twitter
    For Quick Alerts
    ALLOW NOTIFICATIONS  
    For Daily Alerts

    ಭಾರತ ಸಿನಿ ರತ್ನ ಕೆ.ಬಾಲಚಂದರ್ ಗೆ ಟ್ವೀಟಿನ ಹಾರ

    By Harshitha
    |

    ಭಾರತೀಯ ಚಿತ್ರರಂಗ ಕಂಡ ಅತ್ಯದ್ಭುತ ನಿರ್ದೇಶಕ, ಅನರ್ಘ್ಯ ರತ್ನ, ಬಣ್ಣದ ಬದುಕಿಗೆ ಸೂಪರ್ ಸ್ಟಾರ್ ರಜನಿಕಾಂತ್, ಸಕಲಕಲಾವಲ್ಲಭ ಕಮಲ್ ಹಾಸನ್, ರಮೇಶ್ ಅರವಿಂದ್ ರಂತಹ ಅದ್ಭುತ ಪ್ರತಿಭೆಗಳನ್ನು ಪರಿಚಯಿಸಿದ ಶ್ರೇಷ್ಠ ನಿರ್ದೇಶಕ ಕೆ.ಬಾಲಚಂದರ್ ಬಾರದ ಲೋಕಕ್ಕೆ ತೆರಳಿದ್ದಾರೆ.

    ಅನಾರೋಗ್ಯದಿಂದ ಬಳಲುತ್ತಿದ್ದ ಕೆ.ಬಾಲಚಂದರ್ ಕಳೆದ ಕೆಲ ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೂ, ಚೇತರಿಸಿಕೊಳ್ಳಲೇ ಇಲ್ಲ. ನಿನ್ನೆ (ಡಿಸೆಂಬರ್ 23) ಮಂಗಳವಾರ ಸಂಜೆ ಹೃದಯಾಘಾತದಿಂದ ಚೆನ್ನೈನಲ್ಲಿರುವ ಕಾವೇರಿ ಆಸ್ಪತ್ರೆಯಲ್ಲಿ ನಿಧನರಾದ ಕೆ.ಬಾಲಚಂದರ್ ಗೆ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. [ಚಿತ್ರಗಳಲ್ಲಿ ಸಿನಿಬ್ರಹ್ಮ 'ಕೆಬಿ' ಸಾರ್ ಗೆ ರಜನಿ ನಮನ]

    ಬರಸಿಡಿಲಿನಂತೆ ಬಡಿದ ಕೆ.ಬಾಲಚಂದರ್ ನಿಧನದ ಸುದ್ದಿ ಕೇಳಿ ಅನೇಕ ತಾರೆಯರು ಶೋಕ ಸಾಗರದಲ್ಲಿ ಮುಳುಗಿದ್ದಾರೆ. ಕನ್ನಡ, ತೆಲುಗು, ತಮಿಳು, ಹಿಂದಿ ಮತ್ತು ಮಲೆಯಾಳಂ ಚಿತ್ರರಂಗದಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿರುವ ಕೆ.ಬಾಲಚಂದರ್ ಗೆ ಖ್ಯಾತ ತಾರೆಯರು ಸಲ್ಲಿಸಿರುವ ನುಡಿನಮನ ಇಲ್ಲಿದೆ. ಸ್ಲೈಡ್ ಗಳಲ್ಲಿ ನೋಡಿ ಭಾವಪೂರ್ಣ ನಮನ. [ಸ್ಯಾಂಡಲ್ ವುಡ್ ಮಹಾಚುನಾವಣೆ 2014 - ನಿಮ್ಮ ಮತ ಯಾರಿಗೆ?]

    ರಜನಿಕಾಂತ್

    ರಜನಿಕಾಂತ್

    ''ಕೆ.ಬಿ. ಸರ್ ನನಗೆ ಗುರು ಮಾತ್ರ ಅಲ್ಲ. ಅವರು ನನ್ನ ತಂದೆ ಕೂಡ. ಅವರೂ ಅಷ್ಟೆ ನನ್ನನ್ನ ಕೇವಲ ಒಬ್ಬ ನಟ ಅಂತ ನೋಡಿಲ್ಲ. ಸ್ವಂತ ಮಗನನ್ನಾಗಿ ನನ್ನ ನೋಡಿಕೊಂಡಿದ್ದಾರೆ. ಮನುಷ್ಯನ ರೂಪದಲ್ಲಿದ್ದ ದೇವರು ಅವರು. ನನಗೆ ಮಾತುಗಳೇ ಹೊರಳುತ್ತಿಲ್ಲ. ದೇವರು ಅವರ ಆತ್ಮಕ್ಕೆ ಶಾಂತಿ ಕೊಡಲಿ'' - ರಜನಿಕಾಂತ್.

    ಪ್ರಕಾಶ್ ರಾಜ್

    ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಕೆ.ಬಾಲಚಂದರ್ ಅವರನ್ನ ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದ ಪ್ರಕಾಶ್ ರಾಜ್, ನಿನ್ನೆ ಅವರ ನಿಧನರಾದ ವಿಷಯ ಕೇಳಿ ಸಂತಾಪ ಸೂಚಿಸಿದ್ದಾರೆ. ''ನನ್ನ ಜೀವನಕ್ಕೆ ಹೊಸ ತಿರುವು ಕೊಟ್ಟ ಕೆ.ಬಿ ಸರ್ ಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ಅವರ ಅಗಲಿಕೆಯ ನೋವು ಸಹಿಸಲಸಾಧ್ಯ. ಅವರನ್ನ ಮಿಸ್ ಮಾಡಿಕೊಳ್ಳುತ್ತೇನೆ. ಲವ್ ಯೂ...''

    ಪ್ರಿಯಾಮಣಿ

    ಕಾಲಿವುಡ್, ಟಾಲಿವುಡ್ ಮತ್ತು ಸ್ಯಾಂಡಲ್ ವುಡ್ ನ ಹೆಸರಾಂತ ನಟಿ ಪ್ರಿಯಾಮಣಿ ಕೂಡ ಕೆ.ಬಾಲಚಂದರ್ ರವರಿಗೆ ಕಂಬನಿ ಮಿಡಿದಿದ್ದಾರೆ. ''ಭಾರತೀಯ ಚಿತ್ರರಂಗದ ಪ್ರತಿಭಾನ್ವಿತ ರತ್ನ ಇನ್ನಿಲ್ಲವಾಗಿರುವುದು ಬೇಸರದ ಸಂಗತಿ. ನನಗೆ ಅವರೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿಲ್ಲ. ಆದರೂ, ನಾನು ಅವರನ್ನು ಅನೇಕ ಬಾರಿ ಭೇಟಿ ಮಾಡಿದ್ದೀನಿ. ನಾನು ಅವರನನ್ನ ಮಿಸ್ ಮಾಡಿಕೊಳ್ಳುತ್ತೀನಿ''.

    ಅಮಲಾ ಪೌಲ್

    ''ಭಾರತೀಯ ಚಿತ್ರರಂಗದಲ್ಲಿ ನಾ ಕಂಡ ಶ್ರೇಷ್ಠ ನಿರ್ದೇಶಕ ಕೆ.ಬಾಲಚಂದರ್. ಅವರ ಅಗಲಿಕೆ ಇಡೀ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ ಆ ಕ್ಷಣ ನನಗಿನ್ನೂ ಚೆನ್ನಾಗಿ ನೆನಪಿದೆ. ಪ್ರಶಸ್ತಿ ಕೊಡುವ ಸಂದರ್ಭದಲ್ಲಿ ನನ್ನ ತಲೆಯನ್ನು ಮುಟ್ಟಿ ಅವರು ಆಶೀರ್ವದಿಸಿದ್ದರು. ಆ ನೆನಪನ್ನ ನಾನೆಂದೂ ಮರೆಯುವುದಿಲ್ಲ'' - ಅಮಲಾ ಪೌಲ್

    ಶ್ರುತಿ ಹಾಸನ್

    ''ಕೆ.ಬಿ ಸರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಮ್ಮ ಕುಟುಂಬ ಮತ್ತು ನನ್ನ ತಂದೆಯ ವೃತ್ತಿಬದುಕನ್ನೇ ಬದಲಿಸಿದ ಮಹಾನ್ ವ್ಯಕ್ತಿ ಅವರು. ನಮ್ಮ ಬದುಕಿಗೆ ಸ್ಫೂರ್ತಿ ತುಂಬಿದ ಅವರಿಗೆ ನನ್ನ ಧನ್ಯವಾದಗಳು''- ಶ್ರುತಿ ಹಾಸನ್

    ರಾಮ್ ಗೋಪಾಲ್ ವರ್ಮಾ

    ''ಭಾರತೀಯ ಚಿತ್ರರಂಗದ ದಿಕ್ಕನ್ನೇ ಬದಲಿಸಿದ ನಿರ್ದೇಶಕ ಕೆ.ಬಾಲಚಂದರ್. ಅವರ ನಿಧನಕ್ಕೆ ನನ್ನ ಭಾವಪೂರ್ಣ ಸಂತಾಪ ಸೂಚಿಸಲು ಇಚ್ಛಿಸುತ್ತೀನಿ''- ರಾಮ್ ಗೋಪಾಲ್ ವರ್ಮಾ

    ರಮೇಶ್ ಅರವಿಂದ್

    ''ಆತ್ಮೀಯ ಕೆ.ಬಿ. ಸರ್, ನೀವು, ನಿಮ್ಮ ಚಿತ್ರಗಳು, ನಿಮ್ಮ ಎನರ್ಜಿ, ನಿಮ್ಮ ಹಾಸ್ಯ, ನಿಮ್ಮ ಪ್ರತಿಭೆ ಎಲ್ಲವನ್ನೂ ಮಿಸ್ ಮಾಡಿಕೊಳ್ಳುತ್ತೀನಿ''-ರಮೇಶ್ ಅರವಿಂದ್

    ಸುಮಲತಾ ಅಂಬರೀಶ್

    ''ಭಾರತೀಯ ಚಿತ್ರರಂಗದ ಶ್ರೇಷ್ಠ ನಿರ್ದೇಶಕರಲ್ಲಿ ಕೆ.ಬಾಲಚಂದರ್ ಒಬ್ಬರು. 'ಮರೋ ಚರಿತ್ರ' ಚಿತ್ರದ ಮೂಲಕ ಇತಿಹಾಸವನ್ನು ಸೃಷ್ಟಿಸಿದ ನಿರ್ದೇಶಕ ಕೆ.ಬಾಲಚಂದರ್. ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ಸುಮಲತಾ ಅಂಬರೀಶ್

    ರಾಗಿಣಿ ದ್ವಿವೇದಿ

    ''ಬಾಲಚಂದರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅಂತಹ ಅತ್ಯದ್ಭುತ ನಿರ್ದೇಶಕರ ಅಗಲಿಕೆ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ನಿಮ್ಮನ್ನ ಮಿಸ್ ಮಾಡಿಕೊಳ್ಳುತ್ತೀವಿ'' - ರಾಗಿಣಿ ದ್ವಿವೇದಿ.

    ಮಾಧವನ್

    ''ಕೆ.ಬಾಲಚಂದರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ. ನಿಮ್ಮ ಕೈಕುಲುಕಿದ ಆ ಕ್ಷಣ, ನನ್ನ ನೋಡಿ ನೀವು ನಕ್ಕ ಗಳಿಗೆಯನ್ನು ನಾನೆಂದೂ ಮರೆಯುವುದಿಲ್ಲ''- ಮಾಧವನ್

    ರಾಧಿಕಾ ಶರತ್ ಕುಮಾರ್

    ''ಭಾರತೀಯ ಚಿತ್ರರಂಗಕ್ಕೆ ಕೆ.ಬಾಲಚಂದರ್ ಅವರ ಅಗಲಿಕೆ ತುಂಬಲಾರದ ನಷ್ಟ. ಅವರಂತಹ ಪ್ರತಿಭಾನ್ವಿತ ನಿರ್ದೇಶಕ ಮತ್ತೊಬ್ಬರಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ರಾಧಿಕಾ ಶರತ್ ಕುಮಾರ್.

    ಮಧುರ್ ಬಂಡಾರ್ಕರ್

    ಬಾಲಿವುಡ್ ನ ಖ್ಯಾತ ನಿರ್ದೇಶಕ ಮಧುರ್ ಬಂಡಾರ್ಕರ್ ಕೂಡ ಕೆ.ಬಾಲಚಂದರ್ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ''ಕೆ.ಬಾಲಚಂದರ್ ನಿಧನದ ಸುದ್ದಿ ಕೇಳಿ ಬೇಸರವಾಯ್ತು. ಅವರು ಜೀನಿಯಸ್. 'ಏಕ್ ತುಜೇ ಕೇಲಿಯೇ', 'ಜಾರಾ ಸಿ ಝಿಂದಗಿ' ಯಂತಹ ಚಿತ್ರಗಳು ಅವರ ನೆನಪನ್ನ ಅಚ್ಚ ಹಸಿರಾಗಿ ಇಡುತ್ತವೆ'' - ಮಧುರ್ ಬಂಡಾರ್ಕರ್.

    ಅಲ್ಲರಿ ನರೇಶ್

    ''ಕೆ.ಬಾಲಚಂದರ್ ಅವರ ಆತ್ಮಕ್ಕೆ ಶಾಂತಿ ಸಿಗಲಿ'' - ಅಲ್ಲರಿ ನರೇಶ್

    ವಿಕ್ರಂ ಪ್ರಭು

    ''ಕೆ.ಬಾಲಚಂದರ್ ಆತ್ಮಕ್ಕೆ ಶಾಂತಿ ಸಿಗಲಿ. ನನ್ನ ಚಿತ್ರದ ಫಂಕ್ಷನ್ ಗೆ ಆಗಮಿಸಿ, ನನ್ನ ಬಗ್ಗೆ ಕೆಲ ಮಾತುಗಳನ್ನಾಡಿದ್ದಕ್ಕೆ ನಿಮಗೆ ನಾನು ಸದಾ ಚಿರಋಣಿ'' - ವಿಕ್ರಂ ಪ್ರಭು.

    ಮೇಘನಾ ರಾಜ್

    ''ಕೆ.ಬಾಲಚಂದರ್ ಸರ್ ರವರ ಅಗಲಿಕೆ ಭಾರತೀಯ ಚಿತ್ರರಂಗದ ಕಿರೀಟದ ಅತ್ಯಮೂಲ್ಯ ರತ್ನವೊಂದು ಕಳಚಿದಂತಾಗಿದೆ. ಚಿತ್ರರಂಗದಲ್ಲಿ ಅವರಿಗಿದ್ದ ಆಸಕ್ತಿ, ಶಿಸ್ತು ನಾನು ಸಿನಿಮಾರಂಗಕ್ಕೆ ಪ್ರವೇಶಿಸಲು ಸ್ಫೂರ್ತಿ ನೀಡಿತ್ತು.'' - ಮೇಘನಾ ರಾಜ್

    English summary
    The demise of Veteran Director K.Balachander, has come as a rude shock to the entire film industry. As condolences pour in from all corners, Here is what some actors said about the one of the finest director.
    Sunday, December 28, 2014, 13:12
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X