ವಸಿಷ್ಠ ಸಿಂಹ ಜನ್ಮದಿನದ ಸಂತಸ ಹೆಚ್ಚಿಸಿದ 'ಕಾಲಚಕ್ರ': ಏನದು?
ಸ್ಯಾಂಡಲ್ ವುಡ್ ನಟ ವಸಿಷ್ಠ ಸಿಂಹ ಹುಟ್ಟುಹಬ್ಬಕ್ಕೆ ಒಂದೇ ದಿನ ಬಾಕಿ ಇದೆ. ಆಗಲೇ ವಸಿಷ್ಠಗೆ ಸಂತೋಷದ ಸುದ್ದಿಯೊಂದು ಸಿಕ್ಕಿದೆ. ವಸಿಷ್ಠ ಸಿಂಹ ನಾಯಕನಾಗಿ ನಟಿಸಿರುವ 'ಕಾಲಚಕ್ರ' ಚಿತ್ರ ರಿಲೀಸ್ ಗೆ ರೆಡಿಯಾಗಿದೆ. ವಿಶೇಷ ಅಂದರೆ ಈ ಸಿನಿಮಾ ರಿಲೀಸ್ ಮೊದಲೇ ದಾಖಲೆ ನಿರ್ಮಾಣ ಮಾಡಿದೆ.
ಹೌದು, 'ಕಾಲಚಕ್ರ' ಸಿನಿಮಾದ ರಿಮೇಕ್ ರೈಟ್ಸ್ ಗೆ ಬೇಡಿಕೆ ಹೆಚ್ಚಾಗಿದೆ. ಈಗಾಗಲೇ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದೇ ಬೆನ್ನಲೇ ಈಗ ಮಲಯಾಳಂನ ನಿರ್ಮಾಪಕರು ಸಿನಿಮಾದ ಕಥೆ ಇಷ್ಟಪಟ್ಟು ಮಲಯಾಳಂನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.
ಮಲಯಾಳಂ ನಲ್ಲಿ ಕಾಲಚಕ್ರ ಚಿತ್ರ ನಿರ್ಮಿಸುತ್ತಿರುವ ಸಂಸ್ಥೆ ಯಾವುದು? ಯಾವಾಗ ಪ್ರಾರಂಭವಾಗುತ್ತದೆ? ಯಾರು ಅಭಿನಯಿಸುತ್ತಾರೆ ಎನ್ನುವ ಮಾಹಿತಿ ಇನ್ನು ಬಹಿರಂಗವಾಗಿಲ್ಲ. ಆದರೆ ಸದ್ಯದಲ್ಲೇ ಎಲ್ಲಾ ಮಾಹಿತಿ ಹೊರಬೀಳಲಿದೆ. ಅಕ್ಟೋಬರ್ 19ರಂದು ವಸಿಷ್ಠ ಸಿಂಹ ಅವರ ಹುಟ್ಟುಹಬ್ಬ. ಈ ಸಂದರ್ಭದಲ್ಲಿ ಅವರು ನಟಿಸಿರುವ ಚಿತ್ರದ ರಿಮೇಕ್ ಹಕ್ಕು ಮಲೆಯಾಳಂ ಗೆ ಮಾರಾಟವಾಗುತ್ತಿರುವುದು ನಿಜಕ್ಕೂ ಸಂತಸದ ವಿಷಯವಾಗಿದೆ.

ವಸಿಷ್ಠ ಸಿಂಹ ಈ ಸಿನಿಮಾದಲ್ಲಿ ನಾಲ್ಕು ವಿಭಿನ್ನ ಶೇಡ್ ಗಳಲ್ಲಿ ನಟಿಸಿದ್ದಾರೆ. ಸೈಕಲಾಜಿಕಲ್ ಕಥಾ ಹಂದರ ಹೊಂದಿರುವ ಈ ಸಿನಿಮಾ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಈ ಹಿಂದೆ ಕಿಚ್ಚ ಸುದೀಪ್ ಚಿತ್ರದ ಟೀಸರ್ ಹಾಗೂ ಹಾಡು ಬಿಡುಗಡೆ ಮಾಡಿ ಶುಭಕೋರಿದ್ದರು.
ಅಂದ್ಹಾಗೆ ಈ ಸಿನಿಮಾವನ್ನು ಸುಮಂತ್ ಕ್ರಾಂತಿ ನಿರ್ಮಾಣ ಮಾಡಿ, ನಿರ್ದೇಶನ ಸಹ ಮಾಡಿದ್ದಾರೆ. ಚಿತ್ರಕ್ಕೆ ಗುರುಕಿರಣ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ವಸಿಷ್ಠ ಸಿಂಹ ಜೊತೆಗೆ ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಸೇರಿದಂತೆ ಮುಂತಾದವರು ನಟಿಸಿದ್ದಾರೆ.


Click it and Unblock the Notifications











