twitter
    For Quick Alerts
    ALLOW NOTIFICATIONS  
    For Daily Alerts

    ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜಯರಾಂ ನಿಧನ

    |

    ರಾಷ್ಟ್ರ ಪ್ರಶಸ್ತಿ ವಿಜೇತ ಪ್ರಸಿದ್ಧ ಹಿನ್ನೆಲೆ ಗಾಯಕಿ ವಾಣಿ ಜಯರಾಂ ಚನೈನಲ್ಲಿರುವ ಅವರ ನುಂಗಂಬಾಕ್ಕಂನ ಹ್ಯಾಡೋಸ್ ರಸ್ತೆಯಲ್ಲಿರುವ ಅವರ ಮನೆಯಲ್ಲಿ ನಿಧರಾಗಿದ್ದಾರೆ. ಅವರಿಗೆ 78 ವರ್ಷ ವಯಸ್ಸಾಗಿತ್ತು. ಇವರು ಕನ್ನಡ, ಹಿಂದಿ ತೆಲುಗು, ತಮಿಳು, ಉರ್ದು, ತುಳು, ಮಲಯಾಳಂ, ಮರಾಠಿ, ಓಡಿಯಾ, ಗುಜರಾತಿ ಮತ್ತು ಬೆಂಗಾಲಿ ಭಾಷೆ ಸೇರಿದಂತೆ ಹಲವು ಭಾಷೆಗಳಲ್ಲಿ 10,000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದರು.

    ಇತ್ತೀಚೆಗೆ ವಾಣಿ ಜಯರಾಂ ಅವರಿಗೆ ಭಾರತದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಪದ್ಮಭೂಷಣ' ಘೋಷಣೆಯಾಗಿತ್ತು. ಇವರು ಮೂರು ಬಾರಿ 'ಅತ್ಯುತ್ತಮ ಮಹಿಳಾ ಹಿನ್ನೆಲೆ ಗಾಯಕಿ' ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಜೊತೆಗೆ ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ, ಕೇರಳ, ಗುಜರಾತ್ ಮತ್ತು ರಾಜ್ಯಪ್ರಶಸ್ತಿಯನ್ನು ಪಡೆದುಕೊಂಡಿದ್ದರು. ಇತ್ತೀಚೆಗಷ್ಟೇ ವೃತ್ತಿಪರ ಗಾಯಕಿಯಾಗಿ 50 ವರ್ಷಗಳನ್ನು ಪೂರೈಸಿದ್ದ ವಾಣಿ ಜಯರಾಂ, 'ಪದ್ಮಭೂಷಣ' ಪ್ರಶಸ್ತಿ ಪಡೆಯುವ ಮುನ್ನವೇ ಇಹಲೋಕ ತ್ಯಜಿಸಿದ್ದಾರೆ.

    Veteran singer Vani Jayaram passes away

    ಬಾಲ್ಯಜೀವನ

    ವಾಣಿ ಜಯರಾಂ 1945ರ ನವೆಂಬರ್ 30ರಂದು ತಮಿಳುನಾಡಿನ ವೆಲ್ಲೂರಿನಲ್ಲಿ ಜನಿಸಿದರು. ಇವರ ತಾಯಿ ಪ್ರಸಿದ್ಧ ಸಂಗೀತ ವಿದ್ವಾಂಸರಾದ ರಂಗ ರಾಮಾನುಜ ಅಯ್ಯಂಗಾರ್ ಅವರ ಶಿಷ್ಯೆ. ಹಾಗಾಗಿ ಚಿಕ್ಕಂದಿನಿಂದಲೇ ಸಂಗೀತಾಸಕ್ತಿ ಇತ್ತು. ತಮ್ಮ ಐದನೇ ವಯಸ್ಸಿನಲ್ಲೇ ಇವರು ಕಡಲೂರು ಶ್ರೀನಿವಾಸ ಅಯ್ಯಂಗಾರ್ ಅವರ ಬಳಿ ಸಂಗೀತ ಕಲಿಯಲು ಆರಂಭಿಸಿದರು. ೮ನೇ ವಯಸ್ಸಿನಲ್ಲೇ ಇವರ ಧ್ವನಿ ಆಕಾಶವಾಣಿಯಲ್ಲಿ ಪ್ರಸಾರವಾಗಿತ್ತು. ತಿರುವನಂತಪುರದಲ್ಲಿ 3 ಗಂಟೆಗಳ ಕಾಲ ಸಂಗೀತ ಕಚೇರಿ ನಡಿಸಿದಾಗ ಅವರಿಗೆ ಕೇವಲ ಹತ್ತು ವರ್ಷವಾಗಿತ್ತು. ವಾಣಿಯವರು ಬಹುಮುಖ ಪ್ರತಿಭೆಯಾಗಿದ್ದು, ಚಿತ್ರರಚನೆ ಜೊತೆಗೆ ಓದಿನಲ್ಲಿಯೂ ಮುಂದಿದ್ದರು. ಇವರು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.

    Veteran singer Vani Jayaram passes away

    ಚಿತ್ರರಂಗ ಪ್ರವೇಶ

    ಇಂಡೋ-ಬೆಲ್ಜಿಯಂ ಛೇಂಬರ್ ಆಫ್ ಕಾಮರ್ಸ್ ನಲ್ಲಿ ಉನ್ನತ ಹುದ್ದೆಯಲ್ಲಿದ್ದ ವಾಣಿ ಅವರು, ಜಯರಾಂ ಅವರೊಂದಿಗೆ ವಿವಾಹವಾದರು. ಮದುವೆ ನಂತರ ಈ ದಂಪತಿ ಮುಂಬೈನಲ್ಲೇ ನೆಲಸಿದರು. ಬಳಿಕ ಪತ್ನಿಯ ಪ್ರತಿಭೆಗೆ ಮನಸೋತ ಜಯರಾಂ ಅವರು, ವಾಣಿ ಅವರಿಗೆ ಪಟಿಯಾಲಾ ಘರಾಣಾದ ಅಬ್ದುಲ್ ರೆಹಮಾನ್ ಬಳಿ ಹಿಂದೂಸ್ತಾನಿ ಸಂಗೀತ ಕಲಿಸಿದರು. ಇಲ್ಲಿ ಇವರ ಕಂಠಸಿರಿಗೆ ಮಾರುಹೋದ ಮರಾಠಿ ಸಿನಿಮಾ ನಿರ್ದೇಶಕ ವಸಂತ ದೇಸಾಯಿ, ತಮ್ಮ ಚಿತ್ರ 'ಅಮ್ಮ ತಾಯಿ ಗೋಡೆ'ಯಲ್ಲಿ ಹಾಡುವ ಅವಕಾಶ ಕೊಟ್ಟರು. ಈ ಚಿತ್ರದ ಗಾಯನ ಮೆಚ್ಚಿಕೊಂಡ ಹಿಂದಿ ಚಿತ್ರ ನಿರ್ದೇಶಕ ಹೃಷಿಕೇಶ್ ಮುಖರ್ಜಿ ತಮ್ಮ 'ಗುಡ್ಡಿ' ಸಿನಿಮಾದಲ್ಲಿ ಹಾಡಿಸಿದರು. ಈ ಸಿನಿಮಾದ ' ಬೋಲ್ ರೇ ಪಪ್ಪೀ ಹರ' ಹಾಡು ದೇಶದಾದ್ಯಂತ ಸಂಚಲನ ಉಂಟು ಮಾಡಿ, ವಾಣಿ ಜಯರಾಂ ಅವರಿಗೆ ಒಳ್ಳೆಯ ಜನಪ್ರಿಯತೆ ತಂದುಕೊಟ್ಟಿತು.

    ಕನ್ನಡದಲ್ಲಿ 850 ಗೀತೆಗಳನ್ನು ಹಾಡಿದ್ದರು

    1973ರಲ್ಲಿ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ವಾಣಿ ಜಯರಾಂ 90ರ ದಶಕದ ಆದಿಯವರೆಗೂ ಹಾಡುಗಳನ್ನು ಹಾಡಿದ್ದಾರೆ. ಅವರು ಕನ್ನಡದಲ್ಲಿ ಮೊದಲು ಹಾಡಿದ ಚಿತ್ರ 'ಛಲಗಾರ' ತೆರೆಕಾಣಲಿಲ್ಲ. ನಂತರ ಕೌಬಾಯ್ ಕುಳ್ಳ, ಕೆಸರಿನ ಕಮಲ, ಉಪಾಸನೆ, ಶುಭಮಂಗಳ, ದೀಪ, ಅಪರಿಚಿತ, ಕಸ್ತೂರಿ ವಿಜಯ, ಚಿರಂಜೀವಿ, ಬೆಸುಗೆ, ಬಿಳಿ ಹೆಂಡ್ತಿ ಮೊದಲಾದ ಸಿನಿಮಾಗಳಲ್ಲಿ ಹಾಡಿದ್ದಾರೆ. ವಾಣಿ ಜಯರಾಂ ಕನ್ನಡದಲ್ಲಿ 850 ಗೀತೆಗಳನ್ನು ಹಾಡಿದ್ದಾರೆ.

    English summary
    Veteran singer Vani Jayaram passes away, Know More.
    Saturday, February 4, 2023, 15:43
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X