twitter
    For Quick Alerts
    ALLOW NOTIFICATIONS  
    For Daily Alerts

    ಸಿನಿಮಾ ಅನಿಮೇಷನ್ ಗೆ ಹೊಸ ದಾರಿ 'ವೇದಾತ್ಮ'

    By Rajendra
    |
    <ul id="pagination-digg"><li class="next"><a href="/news/animation-graphics-in-affordable-price-at-vedatma-082271.html">Next »</a></li></ul>

    ಅದೊಂದು ಮೈನವಿರೇಳಿಸು ಚೇಸಿಂಗ್ ಸೀನು. ಪ್ರೇಕ್ಷಕರು ಆ ಚೇಸಿಂಗ್ ಸೀನ್ ನೋಡುತ್ತಾ ನೋಡುತ್ತಾ ಸೀಟಿನ ಅಂಚಿಗೆ ಬಂದಿರುತ್ತಾರೆ. ಹೀರೋನನ್ನು ಖಳನಾಯಕ ಪ್ರಪಾತಕ್ಕೆ ತಳ್ಳಿಬಿಡುತ್ತಾನೆ. ಛೇ ಎಂದು ಕುಳಿತಲ್ಲೇ ಪ್ರೇಕ್ಷಕರು ಚಡಪಡಿಸಿಬಿಡುತ್ತಾರೆ.

    ಇನ್ನೊಂದು ರೊಮ್ಯಾಂಟಿಕ್ ಸೀನ್ ನಲ್ಲಿ ಪ್ರೇಕ್ಷಕ ಹಾಗೇ ಮೈಮರೆತು ಕನಸಿನ ಲೋಕದಲ್ಲಿ ತೇಲಾಡುತ್ತಿರುತ್ತಾನೆ. ಆ ಹೀರೋಯಿನ್ ಕತ್ತಿನ ಕೆಳಗಿನ ಕಪ್ಪು ಮಚ್ಚೆಯನ್ನು ಮರೆಯಕ್ಕೇ ಆಗ್ತಾ ಇಲ್ಲ. ನಿಜಕ್ಕೂ ಮಚ್ಚೆಯನ್ನು ಇದುವರೆಗೂ ಯಾರೂ ತೋರಿಸಿಯೇ ಇಲ್ಲವಲ್ಲಾ ಎಂದು ಯೋಚನೆಗೆ ಬೀಳುತ್ತಾನೆ.

    ಒಂದು ಸಿನಿಮಾದಲ್ಲಿನ ವಿಎಫ್ಎಕ್ಸ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ಬಗೆಗಿನ ಆಳ, ಅಗಲ, ವಿಸ್ತಾರದ ಬಗೆಗಿನ ಒಂದು ಸಣ್ಣ ನಿದರ್ಶನಕ್ಕೆ ಇವು ಉದಾಹರಣೆಗಳಷ್ಟೇ. ಅದು ಹಾಲಿವುಡ್, ಬಾಲಿವುಡ್ ಆಗಿರಬಹುದು ಅಥವಾ ನಮ್ಮ ಸ್ಯಾಂಡಲ್ ವುಡ್ಡೇ ಇರಲಿ ಚಿತ್ರದಲ್ಲಿ ಮೈಮರೆತ ಪ್ರೇಕ್ಷಕರ ಗಮನಕ್ಕೆ ಅಷ್ಟಾಗಿ ಬಾರದ ಸಂಗತಿ ಎಂದರೆ ವಿಎಫ್ಎಕ್ಸ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್.

    ಅಬ್ಬಬ್ಬಾ ಏನ್ ಫೈಟಿಂಗ್, ಏನ್ ಚೇಸಿಂಗ್, ಸೂಪರ್ ಗುರು ಎಂದು ಶಿಳ್ಳೆ ಹೊಡೆಯುವಂತೆ ಮಾಡುತ್ತದೆ ಈ ಗ್ರಾಫಿಕ್ಸ್. ಹೀರೋಯಿನ್ ಸೊಂಟದ ಮೇಲಿನ ಚಿಟ್ಟೆ, ಕೆನ್ನೆ ಮೇಲಿನ ಮಚ್ಚೆ ಅದು ಏನೇ ಇರಲಿ ಪ್ರೇಕ್ಷಕರಿಗೆ ಭಿನ್ನ ಅನುಭವ ನೀಡುತ್ತದೆ ಕಂಪ್ಯೂಟರ್ ಗ್ರಾಫಿಕ್ಸ್.

    ಇದರ ಹಿಂದೆ ಒಬ್ಬ ವ್ಯಕ್ತಿ ಇರಲ್ಲ. ಹಲವಾರು ತಂತ್ರಜ್ಞರ ಕೈವಾಡ ಇರುತ್ತದೆ. ಸ್ಪೆಷೆಲ್ ಎಫೆಕ್ಟ್ಸ್ ಕೊಡುವವರಿಗೆ ತಂತ್ರಜ್ಞಾನದ ಜೊತೆಗೆ ಕಲೆನೂ ಕರಗತವಾಗಿರಬೇಕು. ಒಂದರ್ಥದಲ್ಲಿ ತಂತ್ರಜ್ಞಾನ ಹಾಗೂ ಕಲೆಗಳ ಸಮ್ಮಿಲನ ಈ ಸಿಜಿ ಅರ್ಥಾತ್ ಕಂಪ್ಯೂಟರ್ ಗ್ರಾಫಿಕ್ಸ್.

    Vedatma Animation Studios bangalore CG VFX for sandalwood

    ಸಾಧಾರಣವಾಗಿ ನಮ್ಮ ಕನ್ನಡ ಚಿತ್ರೋದ್ಯಮ ಕಂಪ್ಯೂಟರ್ ಗ್ರಾಫಿಕ್ಸ್ ಗಾಗಿ ಅದಮ್ಯವಾಗಿ ನೆಚ್ಚಿಕೊಂಡಿರುವುದು ಚೆನ್ನೈ ಹಾಗೂ ಹೈದರಾಬಾದ್ ಗಳನ್ನು. ಆದರೆ ನಮ್ಮಲ್ಲೇ ಎಲೆಮರೆಯಕಾಯಿಯಂತೆ ಹಲವಾರು ಸಂಸ್ಥೆಗಳಿವೆ. ಚೆನ್ನೈ, ಹೈದರಾಬಾದಿಗಿಂತಲೂ ಅತ್ಯದ್ಭುತವಾಗಿ, ಕಡಿಮೆ ಬಜೆಟ್ ನಲ್ಲಿ ಕಂಪ್ಯೂಟರ್ ಗ್ರಾಫಿಕ್ಸ್ ಹಾಗೂ ಅನಿಮೇಷನ್ ಮಾಡಿಕೊಡುವ ನುರಿತ ತಂತ್ರಜ್ಞರಿದ್ದಾರೆ.

    ಸ್ಯಾಂಡಲ್ ವುಡ್ ನಲ್ಲಿ ಸದ್ದಿಲ್ಲದಂತೆ ವಿಎಫ್ಎಕ್ಸ್ ಹಾಗೂ ಕಂಪ್ಯೂಟರ್ ಗ್ರಾಫಿಕ್ಸ್ ನಲ್ಲಿ ತನ್ನದೇ ಆದಂತಹ ಛಾಪು ಮೂಡಿಸುತ್ತಿರುವ ಸಂಸ್ಥೆ ವೇದಾತ್ಮ ಅನಿಮೇಷನ್ ಸ್ಟುಡಿಯೋ. ಈ ಸಂಸ್ಥೆಯ ರೂವಾರಿ ಬಿ.ಎಸ್.ಶ್ರೀನಿವಾಸ್. ಕೇವಲ ಸಂಸ್ಥೆಯ ಸಿಇಓ ಅಷ್ಟೇ ಅಲ್ಲದೆ ಅವರು ಅಪ್ಪಟ ಕನ್ನಡಿಗ ಹಾಗೂ ಕನ್ನಡ ಚಿತ್ರಪ್ರೇಮಿ.

    ಕನ್ನಡ ಚಿತ್ರಗಳನ್ನು ಮನಸಾರೆ ಪ್ರೀತಿಸಿ, ಆಸ್ವಾದಿಸಿ, ಅಲ್ಲಿನ ತಪ್ಪು ಒಪ್ಪುಗಳನ್ನು ಕಂಡುಹಿಡಿಯುವ ಸೂಕ್ಷ್ಮ ಮನಸ್ಸಿನ ಒಬ್ಬ ಪ್ರೇಕ್ಷಕ ಕೂಡ ಅವರ ಮನಸ್ಸಿನಲ್ಲಿದ್ದಾನೆ. ಕನ್ನಡ ಚಿತ್ರಗಳ ನಾಯಕ ನಟರ ಹಾವಭಾವ, ಅವರ ಫ್ಯಾನ್ಸ್ ಏನು ಬಯಸುತ್ತಾರೆ ಎಂಬುದು ಕನ್ನಡಿಗರಿಗೆ ಬಿಟ್ಟು ಬೇರೆ ಭಾಷೆಯವರಿಗೆ ಅಷ್ಟಾಗಿ ಗೊತ್ತಿರುವುದಿಲ್ಲ ಎಂಬುದು ಶ್ರೀನಿವಾಸ್ ಅವರ ಪತ್ನಿ ಸುಕನ್ಯಾ ಶ್ರೀನಿವಾಸ್ ಅವರ ಅನುಭವದ ಮಾತು.

    <ul id="pagination-digg"><li class="next"><a href="/news/animation-graphics-in-affordable-price-at-vedatma-082271.html">Next »</a></li></ul>

    English summary
    VEDATMA ANIMATION STUDIOS, Bangalore focusing on creating a new path in the realms of animation filmmaking. It delivers CG and VFX in affordable price to cmpard to Chenni and Hyderabad based studios.
    Monday, March 17, 2014, 12:05
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X