For Quick Alerts
  ALLOW NOTIFICATIONS  
  For Daily Alerts

  ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಪತ್ನಿ ಅಂಬುಜಾ ನಿಧನ

  |

  ಕನ್ನಡ ಚಿತ್ರರಂಗದ ಹಿರಿಯ ನಟ-ನಿರ್ದೇಶಕ ದ್ವಾರಕೀಶ್ ಅವರ ಪತ್ನಿ ಅಂಬುಜಾ ಅವರು ಇಂದು (ಏಪ್ರಿಲ್ 16) ನಿಧನರಾಗಿದ್ದಾರೆ.

  ಅನಾರೋಗ್ಯ ಸಮಸ್ಯೆಯಿಂದ ಹಿರಿಯ ನಟ ದ್ವಾರಕೀಶ್ ಪತ್ನಿ ಅಂಬುಜಾ ವಿಧಿವಶ | Filmibeat Kannada

  ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಂಬುಜಾ ದ್ವಾರಕೀಶ್ ಅವರು ಎಚ್‌ಎಸ್‌ಆರ್ ಲೇಔಟ್‌ನ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

  ದ್ವಾರ್ಕಿ ಎರಡನೇ ಮದುವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್ದ್ವಾರ್ಕಿ ಎರಡನೇ ಮದುವೆಗೆ ಮೊದಲ ಪತ್ನಿ ಗ್ರೀನ್ ಸಿಗ್ನಲ್

  ಅಂಬುಜಾ ದ್ವಾರಕೀಶ್ ಅವರು ಜನವರಿ ತಿಂಗಳಲ್ಲಿ 80ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದರು. ದ್ವಾರಕೀಶ್ ಮತ್ತು ಅಂಬುಜಾ ದಂಪತಿಗೆ ಐದು ಜನ ಗಂಡು ಮಕ್ಕಳು.

  ಅಂಬುಜಾ ಅವರ ಅಂತಿಮ ಕಾರ್ಯಗಳು ಇಂದು ಸಂಜೆ ವೇಳೆಗೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಪುತ್ರ ಯೋಗಿ ದ್ವಾರಕೀಶ್ ಮಾಹಿತಿ ನೀಡಿದ್ದಾರೆ.

  ಅಂದ್ಹಾಗೆ, ದ್ವಾರಕೀಶ್ ಅವರಿಗೆ ಇಬ್ಬರು ಹೆಂಡತಿಯರು. ಅಂಬುಜಾ ಅವರನ್ನು ವಿವಾಹ ಆದ್ಮೇಲೆ ಅವರ ಸಮ್ಮತಿ ಪಡೆದು ಶೈಲಜಾ ಎನ್ನುವವರನ್ನು ಎರಡನೇ ವಿವಾಹವಾಗಿದ್ದರು.

  English summary
  Kannada Senior Actor-Director Dwarakish Wife Ambuja Passes Away at Bengaluru.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X