'ಕೆಜಿಎಫ್' ಬಿಡುಗಡೆಗೆ ಬ್ರೇಕ್ ಹಾಕಿದ ವೆಂಕಟೇಶ್ ಯಾರು? ಬೇಡಿಕೆ ಏನು?
ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ನಾಳೆ ಸುಮಾರು 2000 ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಿದ್ಧವಾಗಿದೆ. ಟಿಕೆಟ್ ಬುಕ್ಕಿಂಗ್, ಫಸ್ಟ್ ಡೇ ಫಸ್ಟ್ ಶೋ ಅಂತ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ.
ಹೀಗಿರುವಾಗ, ಕೆ.ಜಿ.ಎಫ್ ಸಿನಿಮಾ ನಾಳೆ ರಿಲೀಸ್ ಮಾಡದಂತೆ ಬೆಂಗಳೂರು ಸಿಟಿ ಸಿವಿಲ್ ಕೋರ್ಟ್ ತಡೆಯಾಜ್ಞೆ ನೀಡಿದೆ. ಹಾಗಾಗಿ, ನಾಳೆ ಕೆಜಿಎಫ್ ಬಿಡುಗಡೆಯಾಗೋದು ಬಹುತೇಕ ಅನುಮಾನವಾಗಿದೆ.
ಇಷ್ಟು ದಿನ ಕೆಜಿಎಫ್ ಚಿತ್ರಕ್ಕೆ ಯಾವುದೇ ವಿವಾದ, ಸಂಕಷ್ಟ, ಕಂಟಕ ಏನೂ ಇರಲಿಲ್ಲ. ಆದ್ರೀಗ, ಕೊನೆಯ ಘಳಿಗೆಯಲ್ಲಿ ಕೆಜಿಎಫ್ ಚಿತ್ರಕ್ಕೆ ಅಡ್ಡಗಾಲು ಹಾಕಿರೋದು ವೆಂಕಟೇಶ್. ಅಷ್ಟಕ್ಕೂ, ವೆಂಕಟೇಶ್ ಯಾರು? ಇವರ ಬೇಡಿಕೆ ಏನು?

ವೆಂಕಟೇಶ್ ಯಾರು?
ಸದ್ಯ ಕೆಜಿಎಫ್ ಸಿನಿಮಾದ ಬಿಡುಗಡೆಗೆ ತಡೆ ತಂದಿರುವುದು ವೆಂಕಟೇಶ್. ನಿರ್ಮಾಪಕ ವಿಜಯ್ ಕಿರಗಂದೂರ್ ಮತ್ತು ನಿರ್ದೇಶಕ ಪ್ರಶಾಂತ್ ನೀಲ್ ಅವರ ವಿರುದ್ಧ ಆರೋಪ ಮಾಡಿ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದ್ದಾರೆ.

ರೌಡಿ ತಂಗಂ ಕಥೆ ಎಂಬ ಆರೋಪ
ಕೆಜಿಎಫ್, ರೌಡಿ ತಂಗಂ ಕಥೆಯನ್ನಾಧರಿಸಿದೆ ಎಂಬ ಆರೋಪ ಮಾಡಿ, ಕೆಜಿಎಫ್ ಸಿನಿಮಾ ಬಿಡುಗಡೆ ಮಾಡಬಾರದು ಎಂದು ವೆಂಕಟೇಶ್ ದೂರಿದ್ದಾರೆ. ರೌಡಿ ತಂಗಂ ಕುರಿತು ಯಾವುದೇ ಕಥೆ, ಸಿನಿಮಾ ಮಾಡಬೇಕಂದ್ರೆ ವೆಂಕಟೇಶ್ ಅವರ ಬಳಿ ಅನುಮತಿ ಪಡೆಯಬೇಕಾಗಿದೆ. ಬಟ್, ಚಿತ್ರತಂಡ ಅನುಮತಿ ಪಡೆದಿಲ್ಲ ಎಂಬ ಕಾರಣ ನೀಡಿದ್ದಾರೆ.

ರೌಡಿ ತಂಗಂ ಕಥೆ ವೆಂಕಟೇಶ್ ಬಳಿ ಇದೆ
ಅಂದ್ಹಾಗೆ, ಕೋಲಾರ್ ರೌಡಿ ತಂಗಂ ಬಗ್ಗೆ ಯಾವುದೇ ಸಿನಿಮಾ, ಕಥೆ, ಸಾಕ್ಷ್ಯಚಿತ್ರಕ್ಕೆ ಸಂಬಂಧಿಸಿದಂತೆ ತಂಗಂ ಅವರ ತಾಯಿ ಬಳಿ ವೆಂಕಟೇಶ್ ಅವರು ಅನುಮತಿ ಪಡೆದುಕೊಂಡಿದ್ದರು. ಈಗ ತಂಗಂ ಬಗ್ಗೆ ಏನೇ ಮಾಡಿದ್ರು. ವೆಂಕಟೇಶ್ ಬಳಿಯೇ ಅನುಮತಿ ಪಡೆಯಬೇಕಿದೆ. ಈ ಹಿಂದೆ 'ಕೋಲಾರ್' ಸಿನಿಮಾ ಮಾಡಿದ್ದ ನಿರ್ಮಾಪಕ ಆರ್ ಲಕ್ಷ್ಮಿ ನಾರಾಯಣ್ ಮತ್ತು ಆರ್ ರಮೇಶ್ ಅವರಿಂದ ವೆಂಕಟೇಶ್ ರೌಡಿ ತಂಗಂ ಕಥೆಯ ಅನುಮತಿ ಪಡದುಕೊಂಡಿದ್ದಾರೆ.

ರೌಡಿ ತಂಗಂ ಛಾಯೆ ಇದೆ
ಕೆಜಿಎಫ್ ಚಿತ್ರದಲ್ಲಿ ರೌಡಿ ತಂಗಂ ಕುರಿತ ದೃಶ್ಯಗಳಿವೆ, ದೃಶ್ಯಗಳಿವೆ. ಇದರಲ್ಲಿ ಅವರ ಕಥೆ ಬಳಸಲಾಗಿದೆ. ಹಾಗಾಗಿ, ಅವರು ಕಥೆಯ ಬಗ್ಗೆ ಎಲ್ಲಿಯೂ ಸುಳಿವು ಕೊಡದೇ, ಗೌಪ್ಯವಾಗಿಯೇ ಮಾಡಿಕೊಂಡು ಬರ್ತಿದ್ದಾರೆ ಎಂದು ವೆಂಕಟೇಶ್ ಪರ ವಕೀಲ ರಘುನಾಥ್ ಹೇಳಿದ್ದಾರೆ.


Click it and Unblock the Notifications











