್ಶನ್-ಪುನೀತ್ ಅಭಿಮಾನಿಗಳ ನಡುವೆ ಭಾರಿ ಪೈಪೋಟಿ

  ನಟ ವಸಿಷ್ಟ ಸಿಂಹ, ನಾಯಕಿ ಮಾನ್ವಿತಾ ಹರೀಶ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಕಾರ್ಯಕ್ರಮದಲ್ಲಿ ದರ್ಶನ್ ಬಗ್ಗೆ ಮಾತನಾಡಿದರು. ತನ್ನ ಕನಸನ್ನು ದರ್ಶನ್ ಈಡೇರಿಸಿದರು ಎಂದು ಡಿ ಬಾಸ್ ಗುಣವನ್ನು ವಸಿಷ್ಟ ಹೊಗಳಿದರು.

  ನಮ್ಮ ಆಹ್ವಾನಕ್ಕೆ ಬೇಗ ಸ್ಪಂದಿಸಿದರು

  ನಮ್ಮ ಆಹ್ವಾನಕ್ಕೆ ಬೇಗ ಸ್ಪಂದಿಸಿದರು

  ದರ್ಶನ್ ಒಂದು ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ವಸಿಷ್ಠ ಭೇಟಿ ಮಾಡಿ, 'ಇಂಡಿಯಾ V/S ಇಂಗ್ಲೆಂಡ್' ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಅವರ ಆಹ್ವಾನಕ್ಕೆ ಸ್ಪಂದಿಸಿದ ದರ್ಶನ್ ಕೆಲವೇ ದಿನದಲ್ಲಿ ಟ್ರೇಲರ್ ಬಿಡುಗಡೆ ಮಾಡಿಕೊಟ್ಟಿದ್ದಾರೆ. ಇದನ್ನು ಕಾರ್ಯಕ್ರಮದಲ್ಲಿ ವಸಿಷ್ಟ ನೆನೆದರು.

  ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು

  ಬದುಕಿದರೆ ದರ್ಶನ್ ಸರ್ ಥರ ಬದುಕಬೇಕು

  ವಸಿಷ್ಟ ಬದುಕಿದರೆ ದರ್ಶನ್ ಸರ್ ರೀತಿ ಬದುಕಬೇಕು ಎಂದು ಹೇಳಿದರು. ತಾವು ಹೇಗೆ ಬದುಕಬೇಕು ಎಂದು ಕನಸುಕಟ್ಟಿದ್ದರೋ, ಅದೇ ತರ ದರ್ಶನ್ ಬದುಕು ಇದೆಯಂತೆ. ಒಬ್ಬ ನಟ ಹೀಗೂ ಇರಬಹುದು ಎಂದು ದರ್ಶನ್ ತೋರಿಕೊಟ್ಟಿದ್ದಾರೆ ಎಂದು ವಸಿಷ್ಟ ಹೇಳಿದರು.

  ಕನ್ವರ್ ಲಾಲ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ.!ಕನ್ವರ್ ಲಾಲ್ ಜೊತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸೆಲ್ಫಿ.!

  ದರ್ಶನ್ ಇಷ್ಟ ಆಗೋದು ಈ ಕಾರಣಕ್ಕೆ

  ದರ್ಶನ್ ಇಷ್ಟ ಆಗೋದು ಈ ಕಾರಣಕ್ಕೆ

  ದರ್ಶನ್ ಯಾಕೆ ಇಷ್ಟ ಆಗ್ತಾರೆ ಎನ್ನುವುದಕ್ಕೆ ವಸಿಷ್ಟ ಕಾರಣಗಳನ್ನೂ ನೀಡಿದರು. ಕುದುರೆ ಓಡಿಸುವುದು, ತೋಟಗಾರಿಕೆ ಮಾಡುವುದು, ಹಸುಗಳನ್ನು ಮೇಯಿಸುವುದು, ಹಾಲು ಕರೆಯುವುದು, ಕಾರ್, ಬೈಕ್ ಪ್ಯಾಷನ್ ಇದೆಲ್ಲ ನೋಡಿ ತುಂಬ ಖುಷಿ ಆಗುತ್ತದೆ ಎಂದು ವಸಿಷ್ಟ ತಿಳಿಸಿದರು.

  ಯಾವತ್ತು ಹೀಗೆ ಆಗುತ್ತೆ ಅಂತ ಗೊತ್ತಿರಲಿಲ್ಲ

  ಯಾವತ್ತು ಹೀಗೆ ಆಗುತ್ತೆ ಅಂತ ಗೊತ್ತಿರಲಿಲ್ಲ

  ಮೊದಲ ಬಾರಿಗೆ ವಸಿಷ್ಟ ನಾಯಕ ನಟನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ವೇಳೆ ತಮ್ಮ ಪಯಣವನ್ನು ವಸಿಷ್ಟ ನೆನೆದರು. ಬೆಂಗಳೂರಿನಲ್ಲಿ ಸಾಫ್ಟವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದೆ. ನಾಟಕದ ಗೀಳು, ಒಬ್ಬ ನಟನಾಗಿ ಕೆರಿಯರ್ ಆಯ್ಕೆ ಮಾಡಿಕೊಳ್ಳುವ ಪ್ರೇರೇಪಿಣೆ ನೀಡಿತು. ಆ ನಂತರ ಇಷ್ಟು ದೂರ ಬಂದು, ಹೀಗೆಲ್ಲ ಆಗುತ್ತದೆ ಅಂತ ಕನಸು ಕೂಡ ಕಂಡಿರಲಿಲ್ಲ ಎಂದು ವಸಿಷ್ಟ ಸಂತಸ ಹಂಚಿಕೊಂಡರು.

  ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಡಿ ಬಾಸ್ಕಿಡ್ನಿ ವೈಫಲ್ಯದಿಂದ ಬಳಲುತಿದ್ದ ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಡಿ ಬಾಸ್

  English summary
  Kannada actor Vasishta N Simha spoke about Darshan.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X