'ಮಾರ್ಟಿನ್‌'ಗೆ ಎರಡೂವರೆ ಕೋಟಿಯ ಮಕ್ಮಲ್ ಟೋಪಿ ಹಾಕಿದವರು ಯಾರು ..?

By

ಪ್ಯಾನ್ ಇಂಡಿಯಾ ಸ್ಟಾರ್‌ಗಳ ಸಾಲಿನಲ್ಲಿ ಧ್ರುವ ಸರ್ಜಾ ಅವರನ್ನು ಕರೆದೊಯ್ದು ನಿಲ್ಲಿಸುವಂತ ಸಿನಿಮಾ ''ಮಾರ್ಟಿನ್'' ಎಂಬ ಮಾತು ಸ್ಯಾಂಡಲ್‌ವುಡ್‌ನಲ್ಲಿ ಕೇಳಿ ಬರುತ್ತಲೇ ಇದೆ. ಇನ್ನೇನು ವಿಶ್ವವ್ಯಾಪಿ ಈ ಅಕ್ಟೋಬರ್ ಹನ್ನೊಂದರಂದು 05 ಭಾಷೆಯಲ್ಲಿ ತೆರೆಗೆ ಬರಲಿರುವ ಈ ಚಿತ್ರಕ್ಕೆ ಧ್ರುವ ಅವರ ಸ್ವಂತ ಸೋದರ ಮಾವ ಅರ್ಜುನ್‌ ಸರ್ಜಾ ಕತೆ ಕೊಟ್ಟು, ʻಮಾರ್ಟಿನ್‌ʼಗೆ ಬೆಂಬಲವಾಗಿ ನಿಂತಿದ್ದಾರೆ.

ಧ್ರುವ ಸರ್ಜಾ ಕೂಡ ಈ ಚಿತ್ರಕ್ಕೆ ಹತ್ತಾರು ಕಸರತ್ತು ಮಾಡಿದ್ದಾರೆ. ಇಷ್ಟ ಪಟ್ಟು ಕಷ್ಟಪಟ್ಟಿದ್ದಾರೆ. ಇನ್ನೂ ನಿರ್ದೇಶಕ ಎ.ಪಿ.ಅರ್ಜುನ್ ಈ ಮಾರ್ಟಿನ್‌ಗೆ ತನು-ಮನ ಅರ್ಪಿಸಿದ್ದಾರೆ. ಹತ್ತು..ಇಪ್ಪತ್ತು.. ದಿನವಲ್ಲ ಹತ್ ಹತ್ರ 250 ದಿನ ಹಗಲಿರುಳೆನ್ನದೇ ಈ ಚಿತ್ರಕ್ಕೆ ಬೆವರು ಸುರಿಸಿದ್ದಾರೆ.

VFX Team Defrauds Martin Kannada Film Producer of 2 5 Crore Accused Arrested

ಇನ್ನೂ.. ಕೃಷ್ಣನ್ ಲವ್ ಸ್ಟೋರಿ.. ಬಚ್ಚನ್.. ಅಂತಹ ಚಿತ್ರಗಳನ್ನೂ ನಿರ್ಮಾಣ ಮಾಡಿ ಗೆದ್ದ ನಿರ್ಮಾಪಕ ಉದಯ್‌ ಮೆಹ್ತಾ ಈ ಬಾರಿ ತಮ್ಮ ಲಿಮಿಟ್ಟು, ಶಕ್ತಿಗಳನ್ನೆಲ್ಲಾ ಮೀರಿ ದೊಡ್ಡ ಮಟ್ಟದಲ್ಲಿ ಹಣ ಹೂಡಿ ಈ ಸಿನಿಮಾ ರೂಪಿಸಿದ್ದಾರೆ. ಹೀಗೆ ಹಲವರ ಶ್ರಮ ..ಕನಸು.. ಒಂದೊಳ್ಳೇ ಸಿನಿಮಾ ಮಾಡಬೇಕೆಂಬ ಹಠದಿಂದ ಸೃಷ್ಟಿಯಾದ ಈ ಮಾರ್ಟಿನ್‌ಗೆ ಮಕ್ಮಲ್ ಟೋಪಿ ಹಾಕುವ ಕೆಲಸ ನಡೆದ ವಿಚಾರ ಈಗ ಬೆಳಕಿಗೆ ಬಂದಿದೆ.

ಹೌದು, ಅಸಲಿಗೆ ಈ ಅಗಸ್ಟ್ ಗೆ ಮಾರ್ಟಿನ್ ಸಿನಿಮಾ ಶುರುವಾಗಿ ಮೂರು ವರ್ಷವಾಗಲಿದೆ. ಆದರೆ.. ಮೂರು ವರ್ಷವಾದರೂ ಸಿನಿಮಾ ನಾನಾ ಕಾರಣಕ್ಕೆ ತಡವಾಗ್ತಾನೇ ಬಂದಿದೆ. ಆ ಕಾರಣಗಳಲ್ಲಿ ಚಿತ್ರದ ವಿಎಫ್‌ಎಕ್ಸ್‌ ಕೆಲಸ ಕೂಡ ಒಂದು. ಇದೇ ಕೆಲಸ ಸಲೀಸಾಗಿ ಸುಸೂತ್ರವಾಗಿ ನಡೆಯಲಿ, ಬೇಗ ಈ ಕೆಲಸ ಮುಗಿಯಲಿ ಎಂದು ನಿರ್ಮಾಪಕ ಉದಯ್ ಮೆಹ್ತಾ ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರದ ವಿಎಫ್ಎಕ್ಸ್​ ನ ಜವಾಬ್ಧಾರಿಗಳನ್ನೆಲ್ಲ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ಅನ್ನೋ ಸಂಸ್ಥೆಗೆ ವಹಿಸಿದ್ದರು.

VFX Team Defrauds Martin Kannada Film Producer of 2 5 Crore Accused Arrested

ಇನ್ನೂ ಹಿಂದೆ ಖುದ್ದು ಚಿತ್ರತಂಡವೇ ಹೇಳಿದಂತೆ ಮಾರ್ಟಿನ್‌ನಲ್ಲಿ ತಂತ್ರಜ್ಞಾನದ ಬಳಕೆ ತುಸು ಹೆಚ್ಚೇ ಇದೆ. ಹೀಗಾಗಿಯೇ ಡಿಜಿಟಲ್ ಟೆರೇನ್ ಪ್ರೊಡಕ್ಷನ್ ಪ್ರೈ. ಲಿಮಿಟೆಡ್ ನ ಸತ್ಯ ರೆಡ್ಡಿ ಮತ್ತು ಸುನಿಲ್ ಕೇಳಿದಾಗೆಲ್ಲ ನಿರ್ಮಾಪಕ ಉದಯ್ ಮೆಹ್ತಾ ದುಡ್ಡು ಕೊಡ್ತಾನೇ ಬಂದರು. ಎರಡೂವರೆ ಕೋಟಿ ಹಣವನ್ನು ಈ ಸತ್ಯ ರೆಡ್ಡಿ ಮತ್ತು ಸುನಿಲ್ ಎಂಬ ಕಿರಾತಕರ ಮೇಲೆ ಸುರಿದರು. ಆದರೆ.. ಹಣ ನೀಡಿದ್ದಷ್ಟೇ ಬಂತು ಆದರೆ ಕೆಲಸ ಮಾತ್ರ ಆಗಲಿಲ್ಲ.

ಹೀಗಾಗಿಯೇ ನಡೆದ ಹಣದ ವ್ಯವಹಾರದ ದಾಖಲೆ ಸಮೇತ ಬೆಂಗಳೂರಿನ ಬಸವೇಶ್ವರ ನಗರ ಠಾಣೆ ಮೆಟ್ಟಿಲೇರಿದ ನಿರ್ಮಾಪಕ ಉದಯ್ ಮೆಹ್ತಾ, ವಂಚಕರಾದ ಸತ್ಯ ರೆಡ್ಡಿ ಮತ್ತು ಸುನಿಲ್ ವಿರುದ್ದ ದೂರು ಸಲ್ಲಿಸಿದ್ದಾರೆ. ಉದಯ್ ಮೆಹ್ತಾ ನೀಡಿದ್ದ ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಸದ್ಯಕ್ಕೆ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ತಲೆಮರೆಸಿಕೊಂಡಿದ್ದ ಸತ್ಯ ರೆಡ್ಡಿಯನ್ನು ಬಂಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಿದ್ದಾರೆ.

vfx-team-defrauds-martin-kannada-film-producer-of-2-5-crore-accused-arrested

ಮಾರ್ಟಿನ್ ಬಿಡುಗಡೆ ತಡವಾಗಲು ಇವರೇ ಕಾರಣ ಎಂದಿರುವ ಉದಯ್ ಮೆಹ್ತಾ, 2.5 ಕೋಟಿ ಲಾಸ್ ಆಗಿದ್ದಷ್ಟೇ ಅಲ್ಲದೇ ಸಿನಿಮಾ 6 ತಿಂಗಳಿಗೂ ಹೆಚ್ಚು ಕಾಲ ತಡವಾಗಿದೆ ಎಂದಿದ್ದಾರೆ. 2.5 ಕೋಟಿ ವಂಚಿಸಿ ಸತ್ಯ ರೆಡ್ಡಿ ಕಳೆದ ಡಿಸೆಂಬರ್‌ನಲ್ಲಿ ಪೇರಿ ಕಿತ್ತ ಮೇಲೆ, ಬೇರೊಂದು ಕಂಪನಿಯಿಂದ ಚಿತ್ರದ ಗ್ರಾಫಿಕ್ಸ್‌ ಕೆಲಸಗಳನ್ನು ಮಾಡಿಸಿದ್ದಾರೆ. ಹಾಗೂ-ಹೀಗೂ ಮಾಡಿ ತಮ್ಮ ಕನಸಿನ ಚಿತ್ರವನ್ನು ಬಿಡುಗಡೆಯ ಬಾಗಿಲಿಗೆ ಕರೆತಂದು ನಿಲ್ಲಿಸಿದ್ದಾರೆ. ಮೊದಲೇ ನಿರ್ಧಾರವಾದಂತೆ ಅಕ್ಟೋಬರ್ ಹನ್ನೊಂದಕ್ಕೆ ಮಾರ್ಟಿನ್ ಬೆಳ್ಳಿತೆರೆಯ ಮೇಲೆ ಧಗಧಗಿಸಲಿದೆ.

More from Filmibeat

Read more about: martin dhruva sarja fraud
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X