»   » ಕನ್ನಡವನ್ನು ಕಲಿತು ಡಬ್ ಮಾಡುವೆ; ವೀಣಾ ಮಲಿಕ್

ಕನ್ನಡವನ್ನು ಕಲಿತು ಡಬ್ ಮಾಡುವೆ; ವೀಣಾ ಮಲಿಕ್

Posted By:
Subscribe to Filmibeat Kannada
ನಿನ್ನೆ ತಾನೆ ತಮ್ಮ ಡರ್ಟಿ ಚಿತ್ರದ ಫೋಟೋ ಶೂಟ್ ಗಾಗಿ ಬೆಂಗಳೂರಿಗೆ ಬಂದಿಳಿದ ವೀಣಾ ಮಲಿಕ್ ಕನ್ನಡದ ನನ್ನ ಚಿತ್ರಕ್ಕೆ ನಾನೇ ಡಬ್ ಮಾಡುತ್ತೇನೆ ಎನ್ನುವ ಮೂಲಕ ಹೊಸ ಮಿಂಚಿನ ಸಂಚಾರ ಮೂಡಿಸಿದ್ದಾರೆ. ಡರ್ಟಿ ಪಿಕ್ಚರ್ ಗಾಗಿ ಫೋಟೋ ಶೂಟ್ ನಲ್ಲಿ ಭಾಗಿಯಾಗಿರು ವೀಣಾ, "ಬೆಂಗಳೂರು ತುಂಬಾ ಚೆನ್ನಾಗಿದೆ" ಎಂದು ಉದ್ಘರಿಸಿದ್ದಾರೆ.

"ನಾನಿನ್ನೂ ಹಿಂದಿಯಲ್ಲಿ ಬಂದಿರುವ 'ದಿ ಡರ್ಟಿ ಪಿಕ್ಚರ್ ನೋಡಿಲ್ಲ. ಆದರೆ ಈ ಡರ್ಟಿ ಪಿಕ್ಚರ್ ಆ ಡರ್ಟಿ ಅಲ್ಲ ಅಂತ ನಿರ್ದೇಶಕರು ಹೇಳಿದ್ದಾರೆ. ಇದು ನಟಿ ಸಿಲ್ಕ್ ಸ್ಮಿತಾ ಜೀವನಗಾಥೆ ಎಂದು ತಿಳಿದ ಮೇಲೆ ಅವರ ಬಗ್ಗೆ ಇಂಟರ್ನೆಟ್ ನಲ್ಲಿ ಓದಿ ಕೆಲ ವಿಷಯಗಳನ್ನು ತಿಳಿದುಕೊಂಡಿದ್ದೇನೆ.

ಈ ಚಿತ್ರಕ್ಕೆ ನನ್ನಿಂದ ಸಾಧ್ಯವಾದಷ್ಟೂ ನ್ಯಾಯ ಸಲ್ಲಿಸುತ್ತೇನೆ. ಹೀಗಾಗಿ ಕನ್ನಡ ಕಲಿತು ನನ್ನ ಪಾತ್ರಕ್ಕೆ ನಾನೇ ಡಬ್ ಮಾಡಲು ಇಷ್ಟಪಡುತ್ತೇನೆ" ಎಂದಿದ್ದಾರೆ ಪಾಕಿಸ್ತಾನಿ ಮೂಲದ ನಟಿ ವೀಣಾ ಮಲಿಕ್. ನಿನ್ನೆ ಪ್ರೆಸ್ ಮೀಟ್ ನಲ್ಲಿ ಮಾತನಾಡಿದ ವೀಣಾ, ಮಾತುಮಾತಿಗೂ ಕರ್ನಾಟಕ ಸೊಗಸಾಗಿದೆ ಎನ್ನುವುದನ್ನು ಮರೆಯಲಿಲ್ಲ. (ಒನ್ ಇಂಡಿಯಾ ಕನ್ನಡ)

English summary
Pakistani actress Veena Malik, the hot beauty came yesterday to Bangalore for her upcoming Kannada movie 'Dirty Picture' Photo Shoot. She attended Pressmeet and told that she liked Bangalore very much. And also she told, se will learn Kannada and dubb her vioce to her role in this Kannada movie.
Please Wait while comments are loading...