For Quick Alerts
  ALLOW NOTIFICATIONS  
  For Daily Alerts

  100 ವರ್ಷ ಸಿನಿಜಗತ್ತು ನೋಡಿದ ಹಿರಿಯ ನಿರ್ಮಾಪಕ ವಿಧಿವಶ

  By Bharath Kumar
  |

  ಭಾರತೀಯ ಸಿನಿಮಾರಂಗವನ್ನ ನೂರು ವರ್ಷ ನೋಡಿದ ಹಿರಿಯ ನಿರ್ಮಾಪಕ ಕೆ ರಾಘವ ಹೈದ್ರಾಬಾದ್ ನಲ್ಲಿ ಕೊನೆಯುಸಿರೆಳೆದಿದ್ದಾರೆ.

  ತೆಲುಗು ಚಿತ್ರರಂಗದ ಹಿರಿಯ ನಿರ್ಮಾಪಕ ಹಾಗೂ ಪ್ರತಾಪ್ ಆರ್ಟ್ಸ್ ಪ್ರೊಡಕ್ಷನ್ಸ್ ಮಾಲೀಕರಾಗಿದ್ದ ರಾಘವ ಅವರಿಗೆ 105 ವರ್ಷ ವಯಸ್ಸಾಗಿತ್ತು. 70-80ನೇ ದಶಕದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಖ್ಯಾತಿ ಇವರದ್ದು.

  1913ರಲ್ಲಿ ಜನಿಸಿದ್ದ ರಾಘವ ಅವರಿಗೆ 8 ವರ್ಷಗಳಿದ್ದಾಗಲೇ ಮನೆಯನ್ನು ಹೊರಬಂದಿದ್ದರು. ಸೈಲೆಂಟ್ ಪಿಕ್ಷರ್ಸ್ ಅವರ ಕಂಪನಿಯಲ್ಲಿ ಆರಂಭದಲ್ಲಿ ಟ್ರಾಲಿ ಎಳೆಯುವ ಕೆಲಸಕ್ಕೆ ಸೇರಿಕೊಂಡಿದ್ದರು. ನಂತರ, ಮಿರ್ಜಾಪುರದ ಮಹಾರಾಜರ ಬಳಿ ಕೆಲಸಕ್ಕೆ ಹೋದರು. ಹೀಗೆ ಕಷ್ಟಪಟ್ಟು ಜೀವನ ಸಾಗಿಸಿದ ಕೆ ರಾಘವ ಅವರು ಸಿನಿಮಾ ನಿರ್ಮಾಣ ಮಾಡೋಕೆ ಮುಂದಾದರು.

  ಇಂಟ್ಲೋ ರಾಮಯ್ಯ ವೀದಿಲೋ ಕೃಷ್ಣಯ್ಯ, ತರಂಗಣಿ, ಯುಗ ಕರ್ತಲು, ನಾರದ ವಿನೋದಮ್ ಸುಖ ದುಃಖಲು, ತಾತ ಮನವಡು, ಜಗತ್ ಕಂತ್ರೀಲು, ಚಡುವು ಸಂಸ್ಕಾರಮ್, ಸೂರ್ಯ ಚಂದ್ರುಲು, ಸೇರಿದಂತೆ ಸುಮಾರು 30 ಚಿತ್ರಗಳನ್ನ ನಿರ್ಮಾಣ ಮಾಡಿದ್ದರು. ಇದರಲ್ಲಿ 25 ಚಿತ್ರಗಳು ಬ್ಲ್ಯಾಕ್ ಬಸ್ಟರ್ ಸಿನಿಮಾ ಎನ್ನುವುದು ಅವರ ಸಾಧನೆ. 28 ತೆಲುಗು ಚಿತ್ರ, ಒಂದು ತಮಿಳು ಹಾಗೂ ಒಂದು ಹಿಂದಿ ಚಿತ್ರ ಸೇರಿ ಒಟ್ಟು 30 ಚಿತ್ರಗಳ ನಿರ್ಮಾಣ ಮಾಡಿದ್ದಾರೆ.

  100 ವರ್ಷಗಳಷ್ಟು ಕಾಲ ಭಾರತ ಸಿನಿಮಾವನ್ನು ಕಂಡಿರುವ ಅವರ ಸಿನಿಮಾ ಸೇವೆಗೆ ಪ್ರತಿಷ್ಠಿತ ರಘುಪತಿ ವೆಂಕಯ್ಯ ಪ್ರಶಸ್ತಿ ಬಂದಿದೆ.

  English summary
  K Raghava, one of the senior producers of Tollywood and the owner of Pratap Arts Productions, passed away at the age of 105 in Hyderabad.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X