»   » ಸೂಪರ್.! ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ಡ್ಯಾನ್ಸ್ ವಿಡಿಯೋ

ಸೂಪರ್.! ಚಿರಂಜೀವಿ, ಅಲ್ಲು ಅರ್ಜುನ್, ರಾಮ್ ಚರಣ್ ಡ್ಯಾನ್ಸ್ ವಿಡಿಯೋ

Posted By:
Subscribe to Filmibeat Kannada

ಟಾಲಿವುಡ್ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ರವರ ವಿವಾಹ ಕಲ್ಯಾಣ್ ಜೊತೆ ಅದ್ಧೂರಿಯಾಗಿ ನಡೆದಿದೆ.

ಈಗಾಗಲೇ ಶ್ರೀಜಾ-ಕಲ್ಯಾಣ್ ರವರ ಮದುವೆಯ ಫೋಟೋ ಆಲ್ಬಂನ ನೀವು 'ಫಿಲ್ಮಿಬೀಟ್ ಕನ್ನಡ'ದಲ್ಲಿ ಎಕ್ಸ್ ಕ್ಲೂಸಿವ್ ಆಗಿ ನೋಡಿದ್ದೀರಾ. [ಎಕ್ಸ್ ಕ್ಲೂಸಿವ್ ; ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ' ಮಹೋತ್ಸವ]

ಈಗ ಇದೇ ಪುಟದಲ್ಲಿ ನಿಮಗೆ ಇನ್ನೊಂದು ಸರ್ ಪ್ರೈಸ್ ಕಾದಿದೆ. ಶ್ರೀಜಾ-ಕಲ್ಯಾಣ್ ರವರ ಸಂಗೀತ್ ಕಾರ್ಯಕ್ರಮದಲ್ಲಿ ಮೆಗಾ ಫ್ಯಾಮಿಲಿ ಗ್ಯಾಂಗ್ 'ಗ್ಯಾಂಗ್ ಲೀಡರ್' ಚಿತ್ರದ ಹಾಡಿಗೆ ಸೂಪರ್ ಸ್ಟೆಪ್ ಹಾಕಿರುವ ವಿಡಿಯೋ ಔಟ್ ಆಗಿದೆ. ನೋಡಿ....

ಮೆಗಾ ಸ್ಟಾರ್ ಚಿರಂಜೀವಿ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ರಾಮ್ ಚರಣ್ ತೇಜ, ವರುಣ್ ತೇಜ್, ಸಾಯಿ ಧರಮ್ ತೇಜ್, ಅಲ್ಲು ಸಿರೀಶ್ ಒಂದೇ ವೇದಿಕೆಯಲ್ಲಿ 'ಗ್ಯಾಂಗ್ ಲೀಡರ್' ಚಿತ್ರದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.

ನಿನ್ನೆಯಷ್ಟೇ, ತಮ್ಮ ಹಿರಿಯ ಪುತ್ರಿ ಸುಶ್ಮಿತಾ ಜೊತೆ ಚಿರಂಜೀವಿ ಸ್ಟೆಪ್ ಹಾಕಿರುವ ವಿಡಿಯೋ ಔಟ್ ಆಗಿತ್ತು. [ವಿಡಿಯೋ ; ಮಗಳ ಮದುವೆಯಲ್ಲಿ ಚಿರಂಜೀವಿ ಸೂಪರ್ ಡ್ಯಾನ್ಸ್]

ಹಾಗೇ, ನವ ವಧು-ವರ ಶ್ರೀಜಾ-ಕಲ್ಯಾಣ್ ಕೂಡ ರೋಮ್ಯಾಂಟಿಕ್ ಹಾಡಿಗೆ ಡ್ಯುಯೆಟ್ ಹಾಡಿದ ವಿಡಿಯೋ ಕೂಡ ಬಿಡುಗಡೆ ಆಗಿತ್ತು. [ವಿಡಿಯೋ ; ಮದುವೆ ಖುಷಿಯಲ್ಲಿ ಕುಣಿದು ಕುಪ್ಪಳಿಸಿದ ಚಿರು ಪುತ್ರಿ ಶ್ರೀಜಾ]

ನಾಳೆ (ಮಾರ್ಚ್ 31) ಶ್ರೀಜಾ-ಕಲ್ಯಾಣ್ ರವರ ಆರತಕ್ಷತೆ ಕಾರ್ಯಕ್ರಮ ಹೈದರಾಬಾದ್ ನಲ್ಲಿ ನಡೆಯಲಿದೆ. ['ಮೆಗಾ' ಮದುವೆ; ಅದ್ಧೂರಿಯಾಗಿ ನಡೆದ ಶ್ರೀಜಾ 'ಎರಡನೇ' ಕಲ್ಯಾಣ]

English summary
Tollywood Actor Chiranjeevi's daughter Srija's sangeet ceremony took place on Sunday (March 27th) at Prakruthi Resort, Bengaluru. Watch the video of Megastar Chiranjeevi's dance with Ram Charan Teja, Allu Arjun, Varun Tej and Allu Sirish at Srija's Sangeet Ceremony.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada