'ಓದೆಲ ರೈಲ್ವೇ ಸ್ಟೇಷನ್' ನಲ್ಲಿ ಕನ್ನಡದ ಸಿಂಹ; ವಸಿಷ್ಠ ಲುಕ್ ಗೆ ಅಭಿಮಾನಿಗಳು ಫಿದಾ

ಸ್ಯಾಂಡಲ್ ವುಡ್ ನ ಖ್ಯಾತ ನಟ ವಸಿಷ್ಠ ಸಿಂಹ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ ಎನ್ನುವ ಸುದ್ದಿ ಕೇಳಿದ್ದೀರಿ. 'ಓದೆಲ ರೈಲ್ವೇ ಸ್ಟೇಷನ್' ಎನ್ನುವ ಚಿತ್ರದಲ್ಲಿ ಬಣ್ಣ ಹಚ್ಚುವ ಮೂಲಕ ವಸಿಷ್ಠ ಚೊಚ್ಚಲ ತೆಲುಗು ಸಿನಿಮಾದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ಇದೀಗ ಚಿತ್ರದ ಮೊದಲ ಲುಕ್ ರಿಲೀಸ್ ಆಗಿದೆ.

ಹೌದು 'ಓದೆಲ ರೈಲ್ವೇ ಸ್ಟೇಷನ್' ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ವಸಿಷ್ಠ ತಿರುಪತಿ ಎನ್ನುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದಲ್ಲಿ ವಸಿಷ್ಠ ಧೋಬಿಯಾಗಿ ಮಿಂಚಿದ್ದಾರೆ. 'ಓದೆಲ ರೈಲ್ವೇ ಸ್ಟೇಷನ್'ನ ಫಸ್ಟ್ ಲುಕ್ ಶೇರ್ ಮಾಡಿ ವಸಿಷ್ಠ, ಇದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ ಎಂದು ಹೇಳಿದ್ದಾರೆ. ಮುಂದೆ ಓದಿ...

ಪಾತ್ರದ ಬಗ್ಗೆ ವಸಿಷ್ಠ ಹೇಳಿದ್ದೇನು?

ಪಾತ್ರದ ಬಗ್ಗೆ ವಸಿಷ್ಠ ಹೇಳಿದ್ದೇನು?

'ತಿರುಪತಿ ಎಂಬ ಮೃದು ಮನಸ್ಸಿನ ಸಾಧಾರಣ ಯುವಕ, ಹಳ್ಳಿ ಹೈದ, ಓರ್ವ ಧೋಬಿ. ಇದು ನನ್ನ ಚೊಚ್ಚಲ ತೆಲುಗು ಸಿನೆಮಾ ಓದೆಲ ರೈಲ್ವೇ ಸ್ಟೇಷನ್ ನ ಪಾತ್ರ ಪರಿಚಯ. ನಾನಿದುವರೆಗೂ ನೋಡಿರದ, ಮಾಡಿರದ, ಒಂದು ಅದ್ಭುತ ಪಾತ್ರ' ಎಂದು ಬರೆದುಕೊಂಡಿದ್ದಾರೆ. ವಸಿಷ್ಠ ಲುಕ್ ಗೆ ಅಭಿಮಾನಿಗಳಿಂದ ಮೆಚ್ಚುಗೆ ಹರಿದು ಬರುತ್ತಿದೆ.

ನೈಜ ಘಟನೆ ಆಧರಿತ ಸಿನಿಮಾ

ನೈಜ ಘಟನೆ ಆಧರಿತ ಸಿನಿಮಾ

ಅಂದ್ಹಾಗೆ 'ಒಡೆಲಾ ರೈಲ್ವೆ ಸ್ಟೇಷನ್' ನೈಜ ಘಟನೆ ಆಧರಿತ ಸಿನಿಮಾವಂತೆ. ಖರೀಮ್ ನಗರದಲ್ಲಿ ನಡೆದ ಒಂದು ಘಟನೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗುತ್ತಿದೆಯಂತೆ. ಕಥೆ ಕೇಳಿ ಇಂಪ್ರೆಸ್ ಆದ ವಸಿಷ್ಠ ಸಿನಿಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

ಇಬ್ಬರು ನಾಯಕಿಯರು

ಇಬ್ಬರು ನಾಯಕಿಯರು

ಇನ್ನು ಚಿತ್ರದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ಹೆಬಾ ಪಟೇಲ್ ಮತ್ತು ಪೂಜಿತಾ ಪೊನ್ನಡ. ಈಗಾಗಲೇ ಹೆಬಾ ಪಟೇಲ್ ಲುಕ್ ರಿಲೀಸ್ ಮಾಡಲಾಗಿದೆ. ಹೆಬಾ ಪಟೇಲ್ ಈಗಾಗಲೇ ಕನ್ನಡದ ಅಧ್ಯಕ್ಷ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನೂ ಚಿತ್ರಕ್ಕೆ ಯುವ ನಿರ್ದೇಶಕ ಅಶೋಕ್ ತೇಜ ಆಕ್ಷನ್ ಕಟ್ ಹೇಳುತ್ತಿದ್ದಾರೆ.

Recommended Video

6 ತಿಂಗಳು ಲಾಕ್ ಡೌನ್ ನಲ್ಲಿ ಶಿವಣ್ಣ ಏನ್ ಮಾಡಿದ್ರು ಗೊತ್ತಾ? | Shivanna | Filmibeat Kannada
ವಸಿಷ್ಠ ಬಳಿ ಇರುವ ಸಿನಿಮಾಗಳು

ವಸಿಷ್ಠ ಬಳಿ ಇರುವ ಸಿನಿಮಾಗಳು

ವಸಿಷ್ಠ ಕನ್ನಡದ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಲನ್ ಆಗಿ ಅಬ್ಬರಿಸುವ ಜೊತೆಗೆ ನಾಯಕನಾಗಿಯೂ ಮಿಂಚುತ್ತಿದ್ದಾರೆ. ಕೊನೆಯದಾಗಿ ಪವರ್ ಸ್ಟಾರ್ ಪುನೀತ್ ರಾಜ್ ನಿರ್ಮಾಣದ ಮಾಯಾಬಜಾರ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಕಾಲಚಕ್ರ, ಪಂತ, ಯುವರತ್ನ ಸೇರಿದಂತೆ ಸಾಕಷ್ಟು ಸಿನಿಮಾಗಳು ವಸಿಷ್ಠ ಕೈಯಲ್ಲಿವೆ. ಇದೀಗ ತೆಲುಗು ಚಿತ್ರರಂಗಕ್ಕೂ ಕಾಲಿಟ್ಟಿರುವ ವಸಿಷ್ಠರನ್ನು ತೆಲುಗು ಅಭಿಮಾನಿಗಳು ಹೇಗೆ ಸ್ವೀಕರಿಸಲಿದ್ದಾರೆ ಎಂದು ಕಾದು ನೋಡಬೇಕು.

More from Filmibeat

English summary
Kannada Actor Vasishta N Simha starrer odela railway station first look release.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X