For Quick Alerts
  ALLOW NOTIFICATIONS  
  For Daily Alerts

  ಹಿರಿಯ ಪತ್ರಕರ್ತ, ನಟ ಸುರೇಶ್ ಚಂದ್ರ ನಿಧನ: ಸಿಎಂ ಸಂತಾಪ

  |

  ಕನ್ನಡದ ಹಿರಿಯ ಪತ್ರಕರ್ತ ಹಾಗು ಸಿನಿಮಾ ನಟ ಸುರೇಶ್ ಚಂದ್ರ ಅವರು ಶುಕ್ರವಾರ (ಜೂನ್ 11) ಮಧ್ಯಾಹ್ನ ನಿಧನರಾದರು.

  ಹಿರಿಯ ನಟ,ಪತ್ರಕರ್ತ ಸುರೇಶ್ ಚಂದ್ರ ಇನ್ನಿಲ್ಲ, ಸಿಎಂ ಸಂತಾಪ | Filmibeat Kannada

  ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಸುರೇಶ್ ಚಂದ್ರರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿತ್ತು. ಶುಕ್ರವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

  69 ವರ್ಷದ ಸುರೇಶ್ ಚಂದ್ರ ಕನ್ನಡದ ಹಲವು ಚಿತ್ರಗಳಲ್ಲಿ ನಟಿಸಿದ್ದರು. ಗಣೇಶ್ ನಟನೆಯ 'ಚೆಲುವಿನ ಚಿತ್ತಾರ' ಸಿನಿಮಾ ಮೂಲಕ ಹೆಚ್ಚು ಖ್ಯಾತಿ ಗಳಿಸಿಕೊಂಡರು.

  80ರ ದಶಕದಲ್ಲಿ ಸಿನಿಮಾ ಪತ್ರಿಕೋದ್ಯಮದಲ್ಲಿ ಸುರೇಶ್ ಚಂದ್ರ ಹೆಸರುವಾಸಿಯಾಗಿದ್ದರು. ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್, ದೇವರಾಜ್ ಸೇರಿದಂತೆ ಆಗಿನ ಕಲಾವಿದರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದರು. ಸಂಜೆ ವಾಣಿ ಪತ್ರಿಕೆಯಲ್ಲಿ ವರ್ಷಗಳ ಕಾಲ ಸುರೇಶ್ ಚಂದ್ರ ಕಾರ್ಯನಿರ್ವಹಿಸಿ ನಿವೃತ್ತಿಯಾಗಿದ್ದರು.

  ಸುರೇಶ್ ಚಂದ್ರ ನಿಧನಕ್ಕೆ ಮುಖ್ಯಮಂತ್ರಿ ಸಂತಾಪ

  ಕಲಾವಿದ ಸುರೇಶ್ ಚಂದ್ರ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಭಗವಂತನು ಅವರ ಆತ್ಮಕ್ಕೆ ಶಾಂತಿ ನೀಡಲಿ ಹಾಗೂ ಅವರ ಕುಟುಂಬದವರಿಗೆ ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುವುದಾಗಿ ಮುಖ್ಯಮಂತ್ರಿಗಳು ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

  English summary
  Kannada Veteran journalist and film actor Suresh Chandra (Sanjeevani) has expired today.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X