'ಹೆಡ್ಡು-ಬುಶ್' ಸಿನಿಮಾದಲ್ಲಿ ವಶಿಷ್ಟ ಸಿಂಹ ಪಾತ್ರವೇನು? ಸುಳಿವು ಬಿಟ್ಟುಕೊಟ್ಟ ಡಾಲಿ

'ಟಗರು' ಸಿನಿಮಾದಲ್ಲಿ ಡಾಲಿ ಧನಂಜಯ್ ಹಾಗೂ ವಸಿಷ್ಠ ಸಿಂಹ ಧೂಳೆಬ್ಬಿಸಿದ್ದರು. ಅವರಿಬ್ಬರ ಪಾತ್ರ ಸಿನಿಮಾಕ್ಕೆ ಕಳಶವಿಟ್ಟಿತ್ತು. ಆ ಸಿನಿಮಾದ ಬಳಿಕ ಇಬ್ಬರ ವೃತ್ತಿ ಬದುಕು ಸಾಕಷ್ಟು ಬದಲಾವಣೆ ಸಹ ಆಯ್ತು.

'ಟಗರು' ಸಿನಿಮಾದಲ್ಲಿ ಆಪ್ತ ಗೆಳೆಯರ ಪಾತ್ರದಲ್ಲಿ ನಟಿಸಿದ್ದ ಡಾಲಿ ಹಾಗೂ ವಸಿಷ್ಠ ಸಿಂಹ ನಿಜ ಜೀವನದಲ್ಲಿಯೂ ಆಪ್ತ ಗೆಳೆಯರು. ಒಬ್ಬರ ಸಿನಿಮಾವನ್ನು ಮತ್ತೊಬ್ಬರು ಬೆಂಬಲಿಸುತ್ತಾ, ಒಬ್ಬರ ಸಿನಿಮಾದಲ್ಲಿ ಮತ್ತೊಬ್ಬರು ನಟಿಸುತ್ತಾ ಬಂದಿದ್ದಾರೆ.

Recommended Video

ನಾಲಕ್ಕು ಜನ ಸ್ನೇಹಿತರು ಸೇರಿದ್ರೆ ಚರಿತ್ರೆ ಆಗುತ್ತೆ ಅಂತ ಧನಂಜಯ್ ಹೇಳಿಕೊಟ್ಟಿದ್ದಾರೆ

ಡಾಲಿ ಧನಂಜಯ್ ನಿರ್ಮಾಣ ಮಾಡಿ ನಟಿಸಿದ್ದ 'ಬಡವ ರಾಸ್ಕಲ್' ಸಿನಿಮಾ 50 ದಿನಗಳನ್ನು ಪೂರೈಸಿದ್ದು ಹಿಟ್ ಎನಿಸಿಕೊಂಡಿದೆ. ಸಿನಿಮಾದ ಸಂಭ್ರಮ ಆಚರಿಸಲೆಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾಲಿ ಗೆಳೆಯ ವಸಿಷ್ಠ ಸಹ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಡಾಲಿ, ವಸಿಷ್ಠ ಸಿಂಹ ತಮ್ಮ ಮುಂದಿನ ಸಿನಿಮಾದಲ್ಲಿ ನಿರ್ವಹಿಸುತ್ತಿರುವ ಪಾತ್ರದ ಬಗ್ಗೆ ಸುಳಿವು ಬಿಟ್ಟುಕೊಟ್ಟಿದ್ದಾರೆ.

Vasishta Simha Acting As Kothwal In Headdu-Bush Movie Along With Dali Dhananjay

ಕಾರ್ಯಕ್ರಮದಲ್ಲಿ ವಸಿಷ್ಠ ಸಿಂಹರನ್ನು ಸ್ವಾಗತಿಸಿ ಮಾತನಾಡಿದ ಡಾಲಿ ಧನಂಜಯ್, ''ಇವರು ಈ ಸಿನಿಮಾದಲ್ಲಿ (ಬಡವ ರಾಸ್ಕಲ್)ನಲ್ಲಿ ಅತಿಥಿ ಪಾತ್ರ ಮಾಡಬೇಕಾಗಿತ್ತು. ಆದರೆ ಆಗಲಿಲ್ಲ. ಈಗ ನನ್ನ ಮುಂದಿನ ಸಿನಿಮಾ 'ಹೆಡ್ಡು ಬುಶ್'ನಲ್ಲಿ 'ಜಯರಾಜ್' ಆಗುತ್ತಿದ್ದಾರೆ'' ಎಂದರು. ಡಾಲಿ ಮಾತು ಕೇಳಿ ಸಭಿಕರು ಖುಷಿಯಿಂದ ಚಪ್ಪಾಳೆ ತಟ್ಟಿದರು.

'ಹೆಡ್ಡು-ಬುಶ್' ಸಿನಿಮಾ ರೌಡಿ ಜಯರಾಜ್ ಕುರಿತಾದ ಸಿನಿಮಾ ಆಗಿದ್ದು ಸಿನಿಮಾದಲ್ಲಿ ಡಾಲಿ ಧನಂಜಯ್ ಜಯರಾಜ್ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾಕ್ಕೆ ಬಂಡವಾಳವೂ ಅವರದ್ದೇ. ಕತೆ, ಚಿತ್ರಕತೆಯನ್ನು ಪತ್ರಕರ್ತ, ಮಾಜಿ ರೌಡಿ ಅಗ್ನಿ ಶ್ರೀಧರ್ ಬರೆದಿದ್ದಾರೆ. ಈ ಸಿನಿಮಾವು ಕೊತ್ವಾಲ ಹಾಗೂ ಜಯರಾಜ್ ನಡುವಿನ ದ್ವೇಷದ ಕತೆಯನ್ನು ಹೊಂದಿದ್ದು, ಕೊತ್ವಾಲನ ಪಾತ್ರದಲ್ಲಿ ವಸಿಷ್ಠ ನಟಿಸುತ್ತಿದ್ದಾರೆ.

ಡಾಲಿ ಮಾತನಾಡಿದ ಬಳಿಕ ಮಾತನಾಡಿದ ವಸಿಷ್ಠ ಸಿಂಹ, ''ಡಾಲಿ ಧನಂಜಯ್ ಅನ್ನು ಈ ಸ್ಥಿತಿಯಲ್ಲಿ ಕಂಡು ಬಹಳ ಖುಷಿಯಾಗುತ್ತದೆ. ಒಂದು ದಶಕದ ಸ್ಟ್ರಗಲ್ ಆತನದ್ದು. ಆತ ಪಟ್ಟ ಕಷ್ಟ, ಶ್ರಮ ಎಲ್ಲವನ್ನೂ ನಾನು ನೋಡಿದ್ದೇನೆ. ನಮ್ಮ ಉದ್ದೇಶ ಸರಿಯಿದ್ದು ಸರಿಯಾದ ಶ್ರಮ ಹಾಕಿದರೆ ಯಶಸ್ಸು ಖಂಡಿತ ಎಂಬುದಕ್ಕೆ ಡಾಲಿ ಧನಂಜಯ್ ಸಾಕ್ಷಿ. 'ಬಡವ ರಾಸ್ಕಲ್' ಈಗ 'ಶ್ರೀಮಂತ ರಾಸ್ಕಲ್' ಆಗಿದ್ದಾನೆ. ಡಾಲಿ ಪಿಕ್ಚರ್ಸ್ ಇಂದ ಇಂಥಹಾ ಹಲವು ಒಳ್ಳೆಯ ಸಿನಿಮಾಗಳು ತೆರೆಗೆ ಬರಲಿ'' ಎಂದು ಹಾರೈಸಿದರು ವಸಿಷ್ಠ ಸಿಂಹ.

''ನಾನು ಹೆಡ್ಡು-ಬುಶ್' ಸಿನಿಮಾದಲ್ಲಿ ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದೀನಿ ಎಂದು ಎಲ್ಲೂ ಹೇಳಿಕೊಂಡಿರಲಿಲ್ಲ. ಆದರೆ ನಮ್ಮ ನಿರ್ಮಾಪಕರು (ಡಾಲಿ ಧನಂಜಯ್) ಖುಷಿಯಲ್ಲಿ ಹೇಳಿಬಿಟ್ಟರು. ನಾನು ಜಯರಾಜ್ ಪಾತ್ರದಲ್ಲಿ ನಟಿಸುತ್ತಿದ್ದೀನಿ. ಕೆಲವೇ ದಿನಗಳಲ್ಲಿ ಜಯರಾಜ್-ಕೊತ್ವಾಲನ ಆಟವನ್ನು ನೀವೆಲ್ಲ ನೋಡಲಿದ್ದೀರಿ'' ಎಂದರು ವಸಿಷ್ಠ ಸಿಂಹ.

More from Filmibeat

English summary
Vasishta Simha acting as Kothwal in Headdu-Bush movie along with Dali Dhananjay. Movie is about gangster Jayaraj and Kothwal.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X