twitter
    For Quick Alerts
    ALLOW NOTIFICATIONS  
    For Daily Alerts

    'ಬಾಹುಬಲಿ-2' ಕಟ್ಟಪ್ಪನ ವಿರುದ್ಧ ಕನ್ನಡಿಗರ ರಣಕಹಳೆ.!

    By Harshitha
    |

    ಎಸ್.ಎಸ್.ರಾಜಮೌಳಿ ನಿರ್ದೇಶನದ 'ಬಾಹುಬಲಿ-2' ಚಿತ್ರ ದೇಶಾದ್ಯಂತ ಸಿಕ್ಕಾಪಟ್ಟೆ ಹವಾ ಕ್ರಿಯೇಟ್ ಮಾಡಿದೆ. ಏಪ್ರಿಲ್ ನಲ್ಲಿ ತೆರೆ ಕಾಣುವ 'ಬಾಹುಬಲಿ-2' ಚಿತ್ರವನ್ನ ಕಣ್ತುಂಬಿಕೊಳ್ಳಲು ಸಿನಿ ಪ್ರಿಯರು ತುದಿಗಾಲಿನಲ್ಲಿ ನಿಂತಿದ್ದಾರೆ.

    ಹೀಗಿರುವಾಗಲೇ, ಕರ್ನಾಟಕದಲ್ಲಿ 'ಬಾಹುಬಲಿ-2' ಚಿತ್ರ ಪ್ರದರ್ಶನಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಕಾವೇರಿ ವಿವಾದದ ಸಮಯದಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಕಟ್ಟಪ್ಪ ಆಡಿದ ಲಘು ಮಾತುಗಳು ಈಗ 'ಬಾಹುಬಲಿ-2' ಚಿತ್ರಕ್ಕೆ ಕರ್ನಾಟಕದಲ್ಲಿ ಕಂಟಕ ಎದುರಾಗಿದೆ.['ಬಾಹುಬಲಿ-2' ಚಿತ್ರದಲ್ಲಿ ಸುದೀಪ್ ನಟಿಸಿದ್ದಾರಾ? ಅವರೇ ಕೊಟ್ಟ ಉತ್ತರ..]

    ''ಬಾಹುಬಲಿ-2' ಚಿತ್ರವನ್ನ ಕರ್ನಾಟಕದಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ'' ಅಂತ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ತಮ್ಮ ಫೇಸ್ ಬುಕ್ ಪುಟದ ಮೂಲಕ ಕರೆ ನೀಡಿದ್ದಾರೆ.

    ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಬರೆದಿರುವುದೇನು.?

    ಫೇಸ್ ಬುಕ್ ನಲ್ಲಿ ವೀರಕಪುತ್ರ ಶ್ರೀನಿವಾಸ್ ಬರೆದಿರುವುದೇನು.?

    ''ಕನ್ನಡ-ಕನ್ನಡಿಗ-ಕರ್ನಾಟಕದ ಬಗ್ಗೆ ಅದ್ಯಾರೋ ಕಟ್ಟಪ್ಪನೋ, ಕೆಟ್ಟಪ್ಪನೋ, ಹುಚ್ಚಪ್ಪನೋ ಅಥವಾ ಅಪ್ರಬುದ್ಧನೋ ಆಡಿದ ಲಘು ಮಾತುಗಳ ಹಿನ್ನಲೆಯಲ್ಲಿ 'ಬಾಹುಬಲಿ-2' ಚಿತ್ರವನ್ನು ಇಲ್ಲಿ ನಿಷೇಧಿಸುವುದಾದರೆ ಖಂಡಿತ ಒಗ್ಗಟ್ಟಿನ ಹೋರಾಟಕ್ಕಿಳಿಯೋಣ'' - ವೀರಕಪುತ್ರ ಶ್ರೀನಿವಾಸ್ [ಬಿಡುಗಡೆಗೂ ಮುನ್ನ ಕೋಟಿ ಕೋಟಿ ಲೂಟಿ ಮಾಡಿದ 'ಬಾಹುಬಲಿ-2']

    ಕನ್ನಡಿಗರ ಶಕ್ತಿ ಪ್ರದರ್ಶನ ಆಗಲಿ

    ಕನ್ನಡಿಗರ ಶಕ್ತಿ ಪ್ರದರ್ಶನ ಆಗಲಿ

    ''ಅವರು ಜಲ್ಲಿಕಟ್ಟುಗೆ ಹೋರಾಡಿದ ರೀತಿಯೇ ನಾವು ಕಟ್ಟಪ್ಪನ ತೆರೆ ದರ್ಶನ ನಿಷೇಧಕ್ಕೆ ಯತ್ನಿಸೋಣ. ಆಗುವುದಾದರೆ ಕನ್ನಡಿಗರ ಶಕ್ತಿಪ್ರದರ್ಶನವಾಗಲಿ'' - ವೀರಕಪುತ್ರ ಶ್ರೀನಿವಾಸ್

    ಕನ್ನಡಿಗರ ಮಾನ ಹರಾಜಾಗುವುದು ಬೇಡ

    ಕನ್ನಡಿಗರ ಮಾನ ಹರಾಜಾಗುವುದು ಬೇಡ

    ''ಆದರೆ ಇತ್ತ ಕನ್ನಡಿಗರನ್ನು ಮುಂದೆಬಿಟ್ಟು, ಹೋರಾಟದ ಕಾವನ್ನು ಹೆಚ್ಚಿಸಿ, ಅತ್ತ ಡಿಸ್ಟ್ರಿಬ್ಯೂಟರ್/ನಿರ್ಮಾಪಕನ ಜೊತೆ ವ್ಯಾಪಾರಕ್ಕಿಳಿಯಬೇಡಿ. ಯಾರದೋ ಸ್ವಾರ್ಥ ಮತ್ತು ಪ್ರಚಾರಕ್ಕೆ ಕನ್ನಡಿಗರ ಮಾನ ಹರಾಜಾಗುವುದು ಬೇಡ'' - ವೀರಕಪುತ್ರ ಶ್ರೀನಿವಾಸ್

    ಹೋರಾಟ ನಗೆಪಾಟಲಿಗೆ ಈಡಾಗದಿರಲಿ

    ಹೋರಾಟ ನಗೆಪಾಟಲಿಗೆ ಈಡಾಗದಿರಲಿ

    ''ಕಾನೂನು ಸಹ ನಿರ್ಮಾಪಕರ ಪರವಾಗುವ ಸಾಧ್ಯತೆಗಳಿರುವುದರಿಂದ ಮತ್ತು ಬೆಳಗಿನ ಜಾವ 4 ಗಂಟೆ ಪ್ರದರ್ಶನಕ್ಕೆ ನಮ್ಮ ಚಿತ್ರರಂಗದ ಗಣ್ಯರೇ ಕಾದು ಕುಳಿತಿರುವುದರಿಂದ ನಮ್ಮ ಹೋರಾಟ ನಗೆಪಾಟಲಿಗೆ ಈಡಾಗದಿರಲಿ ಎಂಬ ಕಾಳಜಿ ನನ್ನದು'' - ವೀರಕಪುತ್ರ ಶ್ರೀನಿವಾಸ್

    'ಬಾಹುಬಲಿ-2' ತೆರೆಕಂಡರೆ.?

    'ಬಾಹುಬಲಿ-2' ತೆರೆಕಂಡರೆ.?

    ''ಸುಮ್ಮನೆ ಯೋಚಿಸಿ, ಒಂದು ವೇಳೆ ಕನ್ನಡಿಗರು ವಿರೋಧಿಸಿದ ಮೇಲೂ 'ಬಾಹುಬಲಿ-2' ಇಲ್ಲಿ ತೆರೆಕಂಡರೆ ಅದೆಂಥಾ ಅವಮಾನ ಎದುರಿಸಬೇಕಾದೀತು? ಆಗ ಕಟ್ಟಪ್ಪನಾಡಿದ ಲಘುಮಾತುಗಳಿಗಿಂತ ಮತ್ತಷ್ಟು ಲಘುವಾಗಿ ಕನ್ನಡಿಗರು ಹೊರರಾಜ್ಯದವರಿಗೆ ಕಾಣುವುದಿಲ್ಲವೇ? ಸಂಬಂಧಪಟ್ಟವರು ಯೋಚಿಸಿ! ನಿರ್ಧರಿಸಿ!!'' - ವೀರಕಪುತ್ರ ಶ್ರೀನಿವಾಸ

    English summary
    Veerakaputra Srinivas has taken his Facebook page to oppose 'Baahubali-2' release in Karnataka
    Thursday, March 23, 2017, 10:50
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X