'ರಾಂಬೋ 2', 'ವಿಕ್ಟರಿ 2' ಚಿತ್ರಗಳ ಸಂಭ್ರಮದಲ್ಲಿ ದರ್ಶನ್

ಕಳೆದ ವರ್ಷ ದೊಡ್ಡ ಸಕ್ಸಸ್ ಕಂಡ ಕನ್ನಡ ಸಿನಿಮಾಗಳ ಪೈಕಿ ಒಂದು 'ರಾಂಬೋ 2'. ಈ ಸಿನಿಮಾದ ಹಿಂದೆ ಬಂದ 'ವಿಕ್ಟರಿ 2' ಕೂಡ 50 ದಿನ ಪೂರೈಸಿತ್ತು. ಈಗ ಈ ಎರಡು ಸಿನಿಮಾಗಳ ಯಶಸ್ಸಿಯ ಸಂಭ್ರಮಾಚರಣೆ ಕಾರ್ಯಕ್ರಮ ನಡೆದಿದೆ.

ನಟ ದರ್ಶನ್ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಎರಡು ಚಿತ್ರತಂಡಗಳ ಬೆನ್ನು ತಟ್ಟಿದ್ದಾರೆ. 'ರಾಂಬೋ 2' ಚಿತ್ರದ ನಟ ಶರಣ್, ಆಶಿಕಾ ರಂಗನಾಥ್ ಸೇರಿದಂತೆ ಚಿತ್ರತಂಡಕ್ಕೆ ಪ್ರಶಸ್ತಿ ನೀಡಿದ್ದಾರೆ.

'ವಿಕ್ಟರಿ 2' ಹಾಗೂ 'ರಾಂಬೋ 2' ಎರಡು ಸಿನಿಮಾಗಳು ಶರಣ್ ಅಭಿನಯದ ಸಿನಿಮಾವಾಗಿದ್ದು, 'ರಾಂಬೋ 2' ಶತಕ ಬಾರಿಸಿತ್ತು. ಈ ಎರಡು ಚಿತ್ರಗಳಿಗೆ ತರುಣ್ ಸುಧೀರ್ ಕ್ರಿಯೇಟವ್ ಹೆಡ್ ಆಗಿದ್ದರು.

victory 2 and rambo 2 success party

ಈ ಕಾರ್ಯಕ್ರಮದ ಬಗ್ಗೆ ಟ್ವಿಟ್ಟರ್ ತರುಣ್ ಸುಧೀರ್ ಖಾತೆಯಲ್ಲಿ "Priceless moment, 2018 ರಲ್ಲಿ ನಾನು ಕೆಲಸ ಮಾಡಿದ 2 ಚಿತ್ರಗಳು 'raambo 2' 100 ದಿನ & 'viictory 2' 50 ದಿನಗಳು ಪೂರೈಸಿತು. ಈ ಎರಡು ಚಿತ್ರಗಳ ನೆನಪಿನ ಕಾಣಿಕೆಯನ್ನು DBoss ರಿಂದ ಪಡೆದ ಕ್ಷಣ ಅವಿಸ್ಮರಣೀಯ. ಎರಡು ಚಿತ್ರ ತಂಡಕ್ಕೆ ನನ್ನ ಕೃತಜ್ಞತೆಗಳು. ನಿಮ್ಮ ಪ್ರೀತಿ ಹಾರೈಕೆ ಸದಾ ಹೀಗೇ ಇರಲಿ.'' ಎಂದು ಬರೆದುಕೊಂಡಿದ್ದಾರೆ.

ಸದ್ಯ ದರ್ಶನ್ ಅವರ ಮುಂದಿನ ಸಿನಿಮಾ ರಾಬರ್ಟ್ ಗೆ ತರುಣ್ ಸುದೀರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

More from Filmibeat

English summary
Actor Sharan's 'Victory 2' and 'Rambo 2' kannada movies success party.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X