For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ ಅಕ್ಕಿ ಚನ್ನಬಸಪ್ಪ ಇನ್ನಿಲ್ಲ

  By Pavithra
  |

  ಕನ್ನಡ ಸಿನಿಮಾರಂಗದಲ್ಲಿ ಸಾಕಷ್ಟು ವರ್ಷಗಳಿಂದ ಅಭಿನಯದ ಮೂಲಕವೇ ಕಲಾ ಸೇವೆ ಸಲ್ಲಿಸುತ್ತಿದ್ದ ಹಿರಿಯ ನಟ ಅಕ್ಕಿ ಚೆನ್ನಬಸಪ್ಪ ಇಂದು ವಿಧಿವಶರಾಗಿದ್ದಾರೆ. ಹಾಸ್ಯ ಕಲಾವಿದನಾಗಿಯೂ ಗುರುತಿಸಿಕೊಂಡಿದ್ದ ಚೆನ್ನಬಸಪ್ಪ ಅವರು ಸಾಕಷ್ಟು ಮಕ್ಕಳ ಚಿತ್ರದಲ್ಲಿಯೂ ಅಭಿನಯಿಸಿದ್ದರು.

  ಅಕ್ಕಿ ಚೆನ್ನ ಬಸಪ್ಪ ಅವರ ಪತ್ನಿ ಐದು ವರ್ಷದ ಹಿಂದೆಯಷ್ಟೇ ತೀರಿಕೊಂಡಿದ್ದರು. ಮಕ್ಕಳು ಹಾಗೂ ಯಾರು ನೋಡಿಕೊಳ್ಳವವರು ಇಲ್ಲದ ಕಾರಣ ಕೆಂಗೇರಿ ಸಮೀಪವಿರುವ ಅನಾಥಾಶ್ರಮದಲ್ಲಿ ಅಕ್ಕಿ ಚೆನ್ನಬಸಪ್ಪ ಆಶ್ರಯ ಪಡೆದಿದ್ದರು. ಸುಮಾರು 90 ವರ್ಷ ವಯಸ್ಸಾಗಿದ್ದ ಅವರು ಇಂದು ಅನಾಥಾಶ್ರಮದಲ್ಲೇ ತಮ್ಮ ಕೊನೆ ಉಸಿರೆಳೆದಿದ್ದಾರೆ.

  ಸಿಲ್ಲಿ ಲಲ್ಲಿ ಧಾರಾವಾಹಿ ಸೇರಿದಂತೆ ಪ್ರಕೃತಿ', 'ಸೀ ಯು', 'ಕನಸೆಂಬ ಕುದುರೆಯನ್ನೇರಿ', 'ಜಿಪುಣ ನನ್ನ ಗಂಡ', 'ಮುಸ್ಸಂಜೆ' ಹೀಗೆ ಸಾಕಷ್ಟು ಕನ್ನಡ ಸಿನಿಮಾದಲ್ಲಿ ಅಭಿನಯ ಮಾಡಿದ್ದರು. ರಂಗಭೂಮಿಯಲ್ಲಿಯೂ ಗುರುತಿಸಿಕೊಂಡಿದ್ದ ಅಕ್ಕಿಚೆನ್ನಬಸಪ್ಪ ಅವರ ಸಾವಿಗೆ ಕನ್ನಡ ಸಿನಿಮಾರಂಗ ಕಂಬನಿ ಮಿಡಿದಿದೆ.

  ನಾಳೆ ಸುಮಾರು 12 ಗಂಟೆ ವೇಳೆಗೆ ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ವತಿಯಿಂದ ಕೆಂಗೇರಿ ಸಮೀಪವೇ ಅಂತ್ಯಕ್ರಿಯೆ ಮಾಡುವುದಾಗಿ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾದ ಡಿಂಗ್ರಿ ನಾಗರಾಜ್ ತಿಳಿಸಿದ್ದಾರೆ.

  English summary
  Kannada Veteran actor Akki Channa Basappa passes away , Akki Chennabasappa breathes his last breath at the orphanage near Kengeri, Bangalore.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X