"ಮಗ ಕದ್ದು ಬಸುರಿಯಾಗಿ ಮದ್ವೆ ಮಾಡಿಸ್ಲಿಲ್ಲ, ಪ್ಯಾಲೇಸ್‌ನಲ್ಲಿ ಮದ್ವೆ ಮಾಡ್ಲಿಲ್ಲ, ಅದ್ಕೆ ಹೇಳ್ಲಿಲ್ಲ": ಲೀಲಾವತಿ ತಿರುಗೇಟು

ಇತ್ತೀಚೆಗೆ ನಿರ್ದೇಶಕ, ಡಾ. ರಾಜ್‌ ಕುಟುಂಬಕ್ಕೆ ಒಂದ್ಕಾಲದಲ್ಲಿ ಆಪ್ತರಾಗಿದ್ದ ಪ್ರಕಾಶ್ ರಾಜ್ ಮೇಹು ಫೇಸ್‌ಬುಕ್‌ನಲ್ಲಿ ಒಂದು ಪೋಸ್ಟ್ ಮಾಡಿದ್ದರು. ಅದರಲ್ಲಿ ಹಿರಿಯ ನಟಿ ಲೀಲಾವತಿ ಹಾಗೂ ಪುತ್ರ ವಿನೋದ್ ರಾಜ್ ವೈಯಕ್ತಿಕ ವಿಚಾರಗಳ ಪ್ರಸ್ತಾಪಿಸಿದ್ದರು. ಅದಕ್ಕೆ ಸಾಕ್ಷಿ ಇದೆ ನೋಡಿ ಎಂದಿದ್ದರು. ಆ ಪೋಸ್ಟ್ ಸಖತ್ ವೈರಲ್ ಆಗಿತ್ತು. ಇದೀಗ ಈ ಬಗ್ಗೆ ನಟಿ ಲೀಲಾವತಿ ಸ್ವತಃ ಪ್ರತಿಕ್ರಿಯಿಸಿದ್ದಾರೆ.

ಸಿನಿ ವರ್ಲ್ಡ್ ಯೂಟ್ಯೂಬ್‌ ಸಂದರ್ಶನವೊಂದರಲ್ಲಿ ಲೀಲಾವತಿ ಮಾತನಾಡಿದ್ದಾರೆ. ಇತ್ತೀಚಿಗೆ ನಿಮ್ಮ ಮಗನ ಮದುವೆ ಬಗ್ಗೆ ಫೋಟೊ ಹೊರಬಂತು ಇದ್ದರ ಬಗ್ಗೆ ಏನು ಹೇಳುತ್ತೀರಾ ಎನ್ನುವ ಪ್ರಶ್ನೆಗೆ, "ನೀಟ್‌ ಇದೆ ಅಲ್ವಾ? ಸೊಟ್ಟಪಟ್ಟ ಇಲ್ದೆ ಅಂಕು ಡೊಂಕು ಇಲ್ದೆ ಕಳ್ಳರ ಹಾಗೆ ಸುಳ್ಳರ ಹಾಗೆ ಇಲ್ದೆ ನೆಮ್ಮದಿಯಾಗಿ ನೀಟಾಗಿ ಇದೆ" ಎಂದಿದ್ದಾರೆ. "ಮಗನಿಗೆ ಮದುವೆ ಮಾಡಿದ್ದೀನಿ. ಯಾಕೆ ಹೇಳ್ಲಿಲ್ಲ ಅಂದ್ರೆ, ಎಂಥೆಂಥವರ ಮದುವೆ ಎಲ್ಲೆಲ್ಲೋ ಆಗಿದೆ. ಪ್ಯಾಲೇಸ್‌ಗಳಲ್ಲಿ ಮಾಡಿದ್ದಾರೆ. ನನಗೆ ಆ ಚೈತನ್ಯ ಇರಲಿಲ್ಲ. ಹಾಗಾಗಿ ಅದನ್ನು ರಹಸ್ಯವಾಗಿ ಇಡುವುದೇ ಒಳ್ಳೆಯದು ಎನಿಸಿತು"

Veteran Actress Leelavathi Reacts to Her Son Vinod Rajs Secret Marriage

"ಅವನೇನು ಹೆಣ್ಣು ಹುಡುಗಿ ಅಲ್ಲ, ಕದ್ದು ಬಸುರಾಗಿದ್ದಕ್ಕೆ ಮದ್ವೆ ಮಾಡಿಸಿದೆ ಎಂದು ಹೇಳುವುದಿಲ್ಲ. ಪವಿತ್ರವಾಗಿ ಇದ್ದಾನೆ. ನನಗೆ ಒಳ್ಳೆ ಮಗನಾಗಿ ಇದ್ದಾನೆ. ನಾನೇ ಇಷ್ಟಪಟ್ಟು ಮದುವೆ ಮಾಡಿಸಿದೆ. ತಿರುಪತಿ ಬೆಟ್ಟದ ಮೇಲೆ ಮದುವೆ ಮಾಡಿಸಿದೆ. ನನಗೆ ಅನ್ನಿಸಿತು ಅದು ಶ್ರೇಷ್ಠ ಜಾಗ ಅಂತ. ಎಲ್ಲರಿಗೂ ಗೊತ್ತಾಗಿ ಕೊಂಕು ಮಾತು, ಡೊಂಕು ಮಾತು ಕೇಳುವ ಬದಲು ಮಾತನಾಡುವುದಕ್ಕಿಂತ ಪರಿಶುದ್ದವಾದ ಜಾಗದಲ್ಲಿ ಮದುವೆ ಮಾಡುವುದು ಒಳ್ಳೆಯದು ಎನಿಸಿತು. ವೆಂಕಟರಮಣ ಸನ್ನಿಧಿಯಲ್ಲಿ ಮಾಡಿಸಿದೆ. 7 ಜನ ಕನ್ನಡಿಗರು ಮದುವೆಗೆ ಬಂದಿದ್ದರು."

"ಮದುವೆ ಮನೆಯಲ್ಲಿ ಏನ್ ಲೀಲಾವತಿಯವರೇ, ನಿಮ್ಮ ಮಗನ ಮದುವೆಗೆ 7 ಜನ ಮಾತ್ರ ಬಂದಿದ್ದಾರೆ. ಜನ ಸಿಗಲಿಲ್ವಾ? ಎಂದರು. ಆದರೆ ನಾನು ಯಾವುದಕ್ಕು ತೆಲ ಕೆಡಿಸಿಕೊಳ್ಳಲಿಲ್ಲ. ಮೊಮ್ಮೊಗ ಮತ್ತು ಸೊಸೆ ಚೆನ್ನಾಗಿ ಇದ್ದಾರೆ. ಬೆರಳು ತೋರಿಸುವಂತೆ ಮಾಡಲಿಲ್ಲ ನಾನು. ಚಿನ್ನದ ಹಾಗೆ ಇದ್ದಾರೆ. ನಾನು ಯಾವುದೇ ಕೊರತೆ ಮಾಡಿಲ್ಲ. ನನಗೆ ಬಹಳ ಬೇಸರ ಆಗುತ್ತದೆ. ನಮ್ಮ ಅಂತರಂಗದ ಸುದ್ದಿಯನ್ನು ಈ ರೀತಿ ಕೇಳುತ್ತಾರೆ ಅಂತ. ಯಾರು ಏನಾದರೂ ಹೇಳಲಿ, ನನ್ನ ಆತ್ಮಸಾಕ್ಷಿಯಂತೆ ನಾನು ನಡೆದುಕೊಂಡಿದ್ದೇನೆ."

"ಯಾರು ಏನೇನೋ ಅಂದುಕೊಳ್ಳುತ್ತಾರೆ. ನಾನು ಬರೀ 30 ಸಾವಿರಕ್ಕೆ ಈ ಜಮೀನು ಕೊಂಡುಕೊಂಡೆ. ಮೊಮ್ಮಗನಿಗೆ ಸೊಸೆಗೆ ಒಳ್ಳೆ ಬಂಗಲೆ ಇದೆ. ಎಲ್ಲಾ ಸೌಕರ್ಯ ಇದೆ. ಈ ರೀತಿ ಪದೇ ಪದೇ ನನ್ನ ವಿಚಾರಗಳನ್ನು ಮಾತನಾಡಿ ನೋವು ಮಾಡುವವರು ನರಕಕ್ಕೆ ಬೀಳ್ತಾರೆ. ನನ್ನ ಬಡತನದ ಬಗ್ಗೆ ಹೇಳಲು ಸಂಕೋಚ ಆಗುತ್ತದೆ. 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದೇನೆ. ಆದರೂ ನನ್ನ ಮಗನ ಮದುವೆ ವಿಜೃಂಬಣೆಯಿಂದ ಮಾಡೋಕೆ ಆಗಲಿಲ್ಲ ಬೇಸರ ಇದೆ. ಯಾವ ತಾಯಿ ಕೂಡ ತಮ್ಮ ಮಕ್ಕಳ ಭವಿಷ್ಯ ಚೆನ್ನಾಗಿ ಇರೋದು ಬೇಡ ಎನ್ನುವುದಿಲ್ಲ" ಎಂದು ಹೇಳಿದ್ದಾರೆ.

Veteran Actress Leelavathi Reacts to Her Son Vinod Rajs Secret Marriage

ವಿನೋದ್ ರಾಜ್‌ ಮಾತನಾಡಿ "ಅಮ್ಮ ನೆಮ್ಮದಿಯಾಗಿ ಇದ್ದಾರೆ. ಅವರು ನೆಮ್ಮದಿಯಾಗಿ ಇರಲು ಬಿಡಿ. ಅಮ್ಮ ಕರ್ನಾಟಕದ ಆಸ್ತಿ" ಎಂದಿದ್ದಾರೆ.
ಡಾ. ರಾಜ್‌ಕುಮಾರ್ ಹಾಗೂ ನಟಿ ಲೀಲಾವತಿಯವರ ಪುತ್ರ ವಿನೋದ್ ರಾಜ್ ಎನ್ನುವ ವಿವಾದ ಪದೇ ಪದೇ ಸದ್ದು ಮಾಡುತ್ತಲೇ ಇದೆ. ಇದೇ ವಿಚಾರವಾಗಿ ಪ್ರಕಾಶ್ ರಾಜ್ ಮೇಹು ಸ್ಪೋಟಕ ಮಾಹಿತಿ ಇದೆ ಎಂದು ಹೇಳಿ ಪೋಸ್ಟ್‌ ಮಾಡಿದ್ದರು. ಇದರಲ್ಲಿ 2 ವಿಚಾರಗಳನ್ನು ತಿಳಿಸಿದ್ದರು.

ಮೊದಲನೆಯದಾಗಿ "ಲೀಲಾವತಿಯವರ ಗಂಡ ಮಹಾಲಿಂಗ ಭಾಗವತರ್ ಅನ್ನುವುದು. ಇದು ಈ ಕೆಳಗೆ ಕೊಟ್ಟಿರುವ ಲೀಲಾವತಿಯವರ ಚೆನ್ನೈ ಆಸ್ತಿಯ ಪತ್ರ ತಮಿಳು ಭಾಷೆಯಲ್ಲಿದೆ ಅದರಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಅಮ್ಮಾಳ್ (ಲೀಲಾವತಿಯಮ್ಮ) ಅನ್ನುವುದು ಸ್ಪಷ್ಟವಾಗಿದೆ ಎಂದಿದ್ದರು.

ವಿನೋದ್ ರಾಜ್ ಮದುವೆಯನ್ನೇ ಆಗದೇ ತಾಯಿಯ ಸೇವೆಯಲ್ಲಿ ನಿರತರಾಗಿದ್ದಾರೆ ಅನ್ನುವವರಿಗೆ ಮಾಹಿತಿ. ಈ ಕೆಳಗಿನ ಫೋಟೋದಲ್ಲಿ ಸೋಫಾ ಮೇಲೆ ಕುಳಿತಿರುವವರು ವಿನೋದ್ ರಾಜ್ ಹೆಂಡತಿ ಮತ್ತು ಮಗ, ಚೆನ್ನೈನಲ್ಲಿದ್ದಾರೆ. ಮಗ ಇಂಜಿನಿಯರಿಂಗ್ ಓದುತ್ತಿದ್ದಾನೆ. ಈ ಫ್ಯಾಮಿಲಿ ಫೋಟೋ ನನಗೆ ಸಿಕ್ಕಿ ಆರು ತಿಂಗಳ ಮೇಲಾಯ್ತು, ಆಗೇನಾದರೂ ಈ ಫೋಟೋ ಪ್ರಕಟಿಸಿದ್ದರೆ ಅವರು ಖಂಡಿತ "ಅವರು ಯಾರೋ ಅಭಿಮಾನಿಗಳು" ಅಂದು ಬಿಡುತ್ತಿದ್ದರು.

"ಸೂಕ್ತ ದಾಖಲೆಗಾಗಿ ಕಾಯುತ್ತಿದ್ದೆ ಇಂದು ಗೆಳೆಯರೊಬ್ಬರು ಚೆನ್ನೈನಿಂದ ಈ Marks Card ಮತ್ತು ಆಸ್ತಿ ದಾಖಲೆ ಪತ್ರ ಕಳುಹಿಸಿ ಕೊಟ್ಟರು ಆದ್ದರಿಂದ ಇಂದು ಇವನ್ನು ಬಹಿರಂಗ ಪಡಿಸಿದ್ದೇನೆ" ಎಂದು ಬರೆದುಕೊಂಡಿದ್ದರು. ಇದೇ ವಿಚಾರವನ್ನು ಪ್ರಕಾಶ್ ರಾಜ್ ಮೇಹು ಫಿಲ್ಮಿಬೀಟ್ ಜೊತೆಗೂ ಹಂಚಿಕೊಂಡಿದ್ದರು.

More from Filmibeat

English summary
Veteran Actress Leelavathi Reacts to Her Son Vinod Raj's Secret Marriage. Also Reveled Their wedding took place in Tirupati Temple. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X