»   » ಈ ತಮಿಳು ನಟಿಗೆ ಚಾಲೆಂಜಿಂಗ್ ಸ್ಟಾರ್ ಅಂದ್ರೆ ಅಚ್ಚುಮೆಚ್ಚು

ಈ ತಮಿಳು ನಟಿಗೆ ಚಾಲೆಂಜಿಂಗ್ ಸ್ಟಾರ್ ಅಂದ್ರೆ ಅಚ್ಚುಮೆಚ್ಚು

Posted By:
Subscribe to Filmibeat Kannada
ದರ್ಶನ ಅಂದ್ರೆ ನನಗೆ ತುಂಬಾ ಇಷ್ಟ ಎಂದ ಕಾಲಿವುಡ್ ನಾಯಕಿ ಶೈನಿ | FIlmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಎಂದು ಹೆಸರು ಪಡೆದುಕೊಂಡವರು. ಕಮರ್ಷಿಯಲ್ ಮಾಸ್ ಚಿತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನಸ್ಸು ಗೆದ್ದಿರುವ ಡಿ ಬಾಸ್ ಪರ ಭಾಷೆಯ ಸಿನಿಮಾಗಳಲ್ಲಿ ಅಭಿನಯಿಸಿಲ್ಲ.

ಕನ್ನಡದ ಸಾಕಷ್ಟು ಕಲಾವಿದರು ಕನ್ನಡ ಹಾಗೂ ಬೇರೆ ಬೇರೆ ಭಾಷೆಯ ಸಿನಿಮಾಗಳಲ್ಲಿ ಆಕ್ಟ್ ಮಾಡುವ ಮೂಲಕ ಅಲ್ಲಿಯೂ ಹೆಸರು ಮತ್ತು ಪ್ರಖ್ಯಾತಿಯನ್ನ ಗಳಸಿದ್ದಾರೆ. ಆದರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬೇರೆ ಭಾಷೆಗಳಲ್ಲಿ ಅಭಿನಯಿಸದೇ ಇದ್ದರೂ ತಮ್ಮ ಅಭಿನಯದ ಮೂಲಕ ಅಲ್ಲಿನ ಕಲಾವಿದರ ಮನಸ್ಸು ಗೆದ್ದಿದ್ದಾರೆ.

ಕಾಲಿವುಡ್ ನಟಿಯೊಬ್ಬರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂದರೆ ಇಷ್ಟವಂತೆ. ಹೀಗಂತ ಆ ನಟಿ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಹಾಗಾದರೆ ಡಿ ಬಾಸ್ ರನ್ನ ಇಷ್ಟ ಪಡುತ್ತಿರುವ ಆ ನಟಿ ಯಾರು? ಚಂದನವನದ ದಾಸನ ಬಗ್ಗೆ ಕಾಲಿವುಡ್ ಹೀರೋಯಿನ್ ಹೇಳಿದ್ದೇನು? ಮುಂದೆ ಓದಿ

ದರ್ಶನ್ ಅಭಿನಯಕ್ಕೆ ಮನಸೋತ ನಟಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯದಲ್ಲೂ ತಮ್ಮ ಅಭಿಮಾನಿಗಳನ್ನ ಹೊಂದಿದ್ದಾರೆ ಎನ್ನುವುದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ಕಾಲಿವುಡ್ ನಟಿಯೊಬ್ಬರು ತಮ್ಮ ಸಂದರ್ಶನದಲ್ಲಿ ಕನ್ನಡದ ನಟ ದರ್ಶನ್ ಎಂದರೆ ನನಗೆ ಇಷ್ಟ ಎಂದು ಹೇಳಿಕೊಂಡಿದ್ದಾರೆ.

ವೀರೈಯಾನ್ ನಾಯಕಿಗೆ ದರ್ಶನ್ ಎಂದರೆ ಇಷ್ಟ

ಕಳೆದ ವರ್ಷದ ನವೆಂಬರ್ ನಲ್ಲಿ ತಮಿಳಿನ ವೀರೈಯಾನ್ ಎನ್ನುವ ಸಿನಿಮಾ ತೆರೆಕಂಡಿತ್ತು. ಚಿತ್ರದಲ್ಲಿ ನಾಯಕಿಯಾಗಿ ನಟಿ ಶೈನಿ ಅಭಿನಯಿಸಿದ್ದರು. ಚಿತ್ರ ರಿಲೀಸ್ ಸಮಯದಲ್ಲಿ ನಡೆಸಿರುವ ಸಂದರ್ಶನದಲ್ಲಿ ನಟಿ ಶೈನಿ ನನಗೆ ಕನ್ನಡದ ಸ್ಟಾರ್ ಗಳಲ್ಲಿ ದರ್ಶನ್ ಎಂದರೆ ಇಷ್ಟ ಎಂದಿದ್ದಾರೆ.

ಅಭಿಮಾನಿಗಳಿಗೆ ಸಂತಸದ ಸುದ್ದಿ

ಶೈನಿ ಅವರ ಸಂದರ್ಶನದ ವಿಡಿಯೋ ಸದ್ಯ ವೈರಲ್ ಆಗುತ್ತಿದೆ. ಬೇರೆ ಭಾಷೆಯ ಸಿನಿಮಾಗಳಲ್ಲಿ ಅಭಿನಯ ಮಾಡದಿದ್ದರು ದರ್ಶನ್ ಅವರನ್ನ ಪರ ಭಾಷೆಯ ಕಲಾವಿದರು ಮೆಚ್ಚಿಕೊಂಡಿರುವುದಕ್ಕೆ ಡಿ ಬಾಸ್ ಅಭಿಮಾನಿಗಳು ಸಂತಸ ವ್ಯಕ್ತ ಪಡಿಸಿದ್ದಾರೆ.

ಕನ್ನಡ ಸಿನಿಮಾಗಳಲ್ಲಿ ಮಾತ್ರ ನಟನೆ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಕನ್ನಡ ಸಿನಿಮಾಗಳಲ್ಲಿ ಮಾತ್ರ ಅಭಿನಯಿಸುವುದಾಗಿ ನಿರ್ಧಾರ ಮಾಡಿದ್ದಾರೆ. ಕನ್ನಡ ಪ್ರೇಕ್ಷಕರಿಂದಲೇ ಹೆಸರು ಮತ್ತು ಕೀರ್ತಿ ಗಳಿಸಿರುವುದರಿಂದ ಇಲ್ಲಿಯ ಜನರಿಗೆ ಮನೋರಂಜನೆ ಕೊಡುವುದು ನಮ್ಮ ಕೆಲಸ ಎಂದು ಬಲವಾಗಿ ನಂಬಿಕೊಂಡಿದ್ದಾರೆ.

English summary
Tamil Movie 'Veeraiyan' Heroine Shaini's favorite Actor is Challenging Star Darshan. Shaini has shared this in an Interview.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X