National Award 2021: ಕನ್ನಡದ ಹಿರಿಯ ಪತ್ರಕರ್ತ ಸುಬ್ರಮಣ್ಯ ಬಾಡೂರುಗೆ 69ನೇ ರಾಷ್ಟ್ರ ಪ್ರಶಸ್ತಿ
ಸಿನಿಮಾಗಳಿಗೆ ಪ್ರಶಸ್ತಿ ಸಿಕ್ಕಾ ಹೆಮ್ಮೆ ಪಡುವುದು ಒಂದು ಕಡೆ. ಅದೇ ಇನ್ನೊಂದು ಕಡೆ ಹಲವು ವರ್ಷಗಳ ಕಾಲ ಸಿನಿಮಾಗಳನ್ನು ವಿಮರ್ಶೆ ಮಾಡುತ್ತಾ, ಸಿನಿಮಾರಂಗದ ಆಗೋ ಹೋಗುಗಳನ್ನು ವರದಿ ಮಾಡುವ ಪತ್ರಕರ್ತರಿಗೆ ಪ್ರಶಸ್ತಿ ಖುಷಿ ಪಡುವುದು ಮತ್ತೊಂದು ಕಡೆ.
ಇಂದು (ಆಗಸ್ಟ್ 24) 2021ನೇ ಸಾಲಿನ 60ನೇ ರಾಷ್ಟ್ರ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. ಇದರಲ್ಲಿ ಕನ್ನಡದ ಕೆಲವು ಸಿನಿಮಾಗಳಿಗೆ ಪ್ರಶಸ್ತಿ ಬಂದಿದೆ. ಇದರೊಂದಿಗೆ ಕನ್ನಡದ ಹಿರಿಯ ಪತ್ರಕರ್ತರೊಬ್ಬರು ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಹೌದು.. ಹಲವು ವರ್ಷಗಳಿಂದ ಕನ್ನಡದ ಸಿನಿಮಾ ಪತ್ರಕರ್ತರಾಗಿ ಗುರುತಿಸಿಕೊಂಡಿರುವ ಸುಬ್ರಹ್ಮಣ್ಯ ಬಾಡೂರು ಅವರಿಗೆ ಪ್ರತಿಷ್ಠಿತ 69ನೇ ರಾಷ್ಟ್ರ ಪ್ರಶಸ್ತಿ ಲಭಿಸಿದೆ. 2021ನೇ ಸಾಲಿನಲ್ಲಿ ಪತ್ರಕರ್ತರಿಗೆ ನೀಡುವ ಪ್ರಶಸ್ತಿ ಈ ಬಾರಿ ಇವರಿಗೆ ಲಭಿಸಿದೆ.
ಸಿನಿಮಾ ಪತ್ರಕರ್ತರಿಗೆ ನೀಡುವ ಪ್ರತಿಷ್ಠಿತ ಅತ್ಯುತ್ತಮ ಸಿನಿಮಾ ವಿಮರ್ಶಕ ಅಥವಾ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ಪ್ರಶಸ್ತಿಯನ್ನು ಕನ್ನಡದ ಚಲನಚಿತ್ರ ಪತ್ರಕರ್ತ ಸುಬ್ರಹ್ಮಣ್ಯ ಬಾಡೂರು ಮುಡಿಗೇರಿಸಿಕೊಂಡಿದ್ದಾರೆ. ಚಿತ್ರರಂಗದಲ್ಲಿ 'ಬಾನಾಸು' ಅಂತಲೇ ಜನಪ್ರಿಯರಾಗಿರುವ ಇವರು ಸಿನಿಮಾ ಪ್ರತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ.
ಲೆಕ್ಕವಿಲ್ಲದಷ್ಟು ಸಿನಿಮಾಗಳ ವಿಮರ್ಶೆ ಮಾಡಿದ್ದಾರೆ. ಸಿನಿಮಾಗಳ ಸುದ್ದಿಗಳನ್ನು ವರದಿ ಮಾಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ 69ನೇ ರಾಷ್ಟ್ರ ಪ್ರಶಸ್ತಿಯ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ವಿಭಾಗದಲ್ಲಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಪತ್ರಿಕೋದ್ಯಮದಲ್ಲೇ ಹಲವು ವರ್ಷಗಳಿಂದ ದುಡಿದ ಪತ್ರಕರ್ತರಿಗೆ ಇದೇ ಮೊದಲ ಬಾರಿಗೆ ಸ್ಪೆಷಲ್ ಮೆನ್ಷನ್ ಕ್ರಿಟಿಕ್ ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಈ ಸಂಬಂಧ ಹಿರಿಯ ಪತ್ರಕರ್ತರಿಗೆ ಚಿತ್ರರಂಗದ ಗಣ್ಯರು, ಆತ್ಮೀಯರು ಹಾಗೂ ಸಹೋದ್ಯೋಗಿಗಳು ಶುಭ ಕೋರುತ್ತಿದ್ದಾರೆ.


Click it and Unblock the Notifications











