For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್' ಟಿಕೆಟ್ ಕೊಡಲು ನಿರಾಕರಿಸಿದ್ದಕ್ಕೆ ಕೈ ಬೆರಳು ಕಟ್.!

  |

  'ಕೆಜಿಎಫ್' ಚಿತ್ರದ ಬಿಡುಗಡೆಗೆ ಒಂದೇ ದಿನ ಬಾಕಿ ಇದೆ. ಬಹುತೇಕ ಚಿತ್ರಮಂದಿರಗಳಲ್ಲಿ ಟಿಕೆಟ್ ಸೋಲ್ಡ್ ಆಗಿದೆ. ಬಟ್, ಟಿಕೆಟ್ ಸಿಗದ ಅನೇಕ ಅಭಿಮಾನಿಗಳು ಆಕ್ರೋಶಗೊಂಡಿದ್ದಾರೆ. ಚಿತ್ರಮಂದಿರ ಎದುರು ಹೋಗಿ ಮಾಲೀಕರ ವಿರುದ್ಧ ಕಿಡಿಕಾರುತ್ತಿದ್ದಾರೆ.

  ಈ ಮಧ್ಯೆ ಟಿಕೆಟ್ ಕೊಡಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬನ ಕೈ ಬೆರಳನ್ನೇ ಕಟ್ ಮಾಡಿರುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

  ನರ್ತಕಿ ಚಿತ್ರಮಂದಿರದಲ್ಲಿ 'KGF' ಟಿಕೆಟ್ ವಿಚಾರಕ್ಕೆ ಗಲಾಟೆ

  ಹೌದು, ಮಾಗಡಿ ರಸ್ತೆಯಲ್ಲಿರುವ ವಿರೇಶ್ ಚಿತ್ರಮಂದಿರದಲ್ಲಿ ಬ್ಲಾಕ್ ಟಿಕೆಟ್ ಮಾರಾಟಗಾರ, ಚಿತ್ರಮಂದಿರದಲ್ಲಿ ಟಿಕೆಟ್ ಕೇಳಿದ್ದಾನೆ. ಆದ್ರೆ, ಬ್ಲಾಕ್ ನಲ್ಲಿ ಮಾರುವುದಕ್ಕೆ ಕೊಡುವುದಿಲ್ಲ ಎಂದು ನಿರಾಕರಿಸಿದ್ದಕ್ಕೆ ಚಿತ್ರಮಂದಿರದ ಸಿಬ್ಬಂದಿಯ ಬೆರಳನ್ನೇ ಕಟ್ ಮಾಡಿರುವ ಘಟನೆ ನಡೆದಿದೆ. ಅಷ್ಟಕ್ಕೂ, ಆ ಘಟನೆ ಆಗಿದ್ದು ಹೇಗೆ? ಮುಂದೆ ಓದಿ...

  ವಿರೇಶ್ ಚಿತ್ರಮಂದಿರದಲ್ಲಿ ಘಟನೆ

  ವಿರೇಶ್ ಚಿತ್ರಮಂದಿರದಲ್ಲಿ ಘಟನೆ

  ಬೆಂಗಳೂರಿನ ವಿರೇಶ್ ಚಿತ್ರಮಂದಿರದಲ್ಲಿ ಡಿಸೆಂಬರ್ 17ನೇ ತಾರೀಖು ಈ ಘಟನೆ ನಡೆದಿದೆ. 17ನೇ ತಾರೀಕು ಕೆಜಿಎಫ್ ಚಿತ್ರದ ಆನ್ ಲೈನ್ ಟಿಕೆಟ್ ಬುಕ್ಕಿಂಗ್ ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಬ್ಲಾಕ್ ಟಿಕೆಟ್ ಮಾರಾಟಗಾರ ಚಿತ್ರಮಂದಿರ ಸಿಬ್ಬಂದಿಯ ಬಳಿ ಟಿಕೆಟ್ ಕೇಳಿದ್ದಾನೆ.

  'ರಾಕಿಂಗ್ ಸ್ಟಾರ್' ಯಶ್ ಬಗ್ಗೆ ರಚಿತಾ ರಾಮ್ ಹೇಳಿದ್ದೇನು?

  ಟಿಕೆಟ್ ನಿರಾಕರಿಸಿದ್ದಕ್ಕೆ ಹಲ್ಲೆ

  ಟಿಕೆಟ್ ನಿರಾಕರಿಸಿದ್ದಕ್ಕೆ ಹಲ್ಲೆ

  ಟಿಕೆಟ್ ನಿರಾಕರಿಸಿದ್ದಕ್ಕೆ ಚಿತ್ರಮಂದಿರ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಬ್ಲಾಕ್ ಟಿಕೆಟ್ ಮಾರಾಟಗಾರ ಆತನ ಬೆರಳನ್ನೆ ಕಟ್ ಮಾಡಿದ್ದಾನೆ. ನಂತರ ಹಲ್ಲೆಗೊಳಗಾದ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾನೆ.

  ಟಿಕೆಟ್ ಬೆಲೆ ದುಬಾರಿ

  ಟಿಕೆಟ್ ಬೆಲೆ ದುಬಾರಿ

  'ಕೆಜಿಎಫ್' ಚಿತ್ರದ ಟಿಕೆಟ್ ಗೆ ಭಾರಿ ಬೇಡಿಕೆ ಇದೆ. ಇದು ಗೊತ್ತಿದ್ದು ಯಾವುದೇ ಚಿತ್ರಮಂದಿರ ಮಾಲೀಕರು ಬ್ಲಾಕ್ ಟಿಕೆಟ್ ಮಾರಾಟಗಾರರಿಗೆ ಟಿಕೆಟ್ ನೀಡಲು ಮನಸ್ಸು ಮಾಡುವುದಿಲ್ಲ. ಚಿತ್ರಮಂದಿರದಲ್ಲಿ ಟಿಕೆಟ್ ಬೆಲೆ 200 ರಿಂದ 300 ರೂಪಾಯಿವರೆಗೂ ಇದೆ. ಬ್ಲಾಕ್ ನಲ್ಲಿ 500 ರಿಂದ 1000 ವರೆಗೂ ಮಾರಾಟವಾಗ್ತಿದೆ.

  ಅಮೇರಿಕಾದಲ್ಲಿ ಇಂದೇ ರಿಲೀಸ್ ಆಗ್ತಿದೆ 'ಕೆಜಿಎಫ್' ಚಿತ್ರ

  ಬೆಳಿಗ್ಗೆ ಆರು ಗಂಟೆಗೆ ಶೋ

  ಬೆಳಿಗ್ಗೆ ಆರು ಗಂಟೆಗೆ ಶೋ

  ವೀರೇಶ್ ಚಿತ್ರಮಂದಿರದಲ್ಲಿ ಬೆಳಿಗ್ಗೆ ಆರು ಗಂಟೆಗೆ ಮೊದಲ ಶೋ ಆರಂಭವಾಗಲಿದೆ. ಮೊದಲ ದಿನ ಒಟ್ಟು ಆರು ಪ್ರದರ್ಶನಗಳಿದ್ದು, ಬಹುತೇಕ ಎಲ್ಲ ಟಿಕೆಟ್ ಗಳು ಸೋಲ್ಡ್ ಔಟ್ ಆಗಿದೆ. ಎರಡನೇ ದಿನವೂ ಬುಕ್ಕಿಂಗ್ ಭರ್ಜರಿಯಾಗಿ ನಡೆದಿದೆ.

  'ನರ್ತಕಿ'ಯಲ್ಲಿ ಗಲಾಟೆ

  'ನರ್ತಕಿ'ಯಲ್ಲಿ ಗಲಾಟೆ

  ಈ ನಡುವೆ ಕೆಜಿ ರಸ್ತೆಯಲ್ಲಿರುವ ಕೆಜಿಎಫ್ ಚಿತ್ರದ ಮುಖ್ಯ ಚಿತ್ರಮಂದಿರ ನರ್ತಕಿ ಬಳಿ ಅಭಿಮಾನಿಗಳು ಗಲಾಟೆ ಮಾಡ್ತಿದ್ದಾರೆ. ಭಾನುವಾರದಿಂದ ಟಿಕೆಟ್ ತೆಗೆದುಕೊಳ್ಳಲು ಪ್ರಯತ್ನ ಮಾಡುತ್ತಿದ್ದು, ಇದುವರೆಗೆ ಟಿಕೆಟ್ ನೀಡಿಲ್ಲ ಎಂದು ಅಭಿಮಾನಿಗಳ ಆರೋಪ ಮಾಡಿದ್ದಾರೆ. ಗುರುವಾರ ಕೊಡ್ತೀನಿ ಅಂತ ಹೇಳಿದ್ರು, ಈಗ ಟಿಕೆಟ್ ಇಲ್ಲ ಎನ್ನುತ್ತಿದ್ದಾರೆ ಎಂದು ಕಿಡಿಕಾರುತ್ತಿದ್ದಾರೆ.

  English summary
  Veeresh theater staff was attacked by black ticket seller on december 17th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X