ವಸಿಷ್ಠ ಸಿಂಹಗೆ ಸಿಕ್ತು ಸುದೀಪ್ ಬಿರುದು: ವೇದಿಕೆ ಮೇಲೆ ಕಿಚ್ಚ ಹೇಳಿದ್ದೇನು?

ಅಭಿಮಾನಿಗಳು ಪ್ರೀತಿಯಿಂದ ತಮ್ಮ ನೆಚ್ಚಿನ ನಟನಿಗೆ ಬಿರುದ ನೀಡಿರುತ್ತಾರೆ. ಆ ಬಿರುದನ್ನು ಮತ್ತೊಬ್ಬ ನಟನ ಅಭಿಮಾನಿಗಳು ಕೊಟ್ಟಾಗ ವಿವಾದಗಳು, ಚರ್ಚೆಗಳು, ಪ್ರತಿರೋಧಗಳು ನಡೆದಿರುವ ಉದಾಹರಣೆಗಳಿವೆ. ಈ ಬಗ್ಗೆ ಹೆಚ್ಚೇನು ಹೇಳುವ ಅಗತ್ಯವಿಲ್ಲ.

ಇದೀಗ, ಕಿಚ್ಚ ಸುದೀಪ್ ಅವರ ಬಿರುದನ್ನು ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ಅವರಿಗೆ ನೀಡಲಾಗಿದೆ. ಈ ಬಗ್ಗೆ ಖುದ್ದು ಸುದೀಪ್ ಮಾತನಾಡಿದ್ದಾರೆ.

ಅಕ್ಟೋಬರ್ 17 ರಂದು ವಸಿಷ್ಠ ಸಿಂಹ ನಟನೆಯ ಕಾಲಚಕ್ರ ಸಿನಿಮಾದ ಟೀಸರ್ ಬಿಡುಗಡೆ ಸಮಾರಂಭಕ್ಕೆ ಹೋಗಿದ್ದ ಸುದೀಪ್, ಆ ಟೀಸರ್ ನಲ್ಲಿ ವಸಿಷ್ಠ ಅವರಿಗೆ ನೀಡಲಾಗಿರುವ ಬಿರುದಿನ ಬಗ್ಗೆ ಪ್ರಸ್ತಾಪಿಸಿದರು. ಅಷ್ಟಕ್ಕೂ, ವಸಿಷ್ಠ ಸಿಂಹ ಅವರಿಗೆ ನೀಡಲಾಗಿರುವ ಆ ಬಿರುದು ಯಾವುದು?

ಆಂಗ್ರಿಯಂಗ್ ಮ್ಯಾನ್ ಬಿರುದು

ಆಂಗ್ರಿಯಂಗ್ ಮ್ಯಾನ್ ಬಿರುದು

ವಸಿಷ್ಠ ಸಿಂಹ ನಟಸಿರುವ ಹೊಸ ಸಿನಿಮಾ ಕಾಲಚಕ್ರ. ಸುಮಂತ್ ಕ್ರಾಂತಿ ಈ ಚಿತ್ರವನ್ನ ನಿರ್ದೇಶಿಸಿದ್ದಾರೆ. ವಸಿಷ್ಠ, ರಕ್ಷಾ, ದೀಪಕ್ ಶೆಟ್ಟಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಗುರುಕಿರಣ್ ಸಂಗೀತ ಒಳಗೊಂಡಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ಅವರಿಗೆ ಆಂಗ್ರಿಯಂಗ್ ಮ್ಯಾನ್ ಎಂಬ ಬಿರುದು ನೀಡಿದ್ದಾರೆ.

ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಹೇಗೆ?

ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಹೇಗೆ?

ಈ ಟೀಸರ್ ನೋಡಿದ ಬಳಿಕ ವಸಿಷ್ಠ ಸಿಂಹ ಅವರಿಗೆ ನೀಡಲಾದ ಬಿರುದಿನ ಬಗ್ಗೆ ಪ್ರತಿಕ್ರಿಯಿಸಿದ ಸುದೀಪ್, ''ನನಗೆ ಒಂದು ಅರ್ಥ ಆಗ್ತಿಲ್ಲ. ಒಂದೇ ಇಂಡಸ್ಟ್ರಿಯಲ್ಲಿ ಇಬ್ಬರು ಆಂಗ್ರಿಯಂಗ್ ಮ್ಯಾನ್ ಇರಲು ಹೇಗೆ ಸಾಧ್ಯ. ಸಿಕ್ಕಿರೋದೆ ಅಲ್ಪ ಸ್ವಲ್ಪ ಬಿರುದುಗಳು, ಅದನ್ನ ತೆಗೆದುಕೊಂಡು ಹೀಗೆ ಹಾಕ್ಕೊಂಡ್ರೆ ಹೇಗೆ. ಟೈಟಲ್ ಪೈರಸಿ ನಡೆಯುತ್ತಿದೆ'' ಎಂದು ಚಿತ್ರತಂಡಕ್ಕೆ ಕಾಲೆಳೆದರು. ಈ ಬಗ್ಗೆ ಸುದೀಪ್ ಗಂಭೀರವಾಗಿ ಹೇಳಿಲ್ಲ. ಸ್ನೇಹಪೂರ್ವಕವಾಗಿಯೇ ಹೇಳಿದ್ರು.

ವಸಿಷ್ಠ ಬ್ರಿಲಿಯೆಂಟ್ ಆಕ್ಟರ್

ವಸಿಷ್ಠ ಬ್ರಿಲಿಯೆಂಟ್ ಆಕ್ಟರ್

''ವಸಿಷ್ಠ ಸಿಂಹ ಅವರು ಒಬ್ಬ ಬ್ರಿಲಿಯೆಂಟ್ ಆಕ್ಟರ್. ಅವರ ಧ್ವನಿ ಮತ್ತು ಮಾಡುವ ಪಾತ್ರಗಳು ಬೋನಸ್ ಇದ್ದಂಗೆ. ಒಬ್ಬ ನಟ ಗೆಲ್ಲುವುದಕ್ಕೆ ಕಮರ್ಷಿಯಲ್ ಚಿತ್ರಗಳು ಬೇಕು. ಆದರೆ, ಕಲಾವಿದನಾಗಿ ಉಳಿಯೋಕೆ ಇಂತಹ ಸಿನಿಮಾ ಬೇಕು. ಅದನ್ನ ಕಾಪಾಡಿಕೊಳ್ಳಿ'' ಎಂದು ಸಲಹೆ ನೀಡಿದರು.

ಹುಚ್ಚ ಸಿನಿಮಾ ನೋಡಿ ಫ್ಯಾನ್ ಆದೆ

ಹುಚ್ಚ ಸಿನಿಮಾ ನೋಡಿ ಫ್ಯಾನ್ ಆದೆ

''ಹುಚ್ಚ ಸಿನಿಮಾ ನೋಡಿದಾಗಲೇ ನಾನು ಸುದೀಪ್ ಅವರಿಗೆ ಫ್ಯಾನ್. ಸುದೀಪ್ ನಟಿಸಿದ ವಾಲಿ ಸಿನಿಮಾ ತುಂಬ ಇಷ್ಟ. ಮಾಣಿಕ್ಯ ಸಿನಿಮಾದ ವೇಳೆಯಲ್ಲಿ ಸುದೀಪ್ ಅವರನ್ನ ಮೊದಲ ಭೇಟಿ ಮಾಡಿದೆ. ಸುದೀಪ್ ಅವರ ಸಿನಿಮಾಗಳು ಮತ್ತು ಪಾತ್ರಗಳನ್ನ ನನ್ನನ್ನು ಪ್ರೇರಣೆ ನೀಡಿದೆ'' ಎಂದು ಸಂತಸ ವ್ಯಕ್ತಪಡಿಸಿದರು.

More from Filmibeat

English summary
Kannada actor vasista simha starrer kaalachakra movie song teaser has released. vasista used sudeep title in in this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X