ಬಹುಭಾಷಾ ನಟಿ ಬಿ. ಸರೋಜಾ ದೇವಿ ವಿಧಿವಶ

ಕನ್ನಡದ ಹಿರಿಯ ನಟಿ ಬಿ. ಸರೋಜಾ ದೇವಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. 1938ರ ಜನವರಿ 7ರಂದು ಬೆಂಗಳೂರಿನಲ್ಲಿ ಜನಿಸಿದ್ದ ಅವರು 17ನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿದ್ದರು. ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಹಿಂದಿಯಲ್ಲಿ ನೂರಾರು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು,

ಡಾ. ರಾಜ್‌ಕುಮಾರ್, ಎನ್‌ಟಿಆರ್, ಎಂಜಿಆರ್, ಶಿವಾಜಿ ರೀತಿಯ ಖ್ಯಾತನಾಮರ ಜೊತೆ ಬಿ. ಸರೋಜಾ ದೇವಿ ತೆರೆ ಹಂಚಿಕೊಂಡಿದ್ದರು. ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರನ್ನು ರಂಜಿಸಿದ್ದರು. ಒಂದ್ಕಾಲದಲ್ಲಿ ನಾಯಕಿಯಾಗಿ ಮಿಂಚಿದ ಅವರು ಬಳಿಕ ಪೋಷಕ ಪಾತ್ರಗಳತ್ತ ಮುಖ ಮಾಡಿದ್ದರು. ಪುನೀತ್ ರಾಜ್‌ಕುಮಾರ್ ನಟನೆಯ ನಟಸಾರ್ವಭೌಮ ಚಿತ್ರದ ಅತಿಥಿ ಪಾತ್ರದಲ್ಲಿ ಕೂಡ ಬಣ್ಣ ಹಚ್ಚಿದ್ದರು. ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿಗಳನ್ನು ಪಡೆದಿದ್ದರು.

Veteran Actress B Saroja Devi Passes Away at 87 A Legendary Journey Across Indian Cinema

ಅಭಿನಯ ಸರಸ್ವತಿ ಎಂಬ ಬಿರುದು ಕೂಡ ಬಿ. ಸರೋಜಾ ದೇವಿ ಅವರಿಗೆ ಲಭಿಸಿತ್ತು. ಡಾ. ರಾಜ್‌ಕುಮಾರ್ ಜೊತೆ 'ಬಬ್ರುವಾಹನ', 'ಭಾಗ್ಯವಂತರು', 'ತಂದೆ ಮಕ್ಕಳು' ಎಂಬ ಸಿನಿಮಾಗಳಲ್ಲಿ ಅವರು ನಟಿಸಿದ್ದರು.1955ರಲ್ಲಿ ತೆರೆಗೆ ಬಂದಿದ್ದ ಕನ್ನಡದ 'ಮಹಾಕವಿ ಕಾಳಿದಾಸ' ಚಿತ್ರದಲ್ಲಿ ಮೊದಲ ಬಾರಿಗೆ ಸರೋಜಾ ದೇವಿ ಬಣ್ಣ ಹಚ್ಚಿದ್ದರು. ಮರುವರ್ಷ 'ತಿರುಮಣಂ' ಎಂಬ ಸಿನಿಮಾ ಮೂಲಕ ತಮಿಳು ಚಿತ್ರರಂಗ ಪ್ರವೇಶಿಸಿದ್ದರು. 1957ರಲ್ಲಿ 'ಪಾಂಡುಗರಂ ಮಹಾತ್ಮ' ತೆಲುಗಿನಲ್ಲಿ ನಟಿಸಿದ್ದ ಮೊದಲ ಸಿನಿಮಾ ಆಗಿತ್ತು.

ಚಿತ್ರರಂಗ ಪ್ರವೇಶಿಸಿದ 4 ವರ್ಷಗಳಲ್ಲಿ 25ಕ್ಕೂ ಅಧಿಕ ಸಿನಿಮಾಗಳಲ್ಲಿ ಸರೋಜಾ ದೇವಿ ನಟಿಸಿದ್ದರು. ಕನ್ನಡ ಮೊದಲ ಲೇಡಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದರು. ತಮ್ಮ ಅದ್ಭುತ ಪಾತ್ರಗಳ ಮೂಲಕ ಸಿನಿರಸಿಕರನ್ನು ರಂಜಿಸಿದ್ದರು. ಟಾಲಿವುಡ್, ಕಾಲಿವುಡ್‌ನಲ್ಲಿ ಬೆಂಗಳೂರು ಸರೋಜಾ ದೇವಿ ಎಂದೇ ಖ್ಯಾತರಾಗಿದ್ದರು. ಕಳೆದ ಕೆಲ ವರ್ಷಗಳಿಂದ ಸಿಲಿಕಾನ್ ಸಿಟಿಯಲ್ಲೇ ಅವರು ನೆಲೆಸಿದ್ದರು. 2008 ರಲ್ಲಿ ಭಾರತ ಸರ್ಕಾರಿಂದ ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ ಅವರನ್ನು ಅರಸಿ ಬಂದಿತ್ತು.

Veteran Actress B Saroja Devi Passes Away at 87 A Legendary Journey Across Indian Cinema

1961ರಲ್ಲಿ 'ಒಪೆರಾ ಹೌಸ್' ಸಿನಿಮಾ ಮೂಲಕ ಬಾಲಿವುಡ್ ಅಂಗಳಕ್ಕೂ ಬಿ. ಸರೋಜಾ ದೇವಿ ಜಿಗಿದಿದ್ದರು. ಕನ್ನಡಕ್ಕಿಂತ ತೆಲುಗು, ತಮಿಳಿನಲ್ಲೇ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. 7 ದಶಕಗಳ ಕಾಲ ಹಲವು ಸಿನಿಮಾಗಳಲ್ಲಿ ನಟಿಸಿ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅಪಾರ. ಕಳೆದ 20 ವರ್ಷಗಳಿಂದ ಅವರು ಹೆಚ್ಚು ಸಿನಿಮಾಗಳಲ್ಲಿ ನಟಿಸಲಿಲ್ಲ. ಆಗೊಂದು ಈಗೊಂದು ಚಿತ್ರದಲ್ಲಿ ಮಾತ್ರ ಕಾಣಿಸಿಕೊಂಡಿದ್ದರು.

ಪುನೀತ್ ರಾಜ್‌ಕುಮಾರ್ ಜೊತೆ 'ನಟಸಾರ್ವಭೌಮ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಸರೋಜಾ ದೇವಿ ಮಿಂಚಿದ್ದೆ ಕೊನೆ. ಇನ್ನು 1967ರಲ್ಲಿ ಶ್ರೀಹರ್ಷ ಎಂಬುವವರ ಜೊತೆ ಸರೋಜಾ ದೇವಿ ಮದುವೆ ಆಗಿದ್ದರು. 1986ರಲ್ಲಿ ಅನಾರೋಗ್ಯ ಸಮಸ್ಯೆಯಿಂದ ಶ್ರೀಹರ್ಷ ಕೊನೆಯುಸಿರೆಳೆದಿದ್ದರು. ಅವರಿಗೆ ಇಬ್ಬರು ಮಕ್ಕಳು. ಸರೋಜಾ ದೇವಿ ಅವರನ್ನು 'ಕನ್ನಡತ್ತು ಪೆನ್ಕಿಳಿ'(ಕನ್ನಡದ ಗಿಣಿ) ಎಂದು ತಮಿಳು ಚಿತ್ರರಂಗದಲ್ಲಿ ಕರೆಯುತ್ತಿದ್ದರು.

'ಕಿತ್ತೂರು ರಾಣಿ ಚೆನ್ನಮ್ಮ' 'ಬಬ್ರುವಾಹನ', 'ಕೋಕಿಲವಾಣಿ', 'ಭಾಗ್ಯವಂತರು', 'ಶ್ರೀರಾಮಪೂಜಾ', 'ರತ್ನಗಿರಿ ರಹಸ್ಯ', 'ಸ್ಕೂಲ್ ಮಾಸ್ಟರ್', 'ಭೂಕೈಲಾಸ', 'ಅಣ್ಣತಂಗಿ', 'ಜಗಜ್ಯೋತಿ ಬಸವೇಶ್ವರ', 'ದೇವಸುಂದರಿ' ಕನ್ನಡದಲ್ಲಿ ಬಿ. ಸರೋಜಾ ದೇವಿ ನಟಿಸಿದ್ದ ಕೆಲ ಜನಪ್ರಿಯ ಚಿತ್ರಗಳು.

ಬಿ. ಸರೋಜಾ ದೇವಿ ಅವರ ತಂದೆ ಭೈರಪ್ಪ ಮೈಸೂರಿನಲ್ಲಿ ಪೊಲೀಸ್ ಅಧಿಕಾರಿಯಾಗಿದ್ದರು. ತಾಯಿ ರುದ್ರಮ್ಮ ಗೃಹಿಣಿ. ತಂದೆ ಭೈರಪ್ಪ ಮಗಳಿಗೆ ಚಿಕ್ಕಂದಿನಲ್ಲೇ ನೃತ್ಯ ಕಲಿಯಲು ಹೇಳಿದರು. ಮುಂದೆ ಸಿನಿಮಾಗಳಲ್ಲಿ ನಟಿಸಲು ಪ್ರೋತ್ಸಾಹಿಸಿದ್ದರು. ಕನ್ನಡ, ತೆಲುಗು, ತಮಿಳು ಮಾತ್ರವಲ್ಲ ಹಿಂದಿಯಲ್ಲಿ ದಿಲೀಪ್ ಕುಮಾರ್, ರಾಜೇಂದ್ರ ಕುಮಾರ್, ಶಮ್ಮೀ ಕಪೂರ್, ಸುನಿಲ್‌ದತ್‌ರಂತಗ ದಿಗ್ಗಜರ ಜೊತೆ ನಟಿಸಿ ಗಮನ ಸೆಳೆದಿದ್ದರು.

More from Filmibeat

English summary
actress B. Saroja Devi nomore
Read more about: b saroja devi sandalwood kannada
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X