'ಭೈರತಿ ರಣಗಲ್' ಫಸ್ಟ್ ವೀಕೆಂಡ್ ಕಲೆಕ್ಷನ್ ಘೋಷಿಸಿದ ಚಿತ್ರಮಂದಿರ.. ಅಬ್ಬಬ್ಬಾ ಹೊಸ ಮೈಲಿಗಲ್ಲು

ನವೆಂಬರ್ 15ರಂದು 'ಭೈರತಿ ರಣಗಲ್' ಸಿನಿಮಾ ತೆರೆಗಪ್ಪಳಿಸಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕಮ್ಮಿ ಇದ್ದರೂ ಶುಕ್ರವಾರ ಮಧ್ಯಾಹ್ನದ ಬಳಿಕ ರಣಗಲ್ ಆರ್ಭಟ ಹೆಚ್ಚಾಯಿತು. ಬುಕ್‌ಮೈ ಶೋನಲ್ಲೇ ಸಾವಿರಾರು ಟಿಕೆಟ್‌ಗಳು ಬುಕ್ ಆಗ್ತಿದೆ. ಇನ್ನು ಚಿತ್ರಮಂದಿರಗಳಿಗೆ ಹೋಗಿ ಟಿಕೆಟ್ ಖರೀದಿಸಿ ಸಿನಿಮಾ ನೋಡುತ್ತಿರುವವರ ಲೆಕ್ಕ ಹೇಳುವುದು ಬೇಡ.

ನರ್ತನ್ ನಿರ್ದೇಶನದ 'ಭೈರತಿ ರಣಗಲ್' ಸಿನಿಮಾ ಮಾಸ್ ಪ್ರೇಕ್ಷಕರಿಗೆ ಭರ್ಜರಿ ಬಾಡೂಟ ಉಣಬಡಿಸುತ್ತಿದೆ. ರಣಗಲ್ ಆಗಿ ಶಿವಣ್ಣ ಆರ್ಭಟಕ್ಕೆ ಸಿನಿರಸಿಕರು ಫಿದಾ ಆಗಿದ್ದಾರೆ. 'ಮಫ್ತಿ' ಚಿತ್ರಕ್ಕೆ ಒಳ್ಳೆ ಪ್ರೀಕ್ವೆಲ್ ಎಂದು ಮೆಚ್ಚಿಕೊಂಡಿದ್ದಾರೆ. ಚಿತ್ರಮಂದಿರಗಳ ಅಂಗಳದಲ್ಲಿ ಸಂಭ್ರಮಾಚರಣೆ ಕೂಡ ಜೋರಾಗಿತ್ತು. ಫಸ್ಟ್ ವೀಕೆಂಡ್ ಹಲವೆಡೆ ಸಿನಿಮಾ ಹೌಸ್‌ಫುಲ್ ಆಗಿತ್ತು.

Veeresh Cinemas announced shivarajkumar s Bhairathi Ranagal first weekend collection

ಫಸ್ಟ್ ವೀಕೆಂಡ್ ಮುಗಿದು ಸೋಮವಾರ ಯಾವುದೇ ಚಿತ್ರದ ಭವಿಷ್ಯ ನಿರ್ಧಾರವಾಗುತ್ತದೆ. ಆದರೆ ಸೋಮವಾರದ ಪರೀಕ್ಷೆಯಲ್ಲಿ ಕೂಡ 'ಭೈರತಿ ರಣಗಲ್' ಗೆದ್ದಿದ್ದಾನೆ. ಚಿತ್ರಮಂದಿರದ ಮಾಲೀಕರಿಗೆ ಇದು ಖುಷಿ ತಂದಿದೆ. ಕನ್ನಡದಲ್ಲಿ ಈ ವರ್ಷ ಯಾವುದೇ ಸಿನಿಮಾ ದೊಡ್ಡದಾಗಿ ಸದ್ದು ಮಾಡಲಿಲ್ಲ. ಇದ್ದಿದ್ದರಲ್ಲಿ 'ಯುವ', 'ಭೀಮ', 'ಕೃಷ್ಣಂ ಪ್ರಣಯ ಸಖಿ' ಹಾಗೂ 'ಬಘೀರ' ಚಿತ್ರಗಳು ಗೆದ್ದಿದ್ದವು. ಅದೇ ಸಾಲಿಗೆ ಈಗ 'ರಣಗಲ್' ಕೂಡ ಸೇರಿದ್ದಾನೆ.

ಶಿವರಾಜ್‌ಕುಮಾರ್ ತಮ್ಮದೇ ಬ್ಯಾನರ್‌ನಲ್ಲಿ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಮೊದಲ 3 ದಿನಕ್ಕೆ 1 ಲಕ್ಷದ 90 ಸಾವಿರ ಟಿಕೆಟ್‌ಗಳು ಬರೀ ಬುಕ್‌ಮೈ ಶೋನಲ್ಲೇ ಬುಕ್ ಆಗಿತ್ತು. ನರ್ತಕಿ, ವೀರೇಶ್, ನವರಂಗ್ ಚಿತ್ರಮಂದಿರಗಳಿಗೆ ಚಿತ್ರತಂಡ ಭೇಟಿ ನೀಡಿ ಪ್ರೇಕ್ಷಕರ ಜೊತೆ ಸಿನಿಮಾ ವೀಕ್ಷಿಸಿತ್ತು. ಇನ್ನು ಮಾಗಡಿ ರಸ್ತೆಯ ವೀರೇಶ್ ಚಿತ್ರಮಂದಿರಗಳಲ್ಲಿ ಫಸ್ಟ್ ವೀಕೆಂಡ್ ರಣಗಲ್ ಅಬ್ಬರ ಜೋರಾಗಿತ್ತು.

Veeresh Cinemas announced shivarajkumar s Bhairathi Ranagal first weekend collection

ಸ್ವತಃ ವೀರೇಶ್ ಚಿತ್ರಮಂದಿರದ ಮಾಲೀಕರು ಮೊದಲ 3 ದಿನಗಳ ಕಲೆಕ್ಷನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಎಷ್ಟು ಟಿಕೆಟ್ ಮಾರಾಟವಾಯಿತು ಎನ್ನುವ ಲೆಕ್ಕವೂ ಸಿಕ್ಕಿದೆ. ವೀರೇಶ್ ಚಿತ್ರಮಂದಿರದಲ್ಲಿ ಮೊದಲ 3 ದಿನ 'ಭೈರತಿ ರಣಗಲ್' ಚಿತ್ರದ 15 ಶೋಗಳು ಬಹುತೇಕ ಹೌಸ್‌ಫುಲ್ ಆಗಿತ್ತು. ಒಟ್ಟು 13960 ಟಿಕೆಟ್ ಮಾರಾಟವಾಗಿದ್ದು 22,23,960 ರೂಪಾಯಿ ಕಲೆಕ್ಷನ್ ಆಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ.

ಒಂದು ಚಿತ್ರಮಂದಿರದಲ್ಲಿ 3 ದಿನಕ್ಕೆ 22 ಲಕ್ಷ ಕಲೆಕ್ಷನ್ ಆಗಿದೆ ಅಂದ್ರೆ ರಾಜ್ಯಾದ್ಯಂತ ಚಿತ್ರ ಭರ್ಜರಿ ಗಳಿಕೆ ಕಂಡಿರುವ ನಿರೀಕ್ಷೆಯಿದೆ. ಇನ್ನು ಕನ್ನಡ ಬಳಿಕ ತೆಲುಗು, ತಮಿಳು, ಹಿಂದಿಗೆ ಸಿನಿಮಾ ಹೋಗುತ್ತಿದೆ. ಅಲ್ಲು ಅರ್ಜುನ್ ತಂದೆ ಅಲ್ಲು ಅರವಿಂದ್ 'ಭೈರತಿ ರಣಗಲ್' ಆಂಧ್ರ, ತೆಲಂಗಾಣದ ವಿತರಣೆ ಹಕ್ಕು ಖರೀದಿಸಿದ್ದಾರೆ.

ಬಾಲಿವುಡ್‌ನಲ್ಲಿ ರಣ್‌ಬೀರ್ ಕಪೂರ್ 'ಭೈರತಿ ರಣಗಲ್' ಸಿನಿಮಾ ರೈಟ್ಸ್ ಕೊಂಡುಕೊಳ್ಳಲು ಮುಂದಾಗಿದ್ದಾರೆ ಎನ್ನುವ ಊಹಾಪೋಹ ಶುರುವಾಗಿದೆ. ರೋಣಾಪುರದ ಜನರಿಗಾಗಿ ರಣಗಲ್ ಆರ್ಭಟ ಸಿನಿರಸಿಕರ ಮನಗೆದ್ದಿದೆ. ಕಳೆದ 6 ವರ್ಷಗಳಿಂದ ದೊಡ್ಮನೆ ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾಯುತ್ತಿದ್ದರು. ಕೊನೆಗೂ ರಣಗಲ್ ದರ್ಬಾರ್ ಕಿಕ್ ಕೊಡ್ತಿದೆ.

300ಕ್ಕೂ ಅಧಿಕ ಸ್ಕ್ರೀನ್‌ಗಳಲ್ಲಿ 'ಭೈರತಿ ರಣಗಲ್' ಸಿನಿಮಾ ತೆರೆಗೆ ಬಂದಿದೆ. ಮೊದಲ 4 ದಿನಕ್ಕೆ ಚಿತ್ರ 10 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಅಂದಹಾಗೆ ಇದು 'ಮಫ್ತಿ' ಚಿತ್ರದ ಪ್ರೀಕ್ವೆಲ್. ಆ ಚಿತ್ರದಲ್ಲಿ ಶಿವಣ್ಣ ಮಾಫಿಯಾ ಡಾನ್ ಭೈರತಿ ರಣಗಲ್ ಆಗಿ ನಟಿಸಿದ್ದರು. ಆತನ ಹಿನ್ನೆಲೆ ಏನು? ಎನ್ನುವ ಕಥೆಯನ್ನು ಇದೀಗ ತೆರೆಗೆ ತರಲಾಗಿದೆ. ಪ್ರೇಕ್ಷಕರಿಗೆ ಇಷ್ಟವಾಗಿದೆ.

More from Filmibeat

English summary
Bhairathi Ranagal whopping collection in Single theater at Bengaluru first weekend;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X