ಅಣ್ಣಾವ್ರ 'ಕೆರಳಿದ ಸಿಂಹ', 'ಕಾಮನಬಿಲ್ಲು' ಚಿತ್ರಗಳ ನಿರ್ದೇಶಕ ಚಿ. ದತ್ತರಾಜ್ ಇನ್ನಿಲ್ಲ
ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ಚಿ.ದತ್ತರಾಜ್ ನಿಧನರಾಗಿದ್ದಾರೆ. ಅವರಿಗೆ 87 ವರ್ಷ ವಯಸ್ಸಾಗಿತ್ತು. ಕನ್ನಡದ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಅವರು ಕಟ್ಟಿಕೊಟ್ಟಿದ್ದರು. ಅಣ್ಣಾವ್ರ ಬಳಗದಲ್ಲಿ ಗುರ್ತಿಸಿಕೊಂಡಿದ್ದ ಅವರು ಶಿವಣ್ಣ ನಟನೆಯ ಚಿತ್ರಗಳನ್ನು ಕೂಡ ನಿರ್ದೇಶಿಸಿದ್ದರು.
ಡಾ. ರಾಜ್‌ಕುಮಾರ್ ನಟನೆಯ 'ಕೆರಳಿದ ಸಿಂಹ', 'ಕಾಮನಬಿಲ್ಲು', 'ಅದೇ ಕಣ್ಣು', 'ಶೃತಿ ಸೇರಿದಾಗ' ಚಿತ್ರಗಳನ್ನು ಚಿ. ದತ್ತರಾಜ್ ಕಟ್ಟಿಕೊಟ್ಟಿದ್ದರು. ಬಳಿಕ ಶಿವರಾಜಕುಮಾರ್ ಅಭಿನಯದ 'ಮೃತ್ಯುಂಜಯ', 'ಆನಂದ ಜ್ಯೋತಿ' ಚಿತ್ರಗಳನ್ನು ನಿರ್ದೇಶಿಸಿ ಗೆದ್ದಿದ್ದರು. ಇನ್ನು ಮಂಜುಳ ನಟನೆಯ 'ರುದ್ರಿ' ಚಿತ್ರಕ್ಕೂ ಸಾರಥ್ಯ ವಹಿಸಿದ್ದರು.

ಅಂದಹಾಗೆ ಚಿ. ದತ್ತರಾಜ್ ಖ್ಯಾತ ಸಿನಿಮಾ ಬರಹಗಾರ, ಚಿತ್ರ ಸಾಹಿತಿ ಚಿ. ಉದಯ್ ಶಂಕರ್ ಅವರ ಸಹೋದರ. ಹರಿಶ್ಚಂದ್ರ ಘಾಟ್‌ನಲ್ಲಿ ಚಿ. ದತ್ತರಾಜ್ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ನಡೀತಿದೆ. ಅವರ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.
More from Filmibeat
English summary
Chi. Udayashankar's brother Director Chi. Datta Raj no more


Click it and Unblock the Notifications











