»   » 'ವೀರಪ್ಪನ್' ಲಿಸ್ಟ್ ನಲ್ಲಿ ಡಾ.ರಾಜ್ ಅಲ್ಲದೆ ರಜನಿಕಾಂತ್ ಕೂಡ ಇದ್ರೆ?

'ವೀರಪ್ಪನ್' ಲಿಸ್ಟ್ ನಲ್ಲಿ ಡಾ.ರಾಜ್ ಅಲ್ಲದೆ ರಜನಿಕಾಂತ್ ಕೂಡ ಇದ್ರೆ?

Posted By:
Subscribe to Filmibeat Kannada

ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವಿಟ್ಟರ್ ನಲ್ಲಿ ಒಂದಲ್ಲಾ ಒಂದು ಹೊಸ ಬಾಂಬ್ ಹಾಕಿ ಪದೇ ಪದೇ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ವೀರಪ್ಪನ್ ಹಿಂದೆ ಬಿದ್ದಿರುವ ವರ್ಮಾ ಹೊಸ ರೀತಿಯಲ್ಲಿ ಸುದ್ದಿಯಾಗಿದ್ದಾರೆ.

ಕುಖ್ಯಾತ ಕಾಡುಗಳ್ಳ ವೀರಪ್ಪನ್ ನಿಜ ಜೀವನ ಚರಿತ್ರೆಯಾಧರಿತ ಕಥೆಯನ್ನು 'ಕಿಲ್ಲಿಂಗ್ ವೀರಪ್ಪನ್' [ಕಿಲ್ಲಿಂಗ್ ವೀರಪ್ಪನ್: ಕನ್ನಡ ಚಲನಚಿತ್ರ ವಿಮರ್ಶೆ] ಚಿತ್ರದ ಮೂಲಕ ತೆರೆ ಮೇಲೆ ತಂದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ವೀರಪ್ಪನ್ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ಹೊರಹಾಕಿದ್ದಾರೆ.


Veerappan was planning to kidnap Tamil Actor Rajinikanth says RGV

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ಅಪಹರಿಸಲು ಸಂಚು ಮಾಡಿದ್ದ ದಂತಚೋರ ವೀರಪ್ಪನ್ ನಟ ಸಾರ್ವಭೌಮ ಡಾ.ರಾಜ್ ಕುಮಾರ್ ಅವರನ್ನು ಅಪಹರಿಸುವಲ್ಲಿ ಸಫಲನಾಗಿದ್ದ ಎಂದು ವರ್ಮಾ ಅವರು ಹೊಸ ಕಥೆ ಹುಟ್ಟುಹಾಕಿದ್ದಾರೆ.


ಹೌದು ಸ್ಮಗ್ಲರ್ ವೀರಪ್ಪನ್ ಬಗ್ಗೆ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಸಾಕಷ್ಟು ಅಧ್ಯಯನ ನಡೆಸಿದ್ದಾರಂತೆ, ಸುಮಾರು 15 ವರ್ಷ ಸಂಶೋಧನೆ ನಡೆಸಿದ್ದಾಗಿ ಹೇಳುತ್ತಿರುವ ಆರ್.ಜಿ.ವಿ ವೀರಪ್ಪನ್ ಬಗ್ಗೆ ಕುತೂಹಲ ಕೆರಳಿಸುವ ವಿಚಾರಗಳನ್ನು ಹೊರ ಹಾಕಿದ್ದಾರೆ.['ವೀರಪ್ಪನ್' ಹಿಂದಿ ರಿಮೇಕ್ ಟ್ರೇಲರ್ ಅಬ್ಬರಕ್ಕೆ ಬೆಚ್ಚಿದ ಬಿಟೌನ್]


Veerappan was planning to kidnap Tamil Actor Rajinikanth says RGV

ಇನ್ನು ಡಕಾಯಿತ ವೀರಪ್ಪನ್ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗಿಂತ ತಾನೇ ಅತೀ ಹೆಚ್ಚು ಜನಪ್ರಿಯ ವ್ಯಕ್ತಿ ಅಂತ ಭಾವಿಸಿದ್ದನಂತೆ, ಆದ್ದರಿಂದ ತನ್ನ ಜೀವನ ಚರಿತ್ರೆ ಆಧಾರಿತ ಸಿನಿಮಾ ಮಾಡಬೇಕು ಅಂತ ಬೇರೆ ಕೇಳಿಕೊಂಡಿದ್ದ ಎಂದು ವರ್ಮಾ ತಮ್ಮ ಟ್ವಿಟ್ಟರ್ ಮೂಲಕ ಕುತೂಹಲ ಅಂಶಗಳನ್ನು ಹೊರ ಹಾಕಿದ್ದಾರೆ.[ಇದ್ಬೇಕಿತ್ತಾ? ಸೂಪರ್ ಸ್ಟಾರ್ ರಜನಿ ಬಗ್ಗೆ ಲೇವಡಿ ಮಾಡಿದ ವರ್ಮಾ.!]ವರ್ಮಾ ಅವರು 'ಕಿಲ್ಲಿಂಗ್ ವೀರಪ್ಪನ್' ಚಿತ್ರವನ್ನು ಹಿಂದಿಯಲ್ಲೂ ಹೊರ ತರುತ್ತಿದ್ದು, ಹಿಂದಿ ಭಾಷೆಯಲ್ಲಿ ಡಾ.ರಾಜ್ ಕುಮಾರ್ ಮಾತ್ರವಲ್ಲದೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪಹರಣದ ವಿಷಯದ ಬಗ್ಗೆಯೂ ಸೇರಿಸಲಾಗಿದೆಯಂತೆ.[ಬಿಟೌನ್ ನಲ್ಲೂ ವರ್ಮಾರ 'ವೀರಪ್ಪನ್' ಘರ್ಜನೆ,ಶಿವಣ್ಣ ಪಾತ್ರಕ್ಕೆ ಯಾರು?]


Veerappan was planning to kidnap Tamil Actor Rajinikanth says RGV

ಇದೇ ತಿಂಗಳು ಮೇ 27 ರಂದು ಹಿಂದಿ ಭಾಷೆಯಲ್ಲಿ ತಯಾರಾಗಿರುವ 'ವೀರಪ್ಪನ್' ಸಿನಿಮಾ ತೆರೆ ಕಾಣುತ್ತಿದ್ದು, ಇದರಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳನ್ನು ಅಳವಡಿಸಲಾಗಿದೆ ಎಂದು ಹೇಳಲಾಗುತ್ತಿದೆ.


English summary
Ram Gopal Varma is making a film based on the life of Veerappan, and it is said that he has done extensive research on the most dangerous bandit. A sequence in the upcoming film 'Veerappan' will be about a plot sketched by Veerappan to kidnap superstar Rajinikanth.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada