ವಸಿಷ್ಠ ಸಿಂಹ- ಹರಿಪ್ರಿಯಾ ಗುಪ್ತ್‌ ಗುಪ್ತ್ ಎಂಗೇಜ್‌ಮೆಂಟ್: ಫನ್ನಿ ಮೀಮ್ಸ್ ವೈರಲ್

ವಿಷ್ಣುವರ್ಧನ್- ಭಾರತೀ ವಿಷ್ಣುವರ್ಧನ್, ಅಂಬರೀಶ್ - ಸುಮಲತಾ ಅಂಬರೀಶ್, ಪ್ರೇಮ್- ರಕ್ಷಿತಾ, ಯಶ್- ರಾಧಿಕಾ ಪಂಡಿತ್, ಕೃಷ್ಣ- ಮಿಲನಾ ರೀತಿಯಲ್ಲೇ ವಸಿಷ್ಠ ಸಿಂಹ- ಹರಿಪ್ರಿಯಾ ತಾರಾಜೋಡಿ ಹೊಸಬಾಳಿಗೆ ಕಾಲಿಡಲು ಅಣಿಯಾಗಿದೆ. ಇತ್ತೀಚೆಗೆ ಗುಟ್ಟಾಗಿ ಸಿಂಹಪ್ರಿಯಾ ಜೋಡಿಯ ಮದುವೆ ನಿಶ್ಚಿತಾರ್ಥವೂ ನಡೆದಿದೆ.

ತೆಲುಗು ಸಿನಿಮಾವೊಂದರ ಕನ್ನಡ ರೀಮೆಕ್‌ನಲ್ಲಿ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ನಟಿಸುತ್ತಿದ್ದಾರೆ. ಈ ಸಿನಿಮಾ ಶೂಟಿಂಗ್ ವೇಳೆ ಶುರುವಾದ ಸ್ನೇಹ ಪ್ರೀತಿಗೆ ತಿರುಗಿ ಈಗ ನಿಶ್ಚಿತಾರ್ಥದವರೆಗೂ ಬಂದು ನಿಂತಿದೆ. ಕಂಚಿನ ಕಂಠದ ನಟ, ಸ್ಯಾಂಡಲ್‌ವುಡ್ ಬ್ಯೂಟಿ ಕ್ವೀನ್ ಅಭಿಮಾನಿಗಳಿಗೆ ಸ್ವೀಟ್ ಶಾಕ್ ಕೊಟ್ಟಿದ್ದಾರೆ. ಕಳೆದೊಂದು ವಾರದಿಂದ ವಸಿಷ್ಠ- ಹರಿಪ್ರಿಯಾ ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಗುಸುಗುಸು ಶುರುವಾಗಿತ್ತು. ಉಂಗುರ ಬದಲಿಸಿಕೊಂಡು ಆ ಸುದ್ದಿ ನಿಜ ಎಂದು ಜೋಡಿ ಹೇಳಿದೆ. ಮುಂದಿನ ವರ್ಷ ಜೋಡಿ ಹಸೆಮಣೆ ಏರಲಿದೆ.

ಇನ್ನು ತಾರಾ ಜೋಡಿಗೆ ಅಭಿಮಾನಿಗಳು ಶುಭ ಹಾರೈಸುತ್ತಿದ್ದಾರೆ. ಕೆಲವರು ಮೀಮ್ಸ್ ಕ್ರಿಯೇಟ್ ಮಾಡಿ ಫನ್ನಿಯಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಇಂತಹ ಮೀಮ್ಸ್ ನೋಡಿ ನಕ್ಕು ಶೇರ್ ಮಾಡಿ ವಸಿಷ್ಠ ಹಾಗೂ ಹರಿಪ್ರಿಯಾ ಧನ್ಯವಾದ ತಿಳಿಸುತ್ತಿದ್ದಾರೆ.

'ಉಗ್ರಂ' ಸ್ಕ್ರೀನ್‌ ಶಾಟ್ ಬಳಸಿ ಮೀಮ್ಸ್

'ಉಗ್ರಂ' ಸ್ಕ್ರೀನ್‌ ಶಾಟ್ ಬಳಸಿ ಮೀಮ್ಸ್

ಪ್ರಶಾಂತ್ ನೀಲ್ ನಿರ್ದೇಶನದ 'ಉಗ್ರಂ' ಚಿತ್ರದಲ್ಲಿ ಹರಿಪ್ರಿಯಾ ನಾಯಕಿಯಾಗಿ ನಟಿಸಿದ್ದರು. ಚಿತ್ರದಲ್ಲಿ ಶ್ರೀಮುರಳಿ ಜೋಡಿಯಾಗಿ ಹರಿಪ್ರಿಯಾ ಮಿಂಚಿದ್ದರು. ಆ ಚಿತ್ರದ ಸ್ಕ್ರೀನ್‌ ಶಾಟ್ ತೆಗೆದು ಬಾಲ "ಅಗಸ್ತ್ಯ.. ಅತ್ತಿಗೆ ತುಂಬಾ ಚೆನ್ನಾಗಿದ್ದಾಳೆ ಕಣೋ" ಎಂದರೆ ಅಗಸ್ತ್ಯ "ಇವ್ಳು ನಿಂಗೆ ಮಾತ್ರ ಅಲ್ಲ, ಇನ್ಮುಂದೆ ನಂಗೂ ಕೂಡ ಅತ್ತಿಗೇನೇ"ಎಂದು ಹೇಳುವಂತೆ ಮೀಮ್ಸ್ ಶೇರ್ ಮಾಡಿದ್ದಾರೆ. ಅದಕ್ಕಿಂತ ತಮಾಷೆ ಅಂದರೆ "ರಾಕಿಗೆ ರೀನಾನ ಬಿಟ್ಟುಕೊಟ್ಟು ಅಗಸ್ತ್ಯಗೆ ಚಿಪ್ಪು ಕೊಟ್ಟ ಚಿಟ್ಟೆ" ಎಂದು ಬರೆದಿದ್ದಾರೆ. ಇದನ್ನು ನೋಡಿ ಹರಿಪ್ರಿಯಾ ಬಿದ್ದು ಬಿದ್ದು ನಗುವ ಎಮೋಜಿ ಹಾಕಿದ್ದಾರೆ.

ವಸಿಷ್ಠ 'ಸಿಂಹ' ತೋಳಿನಲ್ಲಿ ಕಂದ ಹರಿಪ್ರಿಯಾ: ಎಂಗೇಜ್‌ಮೆಂಟ್‌ ನಿಜಾನೇ!

ಸಿಂಹ - ಸಿಂಹಿಣಿ ಮದುವೆ

ಸಿಂಹ - ಸಿಂಹಿಣಿ ಮದುವೆ

ಮತ್ತೊಬ್ಬ ನೆಟ್ಟಿಗ ಸಿಂಹ ಹಾಗೂ ಸಿಂಹಿಣಿಗೆ ಮದುವೆ ಆಗಿರುವಂತೆ ಬಿಂಬಿಸಿರುವ ಆನಿಮೇಷನ್ ಇಮೇಜ್ ಪೋಸ್ಟ್ ಮಾಡಿ ಸಿಂಹ ಹಾಗೂ ಸಿಂಹಿಣಿಗೆ ಶುಭಾಶಯ ಎಂದು ಬರೆದಿದ್ದಾರೆ. ಇದನ್ನು ನೋಡಿ ಖುಷಿ ವ್ಯಕ್ತಪಡಿಸಿರುವ ವಸಿಷ್ಠ ಸಿಂಹ ಬಹಳ ಚೆನ್ನಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಹರಿಪ್ರಿಯಾ ಕೂಡ ಈ ಪೋಸ್ಟ್‌ಗೆ ಮೆಚ್ಚುಗೆ ಸೂಚಿಸಿದ್ದಾರೆ.

ವಸಿಷ್ಠ ಸಿಂಹ ತೋಳಿನಲ್ಲಿ ಹರಿಪ್ರಿಯಾ

ವಸಿಷ್ಠ ಸಿಂಹ ತೋಳಿನಲ್ಲಿ ಹರಿಪ್ರಿಯಾ

3 ದಿನಗಳ ಹಿಂದೆ ವಸಿಷ್ಠ ಮತ್ತು ಹರಿಪ್ರಿಯಾ ಸರಳವಾಗಿ ಎಂಗೇಜ್‌ಮೆಂಟ್ ಮಾಡಿಕೊಂಡಿರುವ ಬಗ್ಗೆ ಸುದ್ದಿ ಕೇಳಿಬಂದಿತ್ತು. ಸಂಜೆ ವೇಳೆಗೆ ಹರಿಪ್ರಿಯಾ ಸಿಂಹವೊಂದು ಪುಟ್ಟ ಬಾಲಕಿಯನ್ನು ಕೈಯಲ್ಲಿ ಹಿಡಿದುಕೊಂಡಿರುವ ಫೋಟೊ ಶೇರ್ ಮಾಡಿ, "ಚಿನ್ನ ನಿನ್ನ ತೋಳಿನಲ್ಲಿ ಕಂದ ನಾನು" ಎಂದು ಬರೆದುಕೊಂಡಿದ್ದರು. ನೆಟ್ಟಿಗರೊಬ್ಬರು ಸಿಂಹದ ಮುಖಕ್ಕೆ ವಸಿಷ್ಠ ಸಿಂಹ ಹಾಗೂ ಬಾಲಕಿ ಮುಖಕ್ಕೆ ಹರಿಪ್ರಿಯಾ ಮುಖ ಅಂಟಿಸಿ ಶುಭ ಕೋರಿದ್ದಾರೆ.

ಸಿಂಹದ ಜೊತೆ ಕಾಳೀ ಮಾತೆ

ಸಿಂಹದ ಜೊತೆ ಕಾಳೀ ಮಾತೆ

ದೊಡ್ಡ ಸಿಂಹದ ಮೇಲೆ ಒರಗಿ ಪುಟಾಣಿ ಕಾಳೀಮಾತೆ ಕುಳಿತಂತೆ ಇರುವ ಫೋಟೊವನ್ನು ಶೇರ್ ಮಾಡಿ ಅಭಿಮಾನಿಯೊಬ್ಬರು ಶುಭಾಶಯ ಕೋರಿರುವುದು ಇಂಟ್ರೆಸ್ಟಿಂಗ್ ಆಗಿದೆ. ಇನ್ನು ಒಬ್ಬರು "ಕುಸುಮ ಕೋಮಲೆ ಕೊನೆಗೆ ಜಿಂಕೆ ಪಾಲಾದರೇ" ಎಂದು ಬರೆದಿದ್ದಾರೆ. "ವೃತ್ತ ಬರೆದಾಗಿದೆ, ಗೀಟ್ ಎಳೆದಾಗಿದೆ.. ಆ ವೃತ್ತದೊಳಗಿರೊದೆಲ್ಲ ವಸಿಷ್ಠ ಸಿಂಹನದ್ದೇ" ಎಂದು 'ಉಗ್ರಂ' ಸಿನಿಮಾ ಡೈಲಾಗ್ ಬರೆದು ಶುಭ ಹಾರೈಸಿದ್ದಾರೆ. ಇದಕ್ಕೆ 'ಹೌದು' ಎಂದು ಹರಿಪ್ರಿಯಾ ಪ್ರತಿಕ್ರಿಯಿಸಿದ್ದಾರೆ.

More from Filmibeat

English summary
Vasishta Simha And Haripriya Engaged, Fans Congratulate The Star Couple With Funny Memes. They are in love and is considering marriage in 2023. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X