twitter
    For Quick Alerts
    ALLOW NOTIFICATIONS  
    For Daily Alerts

    'ಸಾಮಾನ್ಯ'ರಂತೆ ಬಂದು 'ಅಸಾಮಾನ್ಯ'ರಾಗಿ ಹೊರಟ ಕಾಶಿನಾಥ್

    By Pavithra
    |

    ಕಾಶಿನಾಥ್ ಚಿತ್ರರಂಗದ ಅದೆಷ್ಟೋ ಜನರಿಗೆ ಗುರುಗಳಾದರೆ, ಮತ್ತಷ್ಟು ಜನರಿಗೆ ದ್ರೋಣಾಚಾರ್ಯರಂತೆ. ಸಾಕಷ್ಟು ಯುವ ನಿರ್ದೇಶಕರಿಗೆ ಕಾಶಿನಾಥ್ ಸ್ಫೂರ್ತಿಯ ಚಿಲುಮೆ ಆಗಿದ್ದರು. ಕನ್ನಡ ಸಿನಿಮಾರಂಗಕ್ಕೆ ಹೊಸ ರೀತಿಯ ತಿರುವನ್ನು ನೀಡಿದ ನಟ ಇವರು.

    ತಂತ್ರಜ್ಞರು ಕೂಡ ನಟರಾಗಿ ತೆರೆ ಮೇಲೆ ಮಿಂಚಬಹುದೆಂದು ತೋರಿಸಿಕೊಟ್ಟ ಕಾಶಿನಾಥ್ ಅವರ ಅನೇಕ ಶಿಷ್ಯರು ಇಂದು ಚಿತ್ರರಂಗದಲ್ಲಿ ತಂತ್ರಜ್ಞರಾಗಿ, ನಟರಾಗಿ ಸಾಧನೆಯ ಹಾದಿಯಲ್ಲಿ ಸಾಗಿದ್ದಾರೆ.

    ಕಾಶಿನಾಥ್ : ಪ್ರತಿಭಾವಂತ, ಸ್ವಾಭಿಮಾನಿ ಮತ್ತು ರೆಬೆಲ್

    ಸಾಮಾನ್ಯರಂತೆ ಚಿತ್ರರಂಗಕ್ಕೆ ಬಂದು ಇಂದು ಇಡೀ ಕನ್ನಡ ಸಿನಿಮಾರಂಗವೇ ತಮ್ಮತ್ತ ಹಾಗೂ ತಮ್ಮ ಸಿನಿಮಾಗಳತ್ತ ತಿರುಗಿ ನೋಡಿವಂತೆ ಮಾಡಿದ್ದ ಪ್ರತಿಭಾನ್ವಿತ ನಟ ಹಾಗೂ ನಿರ್ದೇಶಕ ಕಾಶಿನಾಥ್. ಇಡೀ ಸಿನಿಮಾರಂಗ ಹಾಗೂ ಕುಟುಂಬಸ್ಥರನ್ನ ಅಗಲಿ ಹೊರಟ ಅದ್ಬುತ ಕಲಾವಿದನ ಸಿನಿಮಾ ಹಾಗೂ ಜೀವನ ಪಯಣದ ಸಂಪೂರ್ಣ ಮಾಹಿತಿ ಇಲ್ಲಿದೆ. ಓದಿರಿ...

    ಕುಂದಾಪುರದ ಪ್ರತಿಭೆ ಕಾಶಿನಾಥ್

    ಕುಂದಾಪುರದ ಪ್ರತಿಭೆ ಕಾಶಿನಾಥ್

    ನಟ ಕಾಶಿನಾಥ್ ಉಡುಪಿ ಜಿಲ್ಲೆಯ ಕುಂದಾಪುರದ ಕೋಟೇಶ್ವರದಲ್ಲಿ ಜನಿಸಿದ್ದು, ಶ್ರೀ ಜಿ.ವಾಸುದೇವ್ ರಾವ್ ಹಾಗೂ ಸರಸ್ವತಿ ಅವರ ಆರು ಜನರ ಮಕ್ಕಳಲ್ಲಿ ಕಾಶಿನಾಥ್ ಎರಡನೇಯವರು. ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕಾಶಿನಾಥ್ ಬಿ.ಎಸ್.ಸಿ ಪದವಿಯನ್ನ ಪಡೆದಿದ್ದರು.

    ಸಣ್ಣ ವಯಸ್ಸಿನಲ್ಲೇ ಬುದ್ಧಿವಂತ

    ಸಣ್ಣ ವಯಸ್ಸಿನಲ್ಲೇ ಬುದ್ಧಿವಂತ

    ಪಿ.ಯು.ಸಿ ಹಂತದಲ್ಲೇ ವಿಜ್ಞಾನಿ ಆಗಬೇಕೆಂಬ ಬಯಕೆಯನ್ನ ಹೊಂದಿದ್ದ ಕಾಶಿನಾಥ್ ಚಿಕ್ಕನಿಂದಲೂ ಬುದ್ದಿವಂತರಾಗಿದ್ದರು. ನಂತರದ ದಿನಗಳಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಾ ಚಿತ್ರರಂಗದ ಕಡೆಗೆ ಒಲವು ಬೆಳೆಯಿತು.

    ಕಿರುಚಿತ್ರದ ಮೂಲಕ ಸಿನಿಮಾ ಕಡೆಗೆ

    ಕಿರುಚಿತ್ರದ ಮೂಲಕ ಸಿನಿಮಾ ಕಡೆಗೆ

    ಕಾಶಿನಾಥ್ ಕಿರುಚಿತ್ರ ನಿರ್ದೇಶನ ಮಾಡುವ ಮೂಲಕ ಸಿನಿಮಾರಂಗಕ್ಕೆ ಕಾಲಿಟ್ಟವರು. 'ಅಸೀಮಾ' ಹಾಗೂ 'ಸ್ಲಿಪ್' ಎನ್ನುವ ಮೂಕಿ ಕಿರುಚಿತ್ರವನ್ನ ಡೈರೆಕ್ಟ್ ಮಾಡಿದ ನಂತರ ಸಿನಿಮಾಗಳನ್ನ ನಿರ್ದೇಶನ ಮಾಡಲು ಪ್ರಾರಂಭ ಮಾಡಿದರು.

    ಕನ್ನಡ ಸಿನಿಮಾರಂಗಕ್ಕೆ ತಿರುವು ಕೊಟ್ಟ ನಿರ್ದೇಶಕ

    ಕನ್ನಡ ಸಿನಿಮಾರಂಗಕ್ಕೆ ತಿರುವು ಕೊಟ್ಟ ನಿರ್ದೇಶಕ

    'ಅನಂತನ ಅವಾಂತರ', 'ಅನುಭವ', 'ಹೆಂಡತಿ ಎಂದರೆ ಹೇಗಿರಬೇಕು', 'ಅಜಗಜಾಂತರ' ಸೇರಿದಂತೆ ಹಲವು ಸಿನಿಮಾಗಳನ್ನು ನಿರ್ದೇಶಿಸಿದ್ದರು. ಕನ್ನಡ ಭಾಷೆಯಲ್ಲಿ 11, ಹಿಂದಿ, ತೆಲುಗಿನಲ್ಲಿ ತಲಾ 1 ಚಿತ್ರ ನಿರ್ದೇಶನ ಮಾಡಿದ್ದರು. ಕನ್ನಡ-13, ಹಿಂದಿ-2, ತೆಲುಗು-1 ಸಿನಿಮಾಗಳಿಗೆ ಚಿತ್ರಕಥೆ ಬರೆದು ನಿರ್ದೇಶನ ವನ್ನೂ ಮಾಡಿದ್ದಾರೆ.

    37 ವಾರ ಪ್ರದರ್ಶನವಾದ ಸಿನಿಮಾ 'ಅನುಭವ'

    37 ವಾರ ಪ್ರದರ್ಶನವಾದ ಸಿನಿಮಾ 'ಅನುಭವ'

    ಕಾಶಿನಾಥ್ ನಿರ್ದೇಶನ ಮಾಡಿ ಅಭಿನಯಿಸಿದ 'ಅನುಭವ' ಸಿನಿಮಾ 37 ವಾರಗಳು ಚಿತ್ರಮಂದಿರದಲ್ಲಿ ಪ್ರದರ್ಶನ ಕಂಡಿತ್ತು. ಈ ಮೂಲಕ ಕಾಶಿನಾಥ್ ಕನ್ನಡ ಸಿನಿಮಾರಂಗದಲ್ಲಿ ಹೊಸ ಮೈಲಿಗಲ್ಲನ್ನ ಸೃಷ್ಟಿ ಮಾಡಿದ್ದರು.

    'ಅಜಗಜಾಂತರ' ಹಿಂದಿಗೆ ರಿಮೇಕ್

    'ಅಜಗಜಾಂತರ' ಹಿಂದಿಗೆ ರಿಮೇಕ್

    1991ರಲ್ಲಿ ನಿರ್ದೇಶಿಸಿದ್ದ 'ಅಜಗಜಾಂತರ' ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗಿದ್ದು. ಹಿಂದಿಯಲ್ಲಿ ‘ಜುದಾಯಿ' ಎಂದು ಬಿಡುಗಡೆ ಆಗಿತ್ತು. ಕಾಶಿನಾಥ್ ಅವರ ಅನೇಕ ಚಿತ್ರಗಳು ಬೇರೆ ಭಾಷೆಯಲ್ಲಿ ರೀಮೇಕ್ ಆಗಿ ರಿಲೀಸ್ ಆಗಿದೆ.

    ಸ್ಟಾರ್ ನಟರಿಗೆ ಕಾಶಿನಾಥ್ ಗುರುಗಳು

    ಸ್ಟಾರ್ ನಟರಿಗೆ ಕಾಶಿನಾಥ್ ಗುರುಗಳು

    ಕಾಶಿನಾಥ್ ಸಿನಿಮಾರಂಗದಲ್ಲಿ ತಾವು ಬೆಳೆಯುವುದರ ಜೊತೆಯಲ್ಲಿ ಅನೇಕರನ್ನೂ ಸಿನಿಮಾರಂಗಕ್ಕೆ ಪರಿಚಯಿಸಿದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ, ಸಂಗೀತ ನಿರ್ದೇಶಕ ವಿ.ಮನೋಹರ್, ನಿರ್ದೇಶಕ ಸುನೀಲ್ ಕುಮಾರ್ ದೇಸಾಯಿ, ನಟಿ ಅಭಿನಯ, ಉಮಾಶ್ರೀ ಸೇರಿದಂತೆ ಇನ್ನೂ ಅನೇಕರನ್ನ ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಕಾಶಿನಾಥ್ ಅವರಿಗಿದೆ.

    ಇಬ್ಬರು ಮಕ್ಕಳ ಸುಂದರ ಸಂಸಾರ

    ಇಬ್ಬರು ಮಕ್ಕಳ ಸುಂದರ ಸಂಸಾರ

    ಕಾಶಿನಾಥ್ ಅವರಿಗೆ ಇಬ್ಬರು ಮಕ್ಕಳು. ಪುತ್ರ ಅಭಿಮನ್ಯು ಸಿನಿಮಾರಂಗದಲ್ಲಿ ಗುರುತಿಸಿಕೊಂಡದ್ದು, ಪುತ್ರಿ ಅಮೃತವರ್ಷಿಣಿ ಅವರಿಗೆ ಮದುವೆ ಆಗಿದೆ. ಮಗ ಕಾಶಿನಾಥ್ ಅವರ ಜೊತೆಯಲ್ಲಿ ಬೆಂಗಳೂರಿನಲ್ಲೇ ವಾಸವಿದ್ದು, ಪುತ್ರಿ ದುಬೈನಲ್ಲಿ ವಾಸವಿದ್ದಾರೆ.

    ಅಪರೂಪದ ಅತಿಥಿಗಳಿಂದ 'ಚೌಕ' ವರೆಗಿನ ಪಯಣ

    ಅಪರೂಪದ ಅತಿಥಿಗಳಿಂದ 'ಚೌಕ' ವರೆಗಿನ ಪಯಣ

    ಕೇವಲ ನಿರ್ದೇಶನವಷ್ಟೇ ಅಲ್ಲದೆ ಕಾಶಿನಾಥ್ ಮೂರು ಚಿತ್ರಗಳಿಗೆ ಚಿತ್ರಗೀತೆ ರಚಿಸಿದ್ದರು. ಕನ್ನಡ ಮತ್ತು ತೆಲುಗಿನ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದರು. ಕನ್ನಡದ 36 ಸಿನಿಮಾಗಳಲ್ಲಿ ಕಾಶಿನಾಥ್ ಅಭಿನಯವಿತ್ತು. ಅಪರೂಪದ ಅತಿಥಿ ಸಿನಿಮಾದಿಂದ ಶುರುವಾದ ಸಿನಿಮಾ ಪ್ರಯಾಣ 'ಚೌಕ' ಚಿತ್ರದವರೆಗೂ ಕಾಶಿನಾಥ್ ಎಂದೂ ಮಾಸದಂತ ಚಿತ್ರಗಳನ್ನ ಅಭಿಮಾನಿಗಳಿಗಾಗಿ ಕೊಟ್ಟು ಹೋಗಿದ್ದಾರೆ.

    English summary
    Veteran Actor, Director Kashinath passes away in Bengaluru today (January 18th). Here is the profile of Kashinath.
    Thursday, January 18, 2018, 22:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X