Just In
Don't Miss!
- News
ಮಾರ್ಚ್ 4ರಂದು ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?
- Automobiles
ಖಾಲಿ ಜಾಗಗಳಲ್ಲಿ ತಲೆ ಎತ್ತಲಿವೆ ಎಲೆಕ್ಟ್ರಿಕ್ ವಾಹನ ಚಾರ್ಜಿಂಗ್ ಕೇಂದ್ರಗಳು
- Finance
ಏರಿಕೆಯಾಗಿದ್ದ ಸೆನ್ಸೆಕ್ಸ್ ಕುಸಿತ: 716 ಪಾಯಿಂಟ್ಸ್ ಇಳಿಕೆ
- Education
DFCCIL Recruitment 2021: 1099 ಜ್ಯೂನಿಯರ್ ಮ್ಯಾನೇಜರ್ ಮತ್ತು ಎಕ್ಸಿಕ್ಯುಟಿವ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Sports
ಭಾರತ vs ಇಂಗ್ಲೆಂಡ್: ಧೋನಿ ದಾಖಲೆ ಸರಿದೂಗಿಸಿದ ವಿರಾಟ್ ಕೊಹ್ಲಿ
- Lifestyle
ಈ 7 ಬಗೆಯ ಆಹಾರಗಳು ಕೂದಲು ಉದುರುವ ಸಮಸ್ಯೆ ಹೆಚ್ಚಿಸುವುದು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಸೂಪರ್ ಸ್ಟಾರ್'ಗಳ ನೆಚ್ಚಿನ 'ಅಭಿನೇತ್ರಿ' ಕೃಷ್ಣಕುಮಾರಿ ನಿಧನ
ತೆಲುಗು ಚಿತ್ರರಂಗದ ಅಭಿನೇತ್ರಿ ನಟಿ ಕೃಷ್ಣಕುಮಾರಿ (83) ಇನ್ನು ನೆನಪು ಮಾತ್ರ. ಮೂಳೆ ಕ್ಯಾನ್ಸರಿನಿಂದ ಬಳಲುತ್ತಿದ್ದ ಅವರು ಇತ್ತೀಚೆಗೆ ಚೇತರಿಕೆ ಕಂಡಿದ್ದರು. ಆದರೆ, ವಯೋ ಸಹಜ ಅನಾರೋಗ್ಯದಿಂದ ನಿಸ್ತೇಜರಾಗಿ ಬುಧವಾರ ಬೆಳಗ್ಗೆ ತಮ್ಮ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
60 ರಿಂದ 80ರ ದಶಕದ ಖ್ಯಾತ ನಟಿಯಾಗಿದ್ದ ಕೃಷ್ಣಕುಮಾರಿ ಹೆಚ್ಚು ಗುರುತಿಸಿಕೊಂಡಿದ್ದು ತೆಲುಗು ಭಾಷೆಯಲ್ಲಿ. ತೆಲುಗಿನಲ್ಲಿ ಸುಮಾರು 110ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿರುವ ಕೃಷ್ಣಕುಮಾರಿ ತಮಿಳು, ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲೂ ಮಿಂಚಿದ್ದರು. ಈ ಮೂಲಕ ಚರ್ತುಭಾಷಾ ತಾರೆಯಾಗಿ ಯಶಸ್ಸು ಕಂಡಿದ್ದರು.
ಕ್ಯಾನ್ಸರಿನಿಂದ ಚೇತರಿಸಿಕೊಂಡಿದ್ದ ನಟಿ ಕೃಷ್ಣಕುಮಾರಿ ಇನ್ನಿಲ್ಲ
ಕೃಷ್ಣಕುಮಾರಿ ಆಗಿನ ಕಾಲದ ಸ್ಟಾರ್ ನಾಯಕಿ. ದಕ್ಷಿಣ ಭಾರತದ ಬಹುತೇಕ ಎಲ್ಲ ಸೂಪರ್ ಸ್ಟಾರ್ ನಟರಿಗೆ ನೆಚ್ಚಿನ ನಾಯಕಿಯಾಗಿದ್ದರು. ಎನ್.ಟಿ. ರಾಮ ರಾವ್, ಅಕ್ಕಿನೀನಿ ನಾಗೇಶ್ವರ ರಾವ್, ಕೃಷ್ಣಂ ರಾಜು, ಡಾ ರಾಜ್ ಕುಮಾರ್, ಶಿವಾಜಿ ಗಣೇಶನ್, ಜಗ್ಗಯ್ಯ ಸೇರಿದಂತೆ ಹಲವರ ಜೊತೆ ನಟಿಸಿದ್ದರು. ಹಾಗಿದ್ರೆ, ಕೃಷ್ಣ ಕುಮಾರಿ ಕನ್ನಡದಲ್ಲಿ ಅಭಿನಯಿಸಿದ ಚಿತ್ರಗಳು ಯಾವುದು? ಅವರ ಸಿನಿ ಪಯಣ ಹೇಗಿತ್ತು ಎಂಬುದನ್ನ ತಿಳಿಯಲು ಮುಂದೆ ಓದಿ.....

ತೆಲುಗು ಚಿತ್ರದ ಮೂಲಕ ಸಿನಿಮಾ ಪ್ರವೇಶ
1951ರಲ್ಲಿ ತೆರೆಕಂಡ 'ನವ್ವುತೆ ನವರತ್ನಾಲು' ಚಿತ್ರದ ಮೂಲಕ ಕೃಷ್ಣಕುಮಾರಿ ಸಿನಿಮಾರಂಗ ಪ್ರವೇಶ ಮಾಡಿದರು. ತೆಲುಗು ಚಿತ್ರದಲ್ಲಿ ಚೊಚ್ಚಲ ಭಾರಿಗೆ ಬಣ್ಣ ಹಚ್ಚಿದ್ದ ನಟಿ ನಂತರ ತಮಿಳು, ಕನ್ನಡ ಹಾಗೂ ಮಲಯಾಳಂ ಚಲನಚಿತ್ರಗಳಲ್ಲಿ ನಟಿಸಿದರು.

110ಕ್ಕೂ ಅಧಿಕ ತೆಲುಗು ಸಿನಿಮಾ
'ಪಾತಳ ಬೈರವಿ', 'ಪ್ರಿಯುರಾಲು', 'ಪಿಚ್ಚಿ ಪುಲ್ಲಯ್ಯ', 'ಬಂಗಾರು ಪಾಪ', 'ವಿನಾಯಕ ಚೌತಿ', 'ವೀರ ಕಂಕಣಂ', 'ದೀಪಾವಳಿ', 'ಭಾರ್ಯ ಬರ್ತಲು', 'ಕುಲ ಗೋತ್ರಾಲು' ಸೇರಿದಂತೆ 110ಕ್ಕೂ ಅಧಿಕ ತೆಲುಗು ಸಿನಿಮಾದಲ್ಲಿ ಕೃಷ್ಣ ಕುಮಾರಿ ನಟಿಸಿ ತೆಲುಗು ಪ್ರೇಕ್ಷಕ್ಷರ ಮನಗೆದ್ದಿದ್ದರು.

ಡಾ ರಾಜ್ ಜೊತೆ ಹೆಚ್ಚು ಸಿನಿಮಾ
ಕನ್ನಡದಲ್ಲೂ ಹಲವು ಚಿತ್ರಗಳಲ್ಲಿ ನಟಿಸಿದ್ದ ಕೃಷ್ಣ ಕುಮಾರಿ, ಡಾ ರಾಜ್ ಕುಮಾರ್ ಗೆ ಹೆಚ್ಚು ಸಿನಿಮಾಗಳಲ್ಲಿ ನಾಯಕಿಯಾಗಿದ್ದರು. 'ಭಕ್ತ ಕನಕದಾಸ', 'ಆಶಾಸುಂದರಿ', 'ದಶಾವಾತಾರ', 'ಶ್ರೀಶೈಲ ಮಹಾತ್ಮೆ', 'ಭಕ್ತ ಕಬೀರ', 'ಸ್ವರ್ಣ ಗೌರಿ', 'ಚಂದ್ರ ಕುಮಾರ', 'ಸತಿ ಸಾವಿತ್ರಿ' ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರು.

ಸಾಹುಕಾರ್ ಜಾನಕಿ ಸಹೋದರಿ
1933 ರ ಮಾರ್ಚ್ 6 ರಂದು ಪಶ್ಚಿಮ ಬಂಗಾಳದ ನೈಹಾತಿಯಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ಟಿ ಕೃಷ್ಣ ಕುಮಾರಿ ಅವರ ತಂದೆ ವೆಂಕೋಜಿ ರಾವ್, ತಾಯಿ ಸಚಿ ದೇವಿ. ಇವರ ಸಹೋದರಿ ಸಾಹುಕಾರ್ ಜಾನಕಿ ಕೂಡಾ ಬಹುಭಾಷಾ ನಟಿಯಾಗಿ ಮಿಂಚಿದರು. ಇಂಡಿಯನ್ ಎಕ್ಸ್ ಪ್ರೆಸ್ ನ ಮಾಜಿ ಸಂಪಾದಕ ಮತ್ತು ಪತ್ರಿಕೋದ್ಯಮಿ ಅಜಯ್ ಮೋಹನ್ ಖೈತಾನ್ ರನ್ನು ಕೃಷ್ಣ ಕುಮಾರಿ ಮದುವೆಯಾಗಿದ್ದರು. ಪುತ್ರಿ ದೀಪಿಕಾ, ಅಳಿಯ ವಿಕ್ರಮ್, ಮೊಮ್ಮಗ ಪವನ್ ಜತೆ ಬೆಂಗಳೂರಿನಲ್ಲಿ ಕೃಷ್ಣಕುಮಾರಿ ಅವರು ಬಹುಕಾಲದಿಂದ ನೆಲೆಸಿದ್ದರು.