ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ ವಯ್ಯಾರ ; ಮೋಡಿ ಮಾಡೋ ಮುದ್ದು ಗೊಂಬೆ ಎಂದ ಜನ...!
ಸೋಶಿಯಲ್ ಮೀಡಿಯಾದಲ್ಲಿ ಬೆಳಗಾದರೆ ಆ ಸೆಲೆಬ್ರೆಟಿಗಳು ಹಂಗೆ, ಈ ಸೆಲೆಬ್ರೆಟಿಗಳು ಹಿಂಗೇ ಎನ್ನುವಂತಹ ಪೋಸ್ಟುಗಳು, ಸ್ಟಾರ್ ಸೆಲೆಬ್ರೆಟಿಗಳ ಕುರಿತಾದ ಟ್ರೋಲುಗಳು, ಕಿಂಡಲ್ಲುಗಳು ಬರೋದು ಕಾಮನ್ನು. ಸೆಲೆಬ್ರೆಟಿಗಳೆಂದ ಮೇಲೆ ಅಷ್ಟೂ ಮಾಡದೇ ಇದ್ದರೆ ಹೇಗೆ? ಇಂತಹ ಸಾಕಷ್ಟು ವಿವಾದಾತ್ಮಕ ವಿಚಾರಗಳಿಗೆ ಬಹುತೇಕ ಸೆಲೆಬ್ರೆಟಿಗಳು ಉರಿದು ಬೀಳುತ್ತಾರೆ. ಪ್ರತಿಕ್ರಿಯೆ ನೀಡುತ್ತಾರೆ. ಕೆಲವರಂತೂ ಕಾನೂನಿನ ಮೆಟ್ಟಿಲನ್ನು ಹತ್ತುತ್ತಾರೆ. ಇನ್ನೂ ಕೆಲವರು ಇಂತಹ ಯಾವ ಅನಗತ್ಯ ವಿಚಾರಗಳಿಗೆ ತಲೆ ಕೆಡಿಸಿಕೊಳ್ಳದೇ ತಮ್ಮದೇ ಕೆಲಸಗಳಲ್ಲಿ ಬ್ಯುಸಿಯಾಗಿತ್ತಾರೆ. ಉದಾಹರಣೆಗೆ ಚಂದನ್ ಶೆಟ್ಟಿ ಪತ್ನಿ ನಿವೇದಿತಾ ಗೌಡ.
ಹೌದು, ತಾನು ಧರಿಸುವ ಬಟ್ಟೆಯಿಂದಲೇ ಮೇಲಿಂದ ಮೇಲೆ ಟ್ರೋಲ್ ಆಗುವ ನಿವೇದಿತಾ ಗೌಡ, ಸದ್ಯಕ್ಕೆ ಮತ್ತೊಮ್ಮೆ ತಮ್ಮ ಮಾದಕ ಫೋಟೋ ಹಂಚಿಕೊಂಡಿದ್ದಾರೆ. ಕಾತುರದಿಂದ ಕಾಯುತ್ತಿರುವಂತಹ ವಿಡಿಯೋವೊಂದನ್ನು ಕೂಡ ಶೇರ್ ಮಾಡಿಕೊಂಡಿದ್ದಾರೆ. ಸದ್ಯಕ್ಕೆ ನಿವೇದಿತಾ ಅವರ ಈ ವಿಡಿಯೋ ಮತ್ತು ಫೋಟೋ ಅನೇಕರ ಕಣ್ಮನವನ್ನ ಸೆಳೆಯುತ್ತಿವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿವೆ.

ನಿವೇದಿತಾ ಗೌಡ ಅವರ ಈ ಹಾಟ್ ಅವತಾರಕ್ಕೆ 22 ಘಂಟೆಯಲ್ಲಿ ಹೆಚ್ಚು ಕಡಿಮೆ 35000 ಜನ ಉಘೇ ಉಘೇ ಅಂದಿದ್ದಾರೆ. ಇನ್ನೂ ವಿಡಿಯೋ ಮೆಚ್ಚಿಕೊಂಡವರ ಸಂಖ್ಯೆ 50.000ಕ್ಕೆ ಬಂದು ತಲುಪಿದೆ. ಇನ್ನೂ ಕೆಲವರ ಕಣ್ಣೀಗೆ ನಿವೇದಿತಾ ಅವರ ಈ ತಳಕು ಬಳಕು ಕಾಮಪ್ರಚೋದಕದಂತೆ ಕಂಡರೆ, ಕೆಲವರ ಕಣ್ಣೀಗೆ ನಿವೇದಿತಾ ಮುದ್ದು ಬೊಂಬೆಯಂತೆ ಕಾಣ್ತಿದ್ದಾರೆ. ನಮ್ಮ ನಿವಿ ಹಾಕುವ ಎಲ್ಲಾ ವಿಡಿಯೋ ಹಾಗೂ ಫೋಟೋಗಳು ಚೆನ್ನಾಗಿಯೇ ಕಾಣ್ತಾವೆ ಎನ್ನುತ್ತಿದ್ದಾರೆ. ನೋಡುವ ದೃಷ್ಟಿ ಸರಿ ಇದ್ದರೆ ಎಲ್ಲವೂ ಚೆನ್ನಾಗಿಯೇ ಇರುತ್ತೆ ಎಂಬ ಅಭಿಪ್ರಾಯವನ್ನೂ ವ್ಯಕ್ತಪಡಿಸುತ್ತಿದ್ದಾರೆ.
ಇನ್ನೂ ಬಹುತೇಕರಿಗೆ ನಿವೇದಿತಾ ಗೌಡ ಹಾಕಿಕೊಂಡಿರುವ ಡ್ರೆಸ್ ಬಗ್ಗೆ ಚಿಂತೆ ಕಾಡ್ತಿದ್ದರೆ, ಉಳಿದವರ ಕಣ್ಮುಂದೆ ಚಂದನ್ ಶೆಟ್ಟಿ ಕಥೆ-ವ್ಯಥೆ ಪ್ರಸಾರವಾಗ್ತಿದೆ. ಥರೇವಾರಿ ಅಭಿಪ್ರಾಯಗಳಿಂದ ನಿವೇದಿತಾ ಅವರ ಕಮೆಂಟ್ ಸೆಕ್ಷನ್ ತುಂಬಿ ತುಳುಕುತ್ತಿದೆ. ಆ ಪೈಕಿ ಕಳಕು ಕಮೆಂಟ್ ಗಳೂ ಕೂಡ ಇವೆ.

ಅಂದ್ಹಾಗೇ ಕೆಲ ದಿನಗಳ ಹಿಂದೆ ನಿವೇದಿತಾ ಗೌಡ ಈಜುಕೋಳಕ್ಕಿಳಿದು ಫೋಟೋ ಕ್ಲಿಕಿಸಿಕೊಂಡಿದ್ದರು. ತಮ್ಮ ಅಭಿಮಾನಿಗಳಿಗಾಗಿ ಆ ಫೋಟೋಗಳನ್ನ ಹಂಚಿಕೊಂಡಿದ್ದರು. ಆಗಲೂ ಕೂಡ ಕೆಲವರು ನಿವೇದಿತಾ ಗೌಡ ಅವರ ಸೌಂದರ್ಯದ ಬಗ್ಗೆ ಗುಣಗಾನ ಮಾಡಿದ್ದರು, ಇನ್ನೂ ಕೆಲವರು ಕರ್ನಾಟಕದ ಜನ ನಿಮ್ಮನ್ನ ಈ ಥರ ನೋಡಲು ಇಷ್ಟ ಪಡುವುದಿಲ್ಲ ಎನ್ನುವ ಅಭಿಪ್ರಾಯವನ್ನ ವ್ಯಕ್ತಪಡಿಸಿದ್ದರು.
ಒಟ್ಟಿನಲ್ಲಿ ರೀಲ್ಸ್ ಮಾಡುವುದನ್ನೇ ಹವ್ಯಾಸವನ್ನಾಗಿಸಿಕೊಂಡಿರುವ ನಿವೇದಿತಾ ಗೌಡ, ಸದ್ಯಕ್ಕೆ ಮತ್ತೊಮ್ಮೆ-ಮಗದೊಮ್ಮೆ ಟ್ರೋಲ್ ಹೈಕ್ಳ ಬಾಯಿಗೆ ಆಹಾರವಾಗಿದ್ದಾರೆ. ಪಡ್ಡೆಗಳ ಹೃದಯಕ್ಕೆ ಕನ್ನ ಹಾಕ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಟ್ರೆಂಡಿಂಗ್ ನಲ್ಲಿದ್ದಾರೆ.


Click it and Unblock the Notifications











