''ದರ್ಶನ್ 25 ಕೋಟಿ ದುಡಿಯವ ನಟ, ಸಹವಾಸ ದೋಷದಿಂದ ಹಾಳಾದ''- ಜಗ್ಗೇಶ್...!
ಸಹವಾಸ ದೋಷದಿಂದ ಸನ್ಯಾಸಿ ಕೆಟ್ಟ ಎಂಬ ಮಾತು ದರ್ಶನ್‌ಗೆ ಅಕ್ಷರಶಃ ಅನ್ವಯವಾಗುತ್ತದೆ. ಯಾಕೆಂದರೆ ಸಾರಥಿ ನಂತರ ದರ್ಶನ್ ಯಾವತ್ತು ಸಜ್ಜನರ ಸಹವಾಸವನ್ನ ಮಾಡ್ಲೇ ಇಲ್ಲ. ಮಾಡಿದ್ದರೆ ಈ ದಯನೀಯ ಸ್ಥಿತಿಯಲ್ಲಿ ಖಂಡಿತವಾಗಿಯೂ ಇರುತ್ತಿರಲಿಲ್ಲ.
ಹೌದು. ನಿಮಗೆ ಗೊತ್ತಿರಲಿ, ದರ್ಶನ್ ಮೊದಲು ಈ ತರ ಇರಲಿಲ್ಲ. ಇವರ ಮುಖದಲ್ಲಿ ಒಂದು ಮುಗ್ದತೆ ಇತ್ತು. ಕಳೆ ಇತ್ತು. ಕೆಟ್ಟ ಹವ್ಯಾಸ ಇರಲಿಲ್ಲ. ಬೇರೆ ಅಭ್ಯಾಸವೂ ಇರಲಿಲ್ಲ.ಎಲ್ಲರನ್ನೂ ಗೌರವದಿಂದ ಕಾಣುವ ವ್ಯಕ್ತಿತ್ವ ಇವರದ್ದಾಗಿತ್ತು.

ಇನ್ನೂ ಆ ಕಾಲದಲ್ಲಿ ದರ್ಶನ್ ಸುತ್ತ ಮುತ್ತ ಇದ್ದವರು ಕೂಡ ಇವರ ಒಳಿತನ್ನೇ ಬಯಸುತ್ತಿದ್ದರು. ಯಾವುದು ಸರಿ .. ಯಾವುದು ತಪ್ಪು .. ಎನ್ನುವುದನ್ನ ದರ್ಶನ್‌ಗೆ ಹೇಳುತ್ತಿದ್ದರು.ಆದರೆ .. ಹಣ ಬಲ.. ಅಧಿಕಾರದ ಬಲ.. ಎಂಥವರ ತಲೆಯನ್ನೂ ತಿರುಗಿಸುತ್ತೆ. ಇದಕ್ಕೆ ಜ್ವಲಂತ ಉದಾಹರಣೆಯಂತೆ ಇರುವ ದರ್ಶನ್‌ಗೆ 2004ರಲ್ಲಿ ಯೋಗ ಮತ್ತೊಮ್ಮೆ ಕೈ ಹಿಡಿದಿತ್ತು. ಚಿತ್ರಾನ್ನಾದಂತೆ ಇದ್ದ ಕಲಾಸಿಪಾಳ್ಯ ಎಂಬ ಸಿನಿಮಾ ಸೂಪರ್ ಸ್ಟಾರ್ ಪಟ್ಟಕ್ಕೇರಿಸಿತ್ತು. ದರ್ಶನ್‌ಗೆ ಆಗ ಕೇವಲ 27-28ರ ಹರೆಯವಷ್ಟೇ.
30 ದಾಟುವ ಮೊದಲು ಸಿಕ್ಕ ಈ ಜನಪ್ರಿಯತೆಯಿಂದ ಆಕಾಶಕ್ಕೆ ಏಣಿ ಹಾಕಿದ ದರ್ಶನ್, ಛಾಯಾಗ್ರಾಹಕ ಮತ್ತು ನಿರ್ಮಾಪಕ ಅಣಜಿ ನಾಗರಾಜ್ ಸೇರಿ ತನ್ನ ಸುತ್ತ ಇದ್ದಅನೇಕ ಹಿತೈಶಿಗಳಿಂದ ದೂರವಾದರು. ಹಣದ ಅಮಲು .. ಅಳತೆಗೂ ಮೀರಿದ ಜನಪ್ರಿಯತೆ .. ಸುತ್ತಲು ಮೊಳಗುವ ಜೈಕಾರದ ನಶೆಯಲ್ಲಿ ತೂರಾಡಲು ಶುರು ಮಾಡಿದ ದರ್ಶನ್,ಆ ನಂತರ ಹೆಣ್ಣಿನ ಹಿಂದೆ ಬಿದ್ದರು. ತನ್ನ ಚಿತ್ರಕ್ಕೆ ಬಣ್ಣ ಹಚ್ಚಿದ್ದ ನಾಯಕಿ ಜೊತೆ ಲವ್ವು-ಡವ್ವು ಅಂತ ಶುರು ಮಾಡಿದರು. ಇದನ್ನ ಪ್ರಶ್ನಿಸಿದ ಹೆಂಡ್ತಿ ವಿಜಯ ಲಕ್ಷ್ಮೀಗೆ ಸಾಯುವಂತೆ ಹೊಡೆದು ತನ್ನ ಪೌರುಷದ ಪ್ರದರ್ಶನವನ್ನಷ್ಟೇ ಅಲ್ಲ ತನ್ನ ವಿಕೃತಿಯ ಪ್ರದರ್ಶನವನ್ನೂ ಕೂಡ ಮಾಡಿದರು. ಜೈಲು ಪಾಲಾಗಿ ಮತ್ತೆ ಮರಳಿ ಬಂದರು.

ಆದರೆ. ಹೀಗೆ ಜೈಲಿಂದ ಬಂದ ದರ್ಶನ್ ತನ್ನ ತಪ್ಪನ್ನೂ ತಿದ್ದಿಕೊಳ್ಳಲಿಲ್ಲ. ಸಜ್ಜನರ ಸಹವಾಸವನ್ನೂ ಮಾಡಲಿಲ್ಲ. ಬದಲಿಗೆ ತಮ್ಮ ಹಿತೈಶಿಗಳನ್ನೆಲ್ಲ ಒಬ್ಬೊಬ್ಬರನ್ನಾಗಿಯೇ ದೂರ ಮಾಡಿ ಮನೆ ತುಂಬಾ ನಾಯಿಗಳನ್ನು ಸಾಕುವುದರ ಜೊತೆ ದಿಕ್ಕು ತಪ್ಪಿಸುವ ನರಿಗಳನ್ನು ಸಾಕಲು ಶುರು ಮಾಡಿದರು. ಇವರೆಲ್ಲರ ಸಹಕಾರ ಬೆಂಬಲದಿಂದ ಮತ್ತೊಮ್ಮೆ ಜೈಲು ಪಾಲಾದರು. ಹಾಗಂಥ ಪಶ್ಚಾತಾಪದ ಬೆಂಕಿಯಲ್ಲಿ ಬೇಯುತ್ತಿದ್ದಾರಾ ಅಂದರೆ ಅದು ಇಲ್ಲ.ಇಂಥಾ ದರ್ಶನ್ ಬಗ್ಗೆ ಕನ್ನಡ ಚಿತ್ರರಂಗದ ಹಿರಿಯ ನಟ ಜಗ್ಗೇಶ್ ಮಾತನಾಡಿದ್ದಾರೆ. ದರ್ಶನ್ ಹಾಳಾಗಲು ಸಹವಾಸವೇ ಪ್ರಮುಖ ಕಾರಣವೆಂದಿದ್ದಾರೆ.
ಹೌದು, ಕನ್ನಡ ಪ್ರಭ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಜಗ್ಗೇಶ್ ಹತ್ತಾರು ವಿಚಾರಗಳ ಕುರಿತು ಮಾತನಾಡಿದ್ಧಾರೆ. ಆ ಪೈಕಿ ದರ್ಶನ್ ಪ್ರಕರಣದ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಜಗ್ಗೇಶ್, ದರ್ಶನ್ 25 ಕೋಟಿ ದುಡಿಯವ ನಟ, 500ರಿಂದ 600 ಮಂದಿಗೆ ಕೆಲಸ ಕೊಡುವ ಸಿನಿಮಾದ ಹೀರೋ. ಅವರನ್ನು ಪ್ರೀತಿಸುವ, ಅಭಿಮಾನಿಸುವ ನಿಜವಾದ ಅಭಿಮಾನಿಗಳು ಇದ್ದಾರೆ. ಆದರೆ, ದರ್ಶನ್ ಅವರಿಗೆ ಮಾರ್ಗದರ್ಶನ ಕೊರತೆ ಇದೆ. 'ಸಹವಾಸ ದೋಷ ಸನ್ಮಾಸಿ ಕೆಟ್ಟ' ಅನ್ನೋ ಮಾತು ಇದೆಯಲ್ಲ, ಅದು ಇದೇ ಮನುಷ್ಯನಿಗೆ ಸೂಕ್ತವಾಗುತ್ತೆ ಎಂದಿದ್ಧಾರೆ. ತಾಳ್ಮೆ ಮುಖ್ಯ. ಕೋಪ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

ಮುಂದುವರೆದು ದಿನನಿತ್ಯ ನನಗೂ ಕೂಡ ಸಾವಿರಾರು ಮೆಸೆಜ್ ಬರ್ತಾವೆ. ಅದರಲ್ಲಿ ಅರ್ಧಕ್ಕೆ ಅರ್ಧ ಸಂದೇಶಗಳಲ್ಲಿ ದ್ವೇಷವೇ ಇರುತ್ತೆ ಎಂದಿರುವ ಜಗ್ಗೇಶ್, ನೀನು ಅಪಘಾತದಲ್ಲಿ ಸತ್ತು ಹೋಗು ಎಂದು ಮೊನ್ನೆಯೊಬ್ಬ ಲೇಡಿ ನನಗೆ ಕಾಮೆಂಟ್ ಮಾಡಿದ್ದರು ಎಂದಿದ್ದಾರೆ. ಮತ್ತೊಬ್ಬರು ಯಾರ್ಯಾರೋ ಸಾಯುತ್ತಿದ್ದಾರೆ ನೀನು ಯಾಕೆ ಸಾಯುತ್ತಿಲ್ಲ ಎಂದಿದ್ದರು ಎಂದು ಹೇಳಿದ್ದಾರೆ. ಜನಪ್ರಿಯರ ಮೇಲೆ ಕಲ್ಲು ತೂರಿದರೆ ತಾವು ಸ್ಟಾರ್‌ಗಳು ಆಗಬಹುದು ಎನ್ನುವ ಭ್ರಮೆಯಲ್ಲಿ ಕೆಲವರು ಹೀಗೆಲ್ಲ ಮಾಡುತ್ತಾರೆ, ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಬಾರದು ಯಾಕೆಂದರೆ ನಮ್ಮ ದೇಶದ ಕಾನೂನು, ಪೊಲೀಸ್ ಇಲಾಖೆಗೆ ದೊಡ್ಡ ಶಕ್ತಿ ಇದೆ ಎಂದು ಹೇಳಿದ್ದಾರೆ.
ಇನ್ನೂ ಸೋಷಿಯಲ್ ಮೀಡಿಯಾಗಳನ್ನು ದುರ್ಬಳಕ ಮಾಡಿಕೊಂಡು ಕೆಟ್ಟ ಸಂದೇಶಗಳನ್ನು ಕಳುಹಿಸುತ್ತಿದ್ದ ಆ ವ್ಯಕ್ತಿ ಮೇಲೆ ಪೊಲೀಸರಿಗೆ ದೂರು ಕೊಟ್ಟು ಕಾನೂನಿನ ಮೂಲಕ ಪಾಠ ಕಲಿಸಿ, 'ನೋಡಿ ನೀವು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪು ಹೆಜ್ಜೆ ಹಾಕಿದರೆ ಇದೇ ರೀತಿ ಆಗುತ್ತದೆ' ಎಂದು ರಾಜ್ಯಕ್ಕೆ ಒಂದು ದೊಡ್ಡ ಸಂದೇಶ ಕೊಡುವ ಅವಕಾಶ ದರ್ಶನ್ ಅವರ ಮುಂದಿತ್ತು ಆದರೆ, ಆಗಿದ್ದೇ ಬೇರೆ ಎಂದಿರುವ ಜಗ್ಗೇಶ್ ಅದಕ್ಕೆ ಬೇಸರ, ನೋವಿದೆ. ಮುಂದಿನದ್ದು ಕಾನೂನಿಗೆ ಬಿಟ್ಟುಬಿಡೋಣ ಎಂದು ಕೂಡ ಹೇಳಿದ್ದಾರೆ ನವರಸನಾಯಕ ಜಗ್ಗೇಶ್.


Click it and Unblock the Notifications











