ನಟ ಭಯಂಕರ ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷನಾದ ವಸಿಷ್ಠ ಸಿಂಹ
ಸ್ಯಾಂಡಲ್ ವುಡ್ ನಲ್ಲಿ ವಿಶಿಷ್ಟ ಶೈಲಿಯ ನಟನೆ ಮತ್ತು ಗಡಸು ಧ್ವನಿಯ ಮೂಲಕ ಅಭಿಮಾನಿಗಳ ಹೃದಯ ಗೆದ್ದಿರುವ ನಟ ವಸಿಷ್ಠ ಸಿಂಹ. ಆಂಗ್ರಿ ಯಂಗ್ ಮ್ಯಾನ್ ವಸಿಷ್ಠ ಸದ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇದ್ದಾರೆ. ಮೊನ್ನೆ ಮೊನ್ನೆಯಷ್ಟೆ ವಸಿಷ್ಠ ಅಭಿನಯದ 'ಕಾಲಚಕ್ರ' ಚಿತ್ರದ ಸಾಂಗ್ ಟೀಸರ್ ಅನ್ನು ಕಿಚ್ಚ ಸುದೀಪ್ ರಿಲೀಸ್ ಮಾಡಿದ್ದಾರೆ.
ಇಂಡಿಯ ವರ್ಸಸ್ ಇಂಗ್ಲೆಂಡ್, ತಲ್ವಾರ್ ಪೇಟೆ, ಕೆಜಿಎಫ್-2 ಮತ್ತು ಸಲಗ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಇದರ ಜೊತೆಗೀಗ ವಸಿಷ್ಠ ನಟಭಯಂಕರ ವಜ್ರಮುನಿ ಅಭಿಮಾನಿಗಳ ಸಂಘದ ಅಧ್ಯಕ್ಷರಾಗಿದ್ದಾರೆ. ಅಂದ್ಹಾಗೆ ವಸಿಷ್ಠ ಅಧ್ಯಕ್ಷನಾಗಿದ್ದು ರಿಲಯ್ ಆಗಿ ಅಲ್ಲ ರೀಲ್ ಮೇಲೆ.
ವಸಿಷ್ಠ ಸಾಲು ಸಾಲು ಸಿನಿಮಾಗಳ ಜೊತೆಗೆ 'ಮರ್ಯಾದಸ್ಥ' ಎನ್ನುವ ಮತ್ತೊಂದು ಹೊಸ ಸಿನಿಮಾಗೆ ಒಪ್ಪಿಕೊಂಡಿದ್ದಾರೆ. ಈಗಾಗಲೆ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದ್ದು ಆಕರ್ಷಕವಾಗಿದೆ. ಪೋಸ್ಟರ್ ನಲ್ಲಿ ವಜ್ರಮುನಿಯ ಫೋಟೋವಿದ್ದು ಜೊತೆಗೆ ನಟ ಭಯಂಕರ ವಜ್ರಮುನಿ ಅಭಿಮಾನಿಗಳ ಸಂಘ, ನ್ಯಾಯದಹಳ್ಳಿ, ಮಂಡ್ಯ ಎನ್ನುವ ಬೋರ್ಡ್ ಇದೆ. ಪಕ್ಕದಲ್ಲಿ ಮರ್ಯಾದಸ್ಥ ವಸಿಷ್ಠ ಎರಡು ಕೈ ಎತ್ತಿ ಮುಗಿಯುತ್ತಿರುವ ಚಿತ್ರವಿದೆ.

ಈ ಬಗ್ಗೆ ಸ್ವತಹ ವಸಿಷ್ಠ ಟ್ವೀಟ್ ಮಾಡಿ ಫಸ್ಟ್ ಲುಕ್ ಶೇರ್ ಮಾಡಿದ್ದಾರೆ. ಟೈಟಲ್ ಜೊತೆಗೆ ಇಂಟ್ರಸ್ಟಿಂಗ್ ಆಗಿರುವ ಈ ಪೋಸ್ಟರ್ ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿದೆ. ಮರ್ಯಾದಸ್ಥ ಮಹೇಶ್ ಕೃಷ್ಣ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಚಿತ್ರಕ್ಕೆ ನಾಗರಾಜ್ ಭದ್ರಾವತಿ ಮತ್ತು ಮಹೇಶ್ ಕೆ. ಬಂಡವಾಳ ಹೂಡುತ್ತಿದ್ದಾರೆ.


Click it and Unblock the Notifications











