ಬಿಸಿಲೂರಿನ ಪ್ರತಿಭೆಗೆ ಸಾಥ್ ಕೊಟ್ಟ ಚಿಟ್ಟೆ: 'ರಕ್ತಾಕ್ಷ'ಗೆ ವಸಿಷ್ಠ ಕಂಚಿನ ಕಂಠ

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗಕ್ಕೆ ಬೇರೆ ಬೇರೆ ಕ್ಷೇತ್ರದ ಪ್ರತಿಭೆಗಳು ನೆಲೆ ಕಂಡುಕೊಳ್ಳಲು ಬರುತ್ತಾರೆ. ಸ್ಟಾಫ್‌ವೇರ್ ಇಂಜಿನಿಯರ್‌ಗಳು, ಮಾಡಲಿಂಗ್ ಕ್ಷೇತ್ರದಲ್ಲಿದ್ದವರು, ವೈದ್ಯರು ಹೀಗೆ ಸಿನಿಮಾ ಮೇಲಿನ ಆಸಕ್ತಿಗೆ ಚಿತ್ರರಂಗಕ್ಕೆ ಬಂದಿದು ಗೆದ್ದಿದ್ದಾರೆ.

ಸದ್ಯಕ್ಕೀಗ ಮಾಡಲಿಂಗ್ ಲೋಕದಿಂದ ಸ್ಯಾಂಡಲ್‌ವುಡ್‌ಗೆ ಮತ್ತೊಂದು ಪ್ರತಿಭೆ ಬಂದಿದೆ. ಅವರೇ ರೋಹಿತ್. ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆ ಪುಟ್ಟ ಹಳ್ಳಿಯವರು. ಕಳೆದ ಆರು ವರ್ಷಗಳಿಂದ ರೋಹಿತ್ ಮಾಡಲಿಂಗ್ ಲೋಕದಲ್ಲಿ ಮಿಂಚುತ್ತಿದ್ದಾರೆ.

ಮಾಡಲಿಂಗ್‌ನಿಂದ ಸಿನಿಮಾ ಕ್ಷೇತ್ರದಲ್ಲಿ ಮಿಂಚಬೇಕು ಅನ್ನೋದು ಇವರ ಆಸೆ. ಅದರಂತೆಯೇ ಕಳೆದ ಎರಡು ವರ್ಷಗಳಿಂದ ರಂಗಭೂಮಿಯಲ್ಲಿ ನಟನೆಯ ಅನುಭವ ಪಡೆದಿದ್ದಾರೆ. ಒಂದಿಷ್ಟು ತಯಾರಿ ನಡೆಸಿ, ಅವರೀಗ 'ರಕ್ತಾಕ್ಷ' ಸಿನಿಮಾದ ಮೂಲಕ ಹೀರೊ ಆಗಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಿದ್ದಾರೆ. ಪ್ರತಿಷ್ಠಿತ ಜಾಹೀರಾತಿನಲ್ಲಿ ಪ್ರತಿನಿಧಿಯಾಗಿರುವ ರೋಹಿತ್ 'ಎಬಿ ಪಾಸಿಟಿವ್' ಅನ್ನೋ ಸಿನಿಮಾದಲ್ಲಿ ಖಳನಾಯಕನಾಗಿ ನಟಿಸಿದ್ದರು.

Vasishta Simha gave support to newcomer Rohit and his movie Rakthaksh

ರೋಹಿತ್ ಈಗ ಹೀರೊ ಆಗಿ ಬೆಳ್ಳಿ ಪರದೆಯ ಮೇಲೆ ರಾರಾಜಿಸುವುದಕ್ಕೆ ಹೊರಟಿದ್ದಾರೆ. ರೋಹಿತ್ ಹೊಸ ಉತ್ಸಾಹ ಹಾಗೂ ಹುಮ್ಮಸ್ಸಿನೊಂದಿಗೆ ಸಿನಿಮಾ ನಿರ್ಮಾಣಕ್ಕೂ ಕೈ ಹಾಕಿದ್ದಾರೆ. ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ 'ರಕ್ತಾಕ್ಷ' ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

'ರಕ್ತಾಕ್ಷ' ಸಿನಿಮಾವನ್ನು ವಾಸುದೇವ ಎಸ್. ಎನ್. ನಿರ್ದೇಶನ ಮಾಡುತ್ತಿದ್ದಾರೆ. ಅಂದ್ಹಾಗೆ ವಾಸುದೇವ್ ಆಕ್ಷನ್ ಕಟ್ ಹೇಳುತ್ತಿರುವ ಚೊಚ್ಚಲ ಸಿನಿಮಾವಿದೆ. ರೋಹಿತ್ ಜೊತೆ ಒಂದಷ್ಟು ಉತ್ಸಾಹಿ ಪ್ರತಿಭೆಗಳು ಸೇರಿ 'ರಕ್ತಾಕ್ಷ' ಸಿನಿಮಾ ಮಾಡಲು ಮುಂದಾಗಿದ್ದಾರೆ.

ಹೊಸ ಪ್ರತಿಭೆಗಳ 'ರಕ್ತಾಕ್ಷ' ಸಿನಿಮಾಗೆ ವಸಿಷ್ಠ ಸಿಂಹ ಸಾಥ್ ಕೊಟ್ಟಿದ್ದಾರೆ. ರೋಹಿತ್ ಹೀರೊ ಆಗಿ ನಟಿಸುತ್ತಿರುವ ಈ ಸಿನಿಮಾದ ಟೈಟಲ್ ಟ್ರ್ಯಾಕ್‌ಗೆ ಧ್ವನಿಯಾಗಿದ್ದಾರೆ. ಸುಜಿತ್ ವೆಂಕಟ್ ವೆಂಕಟರಾಮಯ್ಯ ಸಾಹಿತ್ಯ ಬರೆದಿದ್ರು, ಧೀರೇಂದರ್ ದಾಸ್ ಸಂಗೀತ ನೀಡಿದ್ದಾರೆ. ಅತೀ ಶೀಘ್ರದಲ್ಲಿ 'ರಕ್ತಾಕ್ಷ' ಸಿನಿಮಾದ ಟೈಟಲ್ ಟ್ರ್ಯಾಕ್ ರಿಲೀಸ್ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿದೆ.

Vasishta Simha gave support to newcomer Rohit and his movie Rakthaksh

ಬಾಲ್ಯದಿಂದಲೂ ಹೀರೊ ಆಗಬೇಕು ಅಂತ ಪಣ ತೊಟ್ಟಿದ್ದ ರೋಹಿತ್, ಕೊನೆಗೂ ಕನಸನ್ನು ಈಡೇರಿಸಿಕೊಳ್ಳುತ್ತಿದ್ದಾರೆ. ರೋಹಿತ್ ತನ್ನ ಜೊತೆ ಹಳ್ಳಿ ಪ್ರತಿಭೆಗಳಿಗೂ ಈ ಸಿನಿಮಾದಲ್ಲಿ ಅವಕಾಶ ನೀಡಿದ್ದಾರೆ. ಸದ್ಯಕ್ಕೆ ವಸಿಷ್ಠ ಸಿಂಹ ಸಾಥ್ ಕೊಟ್ಟು ಶುಭ ಹಾರೈಸಿದ್ದಾರೆ.

More from Filmibeat

English summary
Vasishta Simha gave support to newcomer Rohit and his movie Rakthaksh, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X