'ಟಗರು' ಶಿವನಿಗೆ 'ಚಿಟ್ಟೆ'ಯಿಂದ ಬಂದ ಶುಭಾಶಯ

'ಟಗರು' ಫಿಲ್ಡ್ ಗೆ ಇಳಿದು ಇಂದಿಗೆ 33 ವರ್ಷಗಳು ಕಳೆದಿವೆ. ಅರ್ಥಾತ್ ನಟ ಶಿವರಾಜ್ ಕುಮಾರ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿ ಇಂದಿಗೆ 33 ವರ್ಷಗಳಾಗಿವೆ. ಇಂದಿಗೂ ಅದೇ ಉತ್ಸಾಹದಲ್ಲಿರುವ ಶಿವಣ್ಣನಿಗೆ ಅಭಿಮಾನಿಗಳ ಶುಭಾಶಯಗಳು ಹರಿದು ಬರುತ್ತಿದೆ.

ಪ್ರೀತಿಯ ಶಿವಣ್ಣನಿಗೆ ನಟ ವಸಿಷ್ಠ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಮೂಲಕ ವಿಶ್ ಮಾಡಿದ್ದಾರೆ. ''ಹೋ 33 ವರ್ಷ... ಈ ಅದ್ಬುತ ವ್ಯಕ್ತಿ ನನಗೆ ಅಣ್ಣನ ತರ. ನಿಮ್ಮ ಜೀವನದಲ್ಲಿ ಖುಷಿ ಹಾಗೂ ಸಂತಸ ತುಂಬಿರಲಿ. ಇದೇ ರೀತಿ ಯಶಸ್ವಿ ವರ್ಷಗಳು ನಿಮ್ಮದಾಗಲಿ. ನಮ್ಮನ್ನು ಹೀಗೆಯೇ ರಂಜಿಸುತ್ತಿರಿ.'' ಎಂದು ವಸಿಷ್ಠ ಶುಭಾಶಯ ತಿಳಿಸಿದ್ದಾರೆ.

vasista simha wishes for shivaraj kumar

ಶಿವರಾಜ್ ಕುಮಾರ್ ಜೊತೆಗಿನ ಫೋಟೋ ಹಾಕುವ ಮೂಲಕ ಅವರಿಗೆ ಶುಭಾಶಯ ತಿಳಿಸಿದ್ದಾರೆ. 'ಟಗರು' ಸಿನಿಮಾದಲ್ಲಿ ಚಿಟ್ಟೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವಸಿಷ್ಠ ಈಗ ಮತ್ತೆ ಶಿವರಾಜ್ ಕುಮಾರ್ ಜೊತೆಗೆ ನಟಿಸುತ್ತಿದ್ದಾರೆ. 'ಕವಚ'ದಲ್ಲಿ ವಸಿಷ್ಠ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಶಿವಣ್ಣನ ಈ ದಿನವನ್ನು ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚಿನ ನಟನಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಸದ್ಯ ಶಿವರಾಜ್ ಕುಮಾರ್ 'ರುಸ್ತುಂ', 'ದ್ರೋಣ' ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಬ್ಯುಸಿ ಇದ್ದಾರೆ.

More from Filmibeat

English summary
Kannada actor Shivaraj Kumar completed 33 years in movie industry. Vasista Simha wishes for Shivaraj Kumar.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X