For Quick Alerts
  ALLOW NOTIFICATIONS  
  For Daily Alerts

  ಪಡ್ಡೆಗಳ ನಿದ್ದೆಗೆಡಿಸಿದ್ದ ಜ್ಯೋತಿಲಕ್ಷ್ಮಿ ಚಿರನಿದ್ರೆಗೆ

  By ಜೇಮ್ಸ್ ಮಾರ್ಟಿನ್
  |

  ಆ ಕಾಲದಲ್ಲಿ ಜ್ಯೋತಿ ಲಕ್ಷ್ಮಿ, ಜಯಮಾಲಿನಿ 'ಐಟಮ್ ಡ್ಯಾನ್ಸ್' ನೋಡುವುದಕ್ಕೆ ಜನ ಚಿತ್ರಮಂದಿರಗಳಿಗೆ ಮುಗಿ ಬೀಳುತ್ತಿದ್ದರು. ಇಂಥ ಜ್ಯೋತಿಲಕ್ಷ್ಮಿ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಮೊಟ್ಟ ಮೊದಲ ಬಾರಿಗೆ ಕ್ಲಬ್, ಪಬ್, ಡಿಸ್ಕೋ, ಕ್ಯಾಬೆರೆ ನೃತ್ಯದ ಝಲಕ್ ತೋರಿಸಿದವರು. ರಕ್ತದ ಕ್ಯಾನ್ಸರ್ ನಿಂದ ಬಳಲುತಿದ್ದ ಜ್ಯೋತಿಲಕ್ಷ್ಮಿ ಅವರು ಚೆನ್ನೈನಲ್ಲಿ ಮಂಗಳವಾರ ನಿಧನರಾಗಿದ್ದಾರೆ.

  70ರ ದಶಕದಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟು ಸಂಚಲನ ಮೂಡಿಸಿದ ಜ್ಯೋತಿಲಕ್ಷ್ಮಿ ಅವರು ಕನ್ನಡ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲಿ ಐಟಂ ಡ್ಯಾನ್ಸ್ ಕಾನ್ಸೆಫ್ಟ್ ಹೊರ ತಂದವರು. [ನಾಟ್ಯಮಯೂರಿ ಜ್ಯೋತಿಲಕ್ಷ್ಮಿಯ ಗೆಜ್ಜೆ ಗುರುತು]

  ಅಕ್ಕ ಜ್ಯೋತಿಗೆ ತಂಗಿಗೆ ಪೈಪೋಟಿ: ತಂಗಿ ಜಯಮಾಲಿನಿ ಎಂಟ್ರಿ ಕೊಟ್ಟ ಮೇಲೆ ಜ್ಯೋತಿಲಕ್ಷ್ಮಿ ಡಲ್ ಆಗಿಬಿಟ್ಟರು.

  1965ರಲ್ಲಿ ತೆರೆಕಂಡ ಕನ್ನಡ ಸಿನಿಮಾ 'ಕುಳ್ಳ ಏಜೆಂಟ್ 000' ಅಲ್ಲದೆ, ಬೆಂಗಳೂರು ಮೇಲ್, ಪ್ರತಿಧ್ವನಿ, ಚೆಲ್ಲಿದ ರಕ್ತದಲ್ಲಿ ಡ್ಯಾನ್ಸ್ ಮಾಡಿದ್ದರು. 2004ರಲ್ಲಿ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿಕೊಟ್ಟು ಉಪೇಂದ್ರ ಅವರ ರಕ್ತ ಕಣ್ಣೀರು ಚಿತ್ರದಲ್ಲಿ ನಟಿಸಿದ್ದರು.

  English summary
  Veteran Actress Jothilakshmi passed away. She acted in more than 300 movies in as many TV serials and plays.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X