'ವಿಕ್ಟರಿ-2' ತಂಡದಿಂದ ರಷ್ಯಾದಲ್ಲಿ ಕನ್ನಡ ಡಿಂಡಿಮ
Recommended Video

'ವಿಕ್ಟರಿ'... 2013 ರಲ್ಲಿ ತೆರೆಕಂಡ ಈ ಚಿತ್ರ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ನಂದಕಿಶೋರ್ ನಿರ್ದೇಶನದ ಈ ಚಿತ್ರ ಬಾಕ್ಸ್ ಬಸ್ಟರ್ ಆಗಿತ್ತು. ಶರಣ್, ಅಸ್ಮಿತಾ ಸೂದ್ ಮುಖ್ಯಭೂಮಿಕೆಯಲ್ಲಿದ್ದ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಲೂಟಿ ಹೊಡೆದಿತ್ತು.
ಇದೀಗ 'ವಿಕ್ಟರಿ-2' ಚಿತ್ರದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸ್ಯಾಂಡಲ್ ವುಡ್ ಅಂಗಳದಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿರುವ, ಕುತೂಹಲ ಕೆರಳಿಸಿರುವ ಸಿನಿಮಾ 'ವಿಕ್ಟರಿ-2'.
ಹರಿ ಸಂತು ನಿರ್ದೇಶನದಲ್ಲಿ, ಮಾನಸ ತರುಣ್ ಮತ್ತು ತರುಣ್ ಶಿವಪ್ಪ ನಿರ್ಮಾಣದಲ್ಲಿ ಮೂಡಿಬರುತ್ತಿರುವ ಚಿತ್ರ 'ವಿಕ್ಟರಿ-2'. ಶರಣ್, ಅಪೂರ್ವ, ರವಿಶಂಕರ್, ಅಸ್ಮಿತಾ ಸೂದ್ ಸೇರಿದಂತೆ ಪ್ರತಿಭಾವಂತ ಕಲಾವಿದರು ಅಭಿನಯಿಸಿರುವ ಸಿನಿಮಾ ಇದು.

ಮೇಕಿಂಗ್ ಹಂತದಲ್ಲಿ ಸಾಕಷ್ಟು ವಿಚಾರಗಳಿಂದ ಸದ್ದು ಸುದ್ದಿ ಮಾಡಿದ್ದ ಈ ಚಿತ್ರದ ಒಂದು ಹಾಡನ್ನ ಇತ್ತೀಚೆಗಷ್ಟೇ ಚಿತ್ರತಂಡ ರಷ್ಯಾಗೆ ಹೋಗಿ ಚಿತ್ರೀಕರಿಸಿಕೊಂಡು ಬಂದಿದೆ. ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ ಸಂಗೀತವಿರುವ ಪ್ಲೀಸ್ ಟ್ರಸ್ಟು... ನಾನು ಚೀಪ್ ಅಂಡ್ ಬೆಸ್ಟು.. ಅನ್ನೋ ಹಾಡಿನ ಚಿತ್ರೀಕರಣವನ್ನ ರಷ್ಯಾದ ಬಾಕು ಅನ್ನೋ ಸಿಟಿಯಲ್ಲಿ ಚಿತ್ರೀಕರಣ ಮಾಡಲಾಗಿದೆ.
ಧನು ನೃತ್ಯ ನಿರ್ದೇಶನದಲ್ಲಿ ಚಿತ್ರೀಕರಿಸಿದ ಈ ಹಾಡಲ್ಲಿ ಶರಣ್ ಮತ್ತು ಅಸ್ಮಿತಾ ಸೂದ್ ಡ್ಯಾನ್ಸ್ ಮಾಡಿದ್ದಾರೆ. ವಿಶೇಷ ಅಂದ್ರೆ, ಈ ಹಾಡಿನಲ್ಲಿ ಕರ್ನಾಟಕ ಕಲೆ ಸಂಸ್ಕೃತಿಯನ್ನ ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಹುಲಿ ಕುಣಿತ, ಯಕ್ಷಗಾನ, ಹೀಗೆ ಕರುನಾಡಿನ ನಾನಾ ಕಲಾಪ್ರಕಾರಗಳನ್ನ ಬ್ಲೆಂಡ್ ಮಾಡಿಕೊಂಡು, ಸುಮಾರು 10 ದಿನಗಳ ಕಾಲ ಚಿತ್ರೀಕರಣ ಮಾಡಿದ್ದಾರೆ.


Click it and Unblock the Notifications











