ಈ ಬಾರಿಯ ರಾಜ್ಯೋತ್ಸವ ಅಪ್ಪು, ಶರಣ್ ಪಾಲಿಗೆ ವಿಶೇಷ
ರಾಜ್ಯೋತ್ಸವ ಕನ್ನಡಿಗರ ಪಾಲಿಗೆ ಒಂದು ವಿಶೇಷ ದಿನ. ಆದರೆ, ಈ ಬಾರಿಯ ಕನ್ನಡ ರಾಜ್ಯೋತ್ಸವ ನಟ ಪುನೀತ್ ರಾಜ್ ಕುಮಾರ್ ಹಾಗೂ ಶರಣ್ ಪಾಲಿಗೆ ಮತ್ತೊಂದು ಖುಷಿಗೆ ಕಾರಣ ಆಗಲಿದೆ.
ನಟ ಪುನೀತ್ ರಾಜ್ ಕುಮಾರ್ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ಅವರ ಕಾಂಬಿನೇಶನ್ ನ ಎರಡನೇ ಸಿನಿಮಾದ ಟೈಟಲ್ ಆ ದಿನ ಘೋಷಣೆ ಆಗಲಿದೆ. ಈ ಸಿನಿಮಾದ ಹೆಸರಿನ ಬಗ್ಗೆ ಎಲ್ಲರಿಗೂ ಕುತುಹಲವಿದ್ದು, ಅದಕ್ಕೆ ಆ ದಿನ ಉತ್ತರ ಸಿಗಲಿದೆ.

ಇನ್ನೊಂದು ಕಡೆ ಶರಣ್ ಅವರ 'ವಿಕ್ಟರಿ 2' ಸಿನಿಮಾ ಅದೇ ದಿನ ಬಿಡುಗಡೆಯಾಗುತ್ತಿದೆ. 'ವಿಕ್ಟರಿ' ಸಿನಿಮಾದ ಯಶಸ್ಸಿನ ನಂತರ ಮತ್ತೆ ಶರಣ್ ಅದೇ ಹೆಸರಿನ ಸಿನಿಮಾ ಮಾಡಿದ್ದಾರೆ. ಹರಿ ಸಂತೋಷ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ.

ಈ ಸಿನಿಮಾಗಳ ಜೊತೆಗೆ ಬೇರೆ ಬೇರೆ ಸಿನಿಮಾಗಳ ಪೋಸ್ಟರ್ ಗಳು, ಟೀಸರ್, ಟ್ರೇಲರ್ ಗಳು ರಾಜ್ಯೋತ್ಸವದ ವಿಶೇಷವಾಗಿ ಬಿಡುಗಡೆಯಾಗುವ ಸಾಧ್ಯತೆ ಇದೆ.
English summary
Kannada actor Puneeth Rajkumar's new movie title and sharan's 'Victory 2' kannada movie releasing on November 1st.
kannada rajyotsava puneeth rajkumar santhosh ananddram sharan sandalwood ಪುನೀತ್ ರಾಜ್ ಕುಮಾರ್ ಶರಣ್ ಸಂತೋಷ್ ಆನಂದ್ ರಾಮ್ ಕನ್ನಡ ರಾಜ್ಯೋತ್ಸವ ಸ್ಯಾಂಡಲ್ ವುಡ್


Click it and Unblock the Notifications