ಮತ್ತೆ ಡ್ರೋನ್ ಕಥೆ.. 1911ರ ಕಥೆ ಹೈಜಾಕ್ ಮಾಡಲು ಹೋಗಿ ಸಿಕ್ಕಿಬಿದ್ದ ಜಗ್ಗಣ್ಣ!

ನವರಸ ನಾಯಕ ಜಗ್ಗೇಶ್ ನಟನೆಯ 'ರಂಗನಾಯಕ' ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಗುರುಪ್ರಸಾದ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು ಈಗಾಗಲೇ ಸಾಂಗ್ಸ್‌, ಟ್ರೈಲರ್‌ನಿಂದ ಸಿನಿಮಾ ಕುತೂಹಲ ಮೂಡಿಸಿದೆ. 'ಮಠ', 'ಎದ್ದೇಳು ಮಂಜುನಾಥ' ಬಳಿಕ ಜಗ್ಗಣ್ಣ- ಗುರುಪ್ರಸಾದ್ ಜೋಡಿಯ 3ನೇ ಸಿನಿಮಾ ನಿರೀಕ್ಷೆ ಹೆಚ್ಚಿಸಿದೆ.

'ರಂಗನಾಯಕ' ಸಿನಿಮಾ ಪ್ರಚಾರವನ್ನು ಬಹಳ ವಿಭಿನ್ನವಾಗಿ ಚಿತ್ರತಂಡ ಮಾಡುತ್ತಿದೆ. ಜಗ್ಗೇಶ್, ಗುರುಪ್ರಸಾದ್ ಸಂದರ್ಶನಗಳಲ್ಲಿ ಭಾಗಿ ಆಗಿ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ವಿಖ್ಯಾತ್ ನಿರ್ಮಾಣದ 'ರಂಗನಾಯಕ' ಚಿತ್ರಕ್ಕೆ ಅನೂಪ್ ಸಿಳೀನ್ ಸಂಗೀತವಿದೆ.

Vicky Pedia vikas - Jaggesh s Ranganayaka promotional video goes viral

ರಚಿತಾ ಮಹಾಲಕ್ಷ್ಮಿ 'ರಂಗನಾಯಕ' ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು ಗುರುಪ್ರಸಾದ್ ಬರವಣಿಗೆ ಅದರಲ್ಲಿ ಜಗ್ಗೇಶ್ ನಟನೆ ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. ಸಾಮ್ರಾಟ್ ಅಶೋಕ್ ಗೌತಮ್ ಚಿತ್ರವನ್ನು ಸೊಗಸಾಗಿ ಸೆರೆ ಹಿಡಿದಿದ್ದಾರೆ. ಇದೀಗ ಸಿನಿಮಾ ಪ್ರಚಾರಕ್ಕಾಗಿ ವಿಕಾಸ್ ವಿಕ್ಕಿಪಿಡಿಯ ಜೊತೆಯಾಗಿದ್ದಾರೆ.

ನಟ ಜಗ್ಗೇಶ್ ಜೊತೆ ವಿಕಾಸ್ ಮಾಡಿರುವ ಸ್ಪೆಷಲ್ ಪ್ರಮೋಷನಲ್ ವಿಡಿಯೋ ವೈರಲ್ ಆಗುತ್ತಿದೆ. ಮಂಜ ಮತ್ತು ಮಾಣಿ ಎನ್ನುವ ಸಣ್ಣ ಸ್ಕಿಟ್ ಮಾಡಿ ಜಗ್ಗೇಶ್ 'ರಂಗನಾಯಕ' ಸಿನಿಮಾ ಬಗ್ಗೆ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

15 ವರ್ಷಗಳ ಹಿಂದೆ ಗುರುಪ್ರಸಾದ್ ನಿರ್ದೇಶನದಲ್ಲಿ ಬಂದಿದ್ದ 'ಎದ್ದೇಳು ಮಂಜುನಾಥ' ಸಿನಿಮಾ ಗೆದ್ದಿತ್ತು. ಚಿತ್ರದಲ್ಲಿ ಮಂಜ ಆಗಿ ಜಗ್ಗೇಶ್ ಹಾಗೂ ವಿಶೇಷ ಚೇತನ ನಾಣಿ ಪಾತ್ರದಲ್ಲಿ ತಬಲ ನಾಣಿ ಕಾಂಬಿನೇಷನ್‌ ಸಖತ್ ಕ್ಲಿಕ್ ಆಗಿತ್ತು. ಇಬ್ಬರ ನಡುವಿನ ಸಂಭಾಷಣೆಯ ಸನ್ನಿವೇಶಗಳನ್ನು ಸಿನಿರಸಿಕರು ಇನ್ನು ಮರೆತ್ತಿಲ್ಲ. ಅದೇ ರೀತಿ ಜಗ್ಗೇಶ್ ಹಾಗೂ ವಿಕಾಸ್ ವಿಕ್ಕಿಪಿಡಿಯ ಇದೀಗ ಮಂಜ ಹಾಗೂ ಮಾಣಿ ಆಗಿ ಕಾಣಿಸಿಕೊಂಡಿದ್ದಾರೆ.

ಮಂಜನ(ಜಗ್ಗೇಶ್) ಬಳಿ ಕಥೆ ಹೇಳಲು ಮಾಣಿ(ವಿಕಾಸ್) ಬಂದಿದ್ದಾನೆ. ನಮ್ಮ ತಂದೆ ನಾಣಿ, ನಿಮಗೆ ಗೊತ್ತಿರಬೇಕಲ್ಲ ಎನ್ನುತ್ತಿದ್ದಂತೆ ಮಂಜ ಕಣ್ಣೇ ಕಾಣಲ್ಲ ಎನ್ನುತ್ತೀರಾ ಸಿನ್ಮಾ ಹೇಗೆ ಮಾಡ್ತೀರಿ ಎಂದು ಹೇಳಿದ್ದಾರೆ. ಕಥೆ ಹೇಳಿ ಎಂದಾಗ 'KGF' ತಾಯಿ- ಮಗನ ಕಥೆ ಹೇಳಲು ಮುಂದಾಗ್ತಾನೆ ಮಾಣಿ. ಇದು ಈಗಾಗಲೇ ಸಿನಿಮಾ ಮಾಡಿ ಆಗಿದೆ ಬೇರೆ ಸ್ವಂತ ಕಥೆ ಇಲ್ಲದೇ ಎಂದಾಗ ಮಾಣಿ ಎಲ್ಲರ ಕಾಲು ಎಳೆಯುತ್ತಾ ಎಲ್ಲರನ್ನು ಮುಂದೆ ಕರೆದುಕೊಂಡು ಹೋಗು ಕತೆ ಹೇಳ್ತಾನೆ.

ಮಾಡ್ರನ್ ಕಥೇ 1911ರಲ್ಲಿ ನಡೆಯೋದು, ಪೂರ್ತಿ ಕೇಳಿ ಎಂದು ಹೇಳಿ ಮುಗಿಸುತ್ತಾನೆ. ಕೂಡಲೇ ಮಂಜ ಒಳ್ಳೆ ಕಥೆ, ಆದರೆ ಹಾಲಿವುಡ್‌ಗೆ ಸೂಟ್ ಆಗುತ್ತೆ ಎನ್ನುತ್ತಾನೆ. ಬೇಡ ಎಂದಾಗ ಇನ್ನೊಂದು 'ಡ್ರೋನ್' ಕಥೆ ಇದೆ ಹೇಳ್ಲಾ ಎಂದಾಗ ಬೇಡ ಎಂದು ಮಾಣಿನ ಕಳುಹಿಸಿಕೊಟ್ಟುಬಿಡುತ್ತಾನೆ. ಅಲ್ಲಿಂದ ಹೊರಡುವಾಗ 'ಎದ್ದೇಳು ಮಂಜುನಾಥ' ಚಿತ್ರದ ಡೈಲಾಗ್ ಹೊಡೆದು ಮಾಣಿ ಹೋಗುತ್ತಾನೆ.

ಕೂಡಲೇ ಗುರುಗೆ ಫೋನ್ ಮಾಡಿ ನನ್ನ ಬಳಿ 1911 ನಡೆಯುವ ಕಥೆ ಇದೆ ಎಂದು ಹೇಳುತ್ತಿದ್ದಂತೆ ಮಾಣಿ ಕೇಳಿಸಿಕೊಂಡು ಒಳಗೆ ಬರುತ್ತಾನೆ. ಕೂಡಲೇ ಮಂಜ ಶಾಕ್ ಆಗಿ ಸುಮ್ಮನಾಗುತ್ತಾನೆ. ಹೀಗೆ ತಮಾಷೆಯಾಗಿ 'ರಂಗನಾಯಕ' ಸಿನಿಮಾ ಪ್ರಚಾರ ವಿಡಿಯೋ ಕಟ್ಟಿಕೊಡಲಾಗಿದೆ. ಇತ್ತೀಚಿಗೆ ಸೋಶಿಯಲ್ ಮೀಡಿಯಾ ಕಂಟೆಂಡ್ ಕ್ರಿಯೇಟರ್ ವಿಕ್ಕಿ ವಿಕಾಸ್ ಕನ್ನಡ ಸಿನಿಮಾ ಪ್ರಚಾರದಲ್ಲಿ ಭಾಗಿ ಆಗುತ್ತಿದ್ದಾರೆ. ಈ ಹಿಂದೆ 'ಘೋಸ್ಟ್' ಸಿನಿಮಾ ಬಿಡುಗಡೆ ವೇಳೆ ಇದೇ ರೀತಿ ಶಿವಣ್ಣನ ಜೊತೆ ವಿಕಾಸ್ ಸ್ಪೆಷಲ್ ವಿಡಿಯೋ ಮಾಡಿದ್ದರು. ಶುಕ್ರವಾರವೇ 'ರಂಗನಾಯಕ' ಸಿನಿಮಾ ತೆರೆಗೆ ಬರಲಿದೆ.

More from Filmibeat

English summary
Vicky Pedia vikas join hands with Jaggesh for Ranganayaka promotion.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X