'ರಿಷಭಪ್ರಿಯ' ಕಿರುಚಿತ್ರದ ಮಧುರ ಹಾಡುಗಳು ಬಿಡುಗಡೆ

By Bharath Kumar

ಡಿಂಪಲ್ ಕ್ವೀನ್ ರಚಿತಾ ರಾಮ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ 'ರಿಷಭಪ್ರಿಯ' ಕಿರುಚಿತ್ರದ ಆಡಿಯೋ ಅಧಿಕೃತವಾಗಿ ನಿನ್ನೆ (ಆಗಸ್ಟ್ 15) ಬಿಡುಗಡೆಯಾಗಿದೆ. ಚರಣ್ ರಾಜ್ ಸಂಗೀತ ನಿರ್ದೇಶನ ಈ ಚಿತ್ರದಲ್ಲಿ ಎರಡು ಹಾಡುಗಳಿದ್ದು, ಎರಡೂ ಹಾಡುಗಳು ಮೆಲೋಡಿಯಿಂದ ಕೂಡಿರುವುದು ವಿಶೇಷ.

'ಈ....ಇರುಳು... ಬಂದಾಗ ಬೇಸರ......' ಹಾಡಿಗೆ ಗಾಯಕ ವಿಜಯ ಪ್ರಕಾಶ್ ಧ್ವನಿಯಾಗಿದ್ದು, ರೋಹಿತ್ ಪದಕಿ ಸಾಹಿತ್ಯ ಬರೆದಿದ್ದಾರೆ. ಅಂದ್ಹಾಗೆ, ಈ ಹಾಡಿಗೆ ಇಬ್ಬರು ಸಂಗೀತ ನಿರ್ದೇಶಕರು, ಪಲ್ಲವಿಗೆ ಚರಣ್ ರಾಜ್ ಸಂಗೀತ ಸಂಯೋಜಸಿದ್ದರೇ, ಚರಣಕ್ಕೆ ನಕುಲ್ ಅಭ್ಯಂಕರ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

ಈ ಹಾಡನ್ನ ಕೆಳಗೆ ನೀಡಲಾಗಿದೆ...ಕೇಳಿ ಆನಂದಿಸಿ

''ಸಾಗರಿಯೇ....ಸಾಗರಿಯೇ....''ಎಂಬ ಹಾಡಿಗೆ ಕಿರಣ್ ಕಾವೇರಪ್ಪ ಅವರು ಸಾಹಿತ್ಯ ಬರೆದಿದ್ದು, ನಕುಲ್ ಅಭ್ಯಂಕರ್ ಧ್ವನಿಯಲ್ಲಿ ಮೂಡಿ ಬಂದಿದೆ.

ಈ ಹಾಡನ್ನ ಕೆಳಗೆ ನೀಡಲಾಗಿದೆ...ಕೇಳಿ ಆನಂದಿಸಿ

ರಾಗಿಣಿ ಚಂದ್ರನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದು, ಶ್ರೀಮಹಾದೇವ್ ನಾಯಕರಾಗಿದ್ದಾರೆ. ಇವರ ಜೊತೆ ಸಿಹಿಕಹಿ ಚಂದ್ರು, ಸಿಹಿಕಹಿ ಗೀತಾ, ಸೋಮಶೇಖರ್ ಜೋಯಿಸ್, ಚಿನ್ಮಯಿ ಆಥ್ರೇಯಸ್, ಸ್ಪರ್ಶಾ ಆರ್.ಕೆ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

Venkaiah Naidu rishabhapriya Short film Audio Released

'ರಿಷಭಪ್ರಿಯ' ಮ್ಯೂಸಿಕಲ್ ಕಿರುಚಿತ್ರವಾಗಿದ್ದು, ಆರ್ ಜೆ ಮಯೂರ್ ಆಕ್ಷನ್ ಕಟ್ ಹೇಳಿದ್ದಾರೆ. ಈ ಕಿರುಚಿತ್ರದ ಸ್ಪೆಷಾಲಿಟಿ ಅಂದ್ರೆ, ಡಿಂಪಲ್ ಕ್ವೀನ್ ರಚಿತಾ ರಾಮ್ ಚೊಚ್ಚಲ ಬಾರಿಗೆ ನಿರ್ಮಾಣದಲ್ಲಿ ತೊಡಗಿಕೊಂಡಿದ್ದು, 'ರಿಷಭಪ್ರಿಯ' ಕಿರುಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ಹೀಗಾಗಿ, ಇದು ಮತ್ತಷ್ಟು ಕುತೂಹಲ ಹೆಚ್ಚಿಸುವಂತೆ ಮಾಡಿದೆ. ಬಹುತೇಕ ಚಿತ್ರೀಕರಣ ಮುಗಿಸಿರುವ 'ರಿಷಭಪ್ರಿಯ' ಸದ್ಯದಲ್ಲೇ ಬಿಡುಗಡೆ ಕೂಡ ಆಗಲಿದೆ.

More from Filmibeat

English summary
Prajwal devraj wife Ragini Starrer rishabhapriya Short film Audio Released. The Movie Directed by RJ Mayur and Produced by Actress Rachita Ram
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X