ಶೀಘ್ರದಲ್ಲೇ ತೆರೆಮೇಲೆ ವಶಿಷ್ಠ ಸಿಂಹ ಕ್ಲಾಸ್ ಅಂಡ್ ಮಾಸ್ 'ಲವ್‌ಲಿ'

ಸ್ಯಾಂಡಲ್‌ವುಡ್‌ನಲ್ಲಿ ಬಹಳ ದಿನಗಳಿಂದ ಸದ್ದು ಮಾಡುತ್ತಿರುವ 'ಲವ್‌ಲಿ' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚೇತನ್ ಕೇಶವ್ ನಿರ್ದೇಶನದ ಈ ಚಿತ್ರದಲ್ಲಿ ವಸಿಷ್ಠ ಸಿಂಹ ನಾಯಕನಾಗಿ ನಟಿಸಿದ್ದಾರೆ. ಕ್ಲಾಸ್ ಹಾಗೂ ಮಾಸ್ ಅಂಶಗಳನ್ನು ಸೇರಿಸಿ ಸಿನಿಮಾ ಕಟ್ಟಿಕೊಡಲಾಗಿದೆ. ಹೀರೊ ಆಗಿ ವಸಿಷ್ಠಗೆ ಚಿತ್ರ ಒಳ್ಳೆ ಬ್ರೇಕ್ ಕೊಡುವ ನಿರೀಕ್ಷೆಯಿದೆ. ಕಳೆದ ತಿಂಗಳು ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗಿತ್ತು.

'ಲವ್‌ಲೀ' ಚಿತ್ರದ ಮೊದಲ ಭಾಗದಲ್ಲಿ ರೊಮ್ಯಾಂಟಿಕ್ ಕಥೆಯಿದ್ದರೆ ದ್ವಿತಿಯಾರ್ಧದಲ್ಲಿ ಒಂದೊಳ್ಳೆ ಕಥೆ ಹೇಳಿದ್ದಾರಂತೆ. ರೌಡಿಸಂ, ಲವ್, ಡ್ರಾಮಾ ಹಾಗೂ ಫ್ಯಾಮಿಲಿ ಸೆಂಟಿಮೆಂಟ್ ಜೊತೆಗೆ ಭರ್ಜರಿ ಮನರಂಜನೆ ಚಿತ್ರದಲ್ಲಿದೆ. ಅಭುವನಾಸ್ ಕ್ರೀಯೆಷನ್ಸ್ ಬ್ಯಾನರ್ ಅಡಿಯಲ್ಲಿ ರವೀಂದ್ರ ಕುಮಾರ್ ನಿರ್ಮಿಸಿರುವ ಈ ಚಿತ್ರದಲ್ಲಿ ಸ್ಟೇಪಿ ಪಟೇಲ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಚಿತ್ರದಲ್ಲಿ 3 ಫೈಟ್ಸ್ ಮತ್ತು 4 ಸಾಂಗ್ಸ್ ಇವೆ. ಮಂಗಳೂರು, ಬೆಂಗಳೂರು ಉಡುಪಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.

Vasishta -Simha-LoveLi

ಚಿತ್ರದಲ್ಲಿ ಮಾಸ್ಟರ್ ಆನಂದ್ ಪುತ್ರಿ ಬಾಲ ನಟಿ ವಂಶಿಕಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಗುರ್ತಿಸಿಕೊಂಡಿರುವ ಚೇತನ್ ಕೇಶನ್ 'ಮಫ್ತಿ' ಚಿತ್ರಕ್ಕೆ ನರ್ತನ್ ಬಳಿ ಸಹಾಯಕರಾಗಿ ಕೆಲಸ ಮಾಡಿದ್ದರು. ಶಾಲಾ ದಿನಗಳಿಂದಲೂ ಸಿನಿಮಾ ಮಾಡುವ ಆಸೆ ಇದ್ದ ಚೇತನ್, ರವಿಚಂದ್ರನ್, ಉಪೇಂದ್ರ ಅವರ ಸ್ಫೂರ್ತಿಯಿಂದ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದಾರೆ. ಸಹಾಯಕರಾಗಿ ಹೆಚ್ಚು ಆ್ಯಕ್ಷನ್ ಸಿನಿಮಾಗಳಿಗೆ ಕೆಲಸ ಮಾಡಿರುವ ನಿರ್ದೇಶಕರು 'ಲವ್‌ಲಿ' ಚಿತ್ರದಲ್ಲೂ ಮಾಸ್, ಕ್ಲಾಸ್ ಎರಡನ್ನಯ ಬ್ಲೆಂಡ್ ಮಾಡಿದ್ದಾರೆ.

ಪ್ರೀತಿಯಲ್ಲಿ ಏನೆಲ್ಲಾ ಏರಿಳಿತಗಳು ಇರುತ್ತವೇ ಎನ್ನುವುದನ್ನು 'ಲವ್‌ಲಿ' ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ರವೀಂದ್ರ ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ದತ್ತಾತ್ರೇಯ, ಮಾಳವಿಕಾ ಅವಿನಾಶ್‌, ಚಿತ್ಕಳಾ ಬಿರಾದಾರ್‌, ಸಾಧು ಕೋಕಿಲ, ಸಮೀಕ್ಷಾ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತ ನಿರ್ದೇಶನ, ಅಶ್ವಿನ್ ಕೆನಡಿ ಛಾಯಾಗ್ರಹಣವಿದೆ. ಇನ್ನು ಡಿಫ್‌ರೆಂಟ್ ಡ್ಯಾನಿ ಹಾಗೂ ಅರ್ಜುನ್ ರಾಜ್ ಸಾಹಸ ಸಂಯೋಜನೆ ಮಾಡಿದ್ದು ಕೆ. ಎಲ್ ರಾಜಶೇಖರ್ ಸಂಭಾಷಣೆ ಚಿತ್ರಕ್ಕಿದೆ.

Vasishta -Simha-LoveLi

ವಶಿಷ್ಠ ಸಿಂಹ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ರಗಡ್ ಹಾಗೂ ಅಷ್ಟೇ ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿದ್ದಾರೆ. ಸದ್ಯ ಟೀಸರ್ ಹಾಗೂ ಸಾಂಗ್ಸ್‌ಗಳಿಂದ 'ಲವ್‌ಲಿ' ಸಿನಿಮಾ ಸದ್ದು ಮಾಡ್ತಿದೆ. ಶೀಘ್ರದಲ್ಲೇ ಟ್ರೈಲರ್ ರಿಲೀಸ್ ಪ್ಲ್ಯಾನ್ ನಡೀತಿದ್ದು ಆಗಸ್ಟ್‌ನಲ್ಲಿ ಸಿನಿಮಾ ತೆರೆಗೆ ಬರುವ ನಿರೀಕ್ಷೆಯಿದೆ.

More from Filmibeat

English summary
Vasishta Simha Starrer LoveLi film releasing in August 2023. Directed by chethan Keshav Lovely is bankrolled by Ravindrakumar. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X