Anant Nag 75th birthday: ಹುಟ್ಟುಹಬ್ಬ ಮತ್ತು ಸಿನಿರಂಗದಲ್ಲಿ 50 ವರ್ಷ ಪೂರೈಸಿದ ಖುಷಿಯಲ್ಲಿ ನಟ ಅನಂತ್ ನಾಗ್

ಅನಂತ್ ನಾಗ್....ಈ ಹೆಸರು ನಮ್ಮ ಅಜ್ಜನಿಗೂ ಗೊತ್ತು, ನಮಗೂ ಗೊತ್ತು, ಇಂದಿನ ಮಕ್ಕಳಿಗೂ ಚಿರಪರಿಚಿತ. ಹೌದು, ನಟ ಅನಂತ್ ನಾಗ್ ಸಿನಿಮಾ ರಂಗದಿಂದ ಕಳೆದು ಹೋಗಿದ್ದೇ ಇಲ್ಲ. 80ರ ದಶಕದಿಂದಲೂ ಬೆಳ್ಳಿ ಪರದೆಯ ಮೇಲೆ ಮೋಡಿ ಮಾಡಿರುವ ಅವರು, ಇಂದಿಗೂ ಬಹಳಷ್ಟು ಚಿತ್ರಗಳಲ್ಲಿ ನಟಿಸುವ ಮೂಲಕ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ.

ಸೆಪ್ಟಂಬರ್ 4 (ಸೋಮವಾರ) ರಂದು ಖ್ಯಾತ ನಟ ಅನಂತ್ ನಾಗ್ ಅವರ ಹುಟ್ಟುಹಬ್ಬ. 75ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಅವರಿಗೆ ಚಿತ್ರಂಗದ ತಾರೆಯರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ಕನ್ನಡ ಚಿತ್ರರಂಗದ ಬಹುದೊಡ್ಡ ಉಡುಗೊರೆಯಾಗಿರುವ ಅನಂತ್ ನಾಗ್ ಅವರು ಸಿನಿಮಾ ರಂಗದಲ್ಲಿ ಬರೋಬ್ಬರಿ ಐವತ್ತು ವರ್ಷಗಳನ್ನು ಪೂರೈಸಿದ್ದಾರೆ.

Versatile actor Anant Nag 75th birthday and 50 year journey in cinema

ಮರಾಠಿ ರಂಗಭೂಮಿಯಿಂದ ಸಿನಿಮಾ ರಂಗಕ್ಕೆ

ಮರಾಠಿ ರಂಗಭೂಮಿಯಿಂದ ಬಂದ ನಟ ಅನಂತ್ ನಾಗ್ 1973 ರಲ್ಲಿ ಕನ್ನಡ ಚಲನಚಿತ್ರ 'ಸಂಕಲ್ಪ'ದ ಮೂಲಕ ಸಿನಿ ಪಯಣ ಆರಂಭಿಸಿದವರು. ನಂತರ ಖ್ಯಾತ ನಿರ್ದೇಶಕ ಶ್ಯಾಮ್ ಬೆನಗಲ್ ಅವರ ಹಿಂದಿ ಚಿತ್ರ 'ಅಂಕುರ್' ಮೂಲಕ ಹಿಂದಿ ಚಲನಚಿತ್ರರಂಗಕ್ಕೂ ಪಾದಾರ್ಪಣೆ ಮಾಡಿದರು. 'ಪ್ರೇಮ ಲೇಖಲು' ಚಿತ್ರದ ಮೂಲಕ ತೆಲುಗು ಚಿತ್ರರಂಗದಲ್ಲೂ ನಟಿಸಿದ್ದರು.

ಮೂರು ವರುಷ ಹೀಗೆ ಮೂರು ಚಿತ್ರರಂಗಗಳಲ್ಲಿ ನಟಿಸುತ್ತಿದ್ದ ಅನಂತ್‌ ನಾಗ್ 1979 ರಿಂದ ಪೂರ್ಣಪ್ರಮಾಣದಲ್ಲಿ ಕನ್ನಡ ಸಿನಿಮಾ ರಂಗದಲ್ಲಿ ನಾಯಕನಟನಾಗಿ ಗುರುತಿಸಿಕೊಂಡರು. ಈ ಸಮಯದಲ್ಲಿ ತಮ್ಮ ಸಹೋದರ ಶಂಕರನಾಗ್ ಅವರ ಎಲ್ಲಾ ಪ್ರಯೋಗಾತ್ಮಕ ಚಿತ್ರಗಳಿಗೂ ಸಾಥ್ ನೀಡುತ್ತಿದ್ದರು.

Versatile actor Anant Nag 75th birthday and 50 year journey in cinema

ಕನ್ನಡ ಸಿನಿಮಾರಂಗ ಕಂಡ ಅತ್ಯಂತ ಸುರದ್ರೂಪಿ ನಟ ಅನಂತ್ ನಾಗ್. ಬಯಲು ದಾರಿ, ನಾ ನಿನ್ನ ಬಿಡಲಾರೆ, ಬೆಂಕಿಯ ಬಲೆ, ಚಂದನದ ಗೊಂಬೆ ಇಂತಹ ಚಿತ್ರಗಳ ಮೂಲಕ ಹೆಣ್ಣುಮಕ್ಕಳ ಹೃದಯದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದರು. ಶ್ಯಾಮ್ ಬೆನಗಲ್ ಅವರ ಅಂಕುರ್ ನಲ್ಲಿ ಜಮೀನುದಾರನ ನೀಚ, ಸ್ವಾರ್ಥಿ ಮಗನಾಗಿ, ಪುಟ್ಟಣ್ಣ ಕಣಗಾಲ್ ಅವರ ಬಯಲು ದಾರಿಯಲ್ಲಿ ರೋಮ್ಯಾಂಟಿಕ್ ಪೈಲಟ್ ಆಗಿ, ಗೌರಿ ಗಣೇಶ, ಗಣೇಶನ ಮದುವೆ ಸಿನಿಮಾದಲ್ಲಿ ಹಾಸ್ಯ ಪಾತ್ರಗಳಲ್ಲಿಯೂ ಅನಂತ್ ನಾಗ್ ಜನರ ಮನದಲ್ಲಿ ಅಚ್ಚು ಹೊತ್ತಿದ್ದಾರೆ. ಮಿಂಚಿನ ಓಟ, ಆಕ್ಸಿಡೆಂಟ್, ನೋಡಿ ಸ್ವಾಮಿ ನಾವು ಇರೋದು ಹೀಗೆ, ಜನ್ಮ ಜನ್ಮದ ಅನುಬಂಧ ಸಿನಿಮಾಗಳಲ್ಲಿನ ನಟನೆಯನ್ನು ಜನ ಮರೆಯುವಂತಿಲ್ಲ.

ವಯಸ್ಸಾದಂತೆ ಅನಂತ್ ನಾಗ್ ಅವರ ಸಿನಿಮಾ ಪಯಣ ಕೂಡ ಹೊಸ ರೀತಿಯಲ್ಲಿ ಬದಲಾಯಿತು. ನಾಯಕನಟನ ಪಟ್ಟದಿಂದ ಪೋಷಕನಟನ ಪಾತ್ರಗಳಿಗೂ ಜೀವತುಂಬಿದರು. ಕೆಜಿಎಫ್-1, ಕವಲುದಾರಿ, ಮುಂಗಾರು ಮಳೆ, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಕಾಸರಗೋಡು, ಎರಡನೇ ಮದುವೆ ಹೀಗೆ ಅನೇಕ ಸೂಪರ್ ಹಿಟ್ ಚಲನಚಿತ್ರಗಳಲ್ಲಿ ಗಮನ ಸೆಳೆದಿದ್ದಾರೆ.

ಕಿರುತೆರೆಯಲ್ಲಿ ಅನಂತನಾಗ್

ಅನಂತ್ ನಾಗ್ ಹಿರಿ ತೆರೆಯ ಜೊತೆಗೆ ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿದಿದ್ದಾರೆ. ಸಹೋದರ ಶಂಕರ್ ನಾಗ್ ಅವರ ಮಾಲ್ಗುಡಿ ಡೇಸ್‌ನಲ್ಲಿ ಅಭಿನಯಿಸಿದ್ದ ಅವರು, 2002ರಲ್ಲಿ ಬಂದ ಗರ್ವ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. 2006 ರಲ್ಲಿ ಬಂದ 'ಪ್ರೀತಿ ಇಲ್ಲದ ಮೇಲೆ' ಧಾರಾವಾಹಿ ಅತ್ಯಂತ ಯಶಸ್ವಿಯಾಗಿತ್ತು.

ನಾಯಕನಾಗಿ, ಸಹೋದರನಾಗಿ...ಈಗ ಫೋಷಕ ಪಾತ್ರಗಳ ಮೂಲಕ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಪಾತ್ರ ಯಾವುದೇ ಇದ್ದರೂ ಅದರಲ್ಲಿ ಪೂರ್ಣ ಪ್ರಮಾಣದಲ್ಲಿ ಮುಳುಗಿಹೋಗುವುದು, ತಾನೇ ಪಾತ್ರವಾಗಿ ಜೀವಿಸುವುದು ಅನಂತ್ ನಾಗ್ ಅವರ ಮುಖ್ಯ ಗುಣ. ಇದೇ ಕಾರಣಕ್ಕೆ ಹಲವು ಮಂದಿ ಚಿತ್ರರಂಗದಿಂದ ದೂರ ಸರಿದಿದ್ದರೂ ಅನಂತ್ ನಾಗ್ ಇನ್ನು ಗಟ್ಟಿ ನೆಲೆ ಕಂಡುಕೊಂಡಿರುವುದು.

More from Filmibeat

English summary
Anant Nag 75th birthday and 50 year journey in cinema.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X